23/12/2024
IMG-20241206-WA0073

ಯುವ ಹೋರಾಟಗಾರ – ಮಹೇಶ್ ಎಸ್ ಶೀಗಿಹಳ್ಳಿ ಸರ್ಕಾರಕ್ಕೆ ಆಗ್ರಹ

ಬೆಳಗಾವಿ-೦೬:ಕಣಬರಗಿ ಸ್ಕೀಮ್ ನಂ61 ರೈತರ ಹಿತರಕ್ಷಣಾ ಕಮಿಟಿ ಬೆಳಗಾವಿ. ವತಿಯಿಂದ
ಇಂದು ಶುಕ್ರವಾರ ಡಾಕ್ಟರ್ ಬಾಬಾ ಸಾಹೇಬ್ ಅಂಬೇಡ್ಕರ್ ಫೊಟೊಗೆ ಪೂಜೆ ಸಲ್ಲಿಸಿ ಮಹಾ ಪರಿವರ್ತನಾ ದಿನಾಚರಣೆ ಆಚರಿಸಲಾಯಿತು .
ಹಾಗೆ ಬೆಳಗಾವಿ ನಗರಾಬಿವೃದ್ದಿ ಪ್ರಾಧಿಕಾರದ ವಿರುದ್ಧ ನಿರಂತರ ಧರಣಿ ಸತ್ಯಾಗ್ರಹ ನಡೆಸಲಾಯಿತು.
2007 ರಲ್ಲಿ ಕಣಬರಗಿ ರೈತರಿಂದ ಬೆಳಗಾವಿ ನಗರಾಬಿವೃದ್ದಿ ಪ್ರಾಧಿಕಾರ ಬುಡಾ ಲೇಔಟ್ ಗಾಗಿ 165 ಎಕರೆ ಜಮೀನು ಪಡೆದು ಇದುವರೆಗೂ ಬುಡ ಲೇಔಟ್ ಪ್ರಾರಂಭಿಸದೆ ರೈತರಿಗೆ ಅನ್ಯಾಯ ಮಾಡುತಿದ್ದಾರೆ . ಬೆಳಗಾವಿ ನಗರಾಬಿವೃದ್ದಿ ಪ್ರಾಧಿಕಾರದ ಬೇಜವಾಬ್ದಾರಿ ಕೆಲಸವನ್ನು ವಿರೋಧಿಸಿ ಇವತ್ತು ಕಣಬರಗಿ ಸ್ಕೀಮ್ ನಂ61 ರ ರೈತರಿಂದ ನಿರಂತರ ಧರಣಿ ಸತ್ಯಾಗ್ರಹ ನಡೆಸುತಿದ್ದು ಆದಷ್ಟು ಬೇಗ ಪೂರ್ಣವಾಗಿ ಲೇಔಟ್ ಪ್ರಾರಂಭಗೊಳಿಸಿ ರೈತರಿಗೆ ಪ್ಲಾಟ್ ಗಳನ್ನು ಹಸ್ತಾಂತರಿಸಬೇಕು ಇಲ್ಲವಾದರೆ ರೈತರಿಗೆ ವಾಪಸ್ಸು ಅವರ ಜಮೀನು ನೀಡಿ 18 ವರ್ಷಗಳ ಪರಿಹಾರ ಧನ ನೀಡುವಂತೆ ಬುಡಾ ಇಲಾಖೆಯ ವಿರುದ್ದ ಗೋಶನೆ ಕೂಗಿದರು ಸ್ಥಳಕ್ಕೆ ಬೇಟಿ ನೀಡಿದ ಬುಡಾ ಅದ್ಯಕ್ಷ್ಯರು ಹಾಗೂ ಆಯುಕ್ತರು ಧರಣಿಗೆ ಕೂತವರನ್ನು ಮಾತನಾಡಿಸಿ ಸ್ಕೀಮ್ ನಂ61 ರ ಲೇಔಟ್ ಯೋಜನೆ ಕೆಲವು ಅಡೆತಡೆಗಳಿಂದ ತಡವಾಯಿತು ಈಗಾಗಲೇ ಟೆಂಡರ್ ಹಾಕಲಾಗಿದೆ ಫೈನಲ್ ಜನವೇರಿ ತಿಂಗಳಲ್ಲಿ ಸಂಪೂರ್ಣ ಲೇಔಟ್ ಅಭಿವೃದ್ಧಿ ಆಗುತ್ತದೆ ದಯವಿಟ್ಟು ಸಹಕಾರ ನೀಡಿ ಹೋರಾಟ ಹಿಂಪಡೆಯಿರಿ ಎಂದು ಬುಡಾ ಅಧ್ಯಕ್ಷ್ಯ ಹಾಗೂ ಆಯುಕ್ತರು ಮನವಿ ಮಾಡಿಕೊಂಡರು . ಹೋರಾಟ ಕೈಬಿಡಲಾಯಿತು. ಹಾಗೂ ಸ್ಕೀಮ್ ನ ರೈತರು ಕೊನೆ ಅವಕಾಶ ನೀಡಿ ಬುಡಾ ಇಲಾಖೆಗೆ ಮಾಡು ಇಲ್ಲವೇ ಮಡಿ ಸಮಯ ಕೊಟ್ಟು 2025 ರ ಜನವರಿ ಯಲ್ಲಿ ಪೂರ್ಣ ಲೇಔಟ್ ಕಾಮಗಾರಿ ಪ್ರಾರಂಭವಾಗಿ ರೈತರಿಗೆ ಪ್ಲಾಟ್ ಗಳು ಹಸ್ತಾಂತರವಾಗದಿದ್ದರೆ ಬುಡಾ ಕಚೇರಿಗೆ ಬೀಗ ಜಡಿದು ಇಲಾಖೆಯನ್ನು ಕಾಲಿ ಮಾಡಿಸುವ ಕೆಲ್ಸ ಮಾಡುತ್ತೇವೆ ಎಂದು ರೈತರು ಆಗ್ರಹಿಸಿ ಹೋರಾಟವನ್ನು ಕೈ ಬಿಡಲಾಯಿತು ಈ ಸಂದರ್ಭದಲ್ಲಿ ಕಣಬರಗಿ ಸ್ಕೀಮ್ ನಂ 61 ರ ರೈತ ಹಿತರಕ್ಷಣಾ ಕಮೀಟಿ ಯ ಎಲ್ಲ ಸದಸ್ಯರು ಉಪಸ್ಥಿತರಿದ್ದರು .
ಸಿದ್ರಾಯಿ ಶಿಗಿಹಳ್ಳಿ
ಬಾಲಗೌಡ ಪಾಟೀಲ್
(ಮಹೇಶ್ ಶೀಗಿಹಳ್ಳಿ ಯುವ ಹೋರಾಟಗಾರ)
ಬಿ ಬಿ ಪಾಟೀಲ್
ನಂದಕುಮಾರ್ ಸಂಕೇಶ್ವರ
ಲಕ್ಷ್ಮಣ್ ಮುತಗೇಕರ್
ಬಸವಂತ ಮುತಗೇಕರ್
ಅಜಿತ್ ಪಾಟೀಲ್
ಪ್ರಕಾಶ್ ಶೀಗಿಹಳ್ಳಿ
ಮಾರುತಿ ಶೀಗಿಹಳ್ಳಿ
ಶಿವಾಜಿ ಪಾಟೀಲ್
ದಾಕಲೂ ಮಲಾಯಿ
ಸುಶಾಂತ್ ಮುಚಂಡೀಕರ್
ಇನ್ನು ಮಹಿಳಾ ಬಳಗ ಕೂಡ ಬಾಗಿಯಾಗಿದ್ದರು ಇನ್ನುಳಿದ ಸ್ಕೀಮ್ 61 ರ ರೈತರು ಹಾಜರಿದ್ದರು.

Leave a Reply

Your email address will not be published. Required fields are marked *

error: Content is protected !!