ಹೊಂಬೆಳಕು ಸಾಂಸ್ಕೃತಿಕ ಸಂಘ ಸಾಹಿತ್ಯಿಕ ಮತ್ತು ಸಾಮಾಜಿಕ ಚಟುವಟಿಕೆಗಳಲ್ಲಿ ತನ್ನನ್ನು ತಾನು ತೊಡಗಿಸಿಕೊಂಡು ಸ್ವಸ್ಥ ಸಮಾಜ ನಿರ್ಮಾಣಕ್ಕೆ ಶ್ರಮಿಸುತ್ತಿರುವುದು ಶ್ಲಾಘನೀಯವಾಗಿದೆ ಎಂದು ಕರ್ನಾಟಕ ಸಾಹಿತ್ಯ ಅಕಾಡೆಮಿ ಸದಸ್ಯ ಮಹಾದೇವ ಬಸರಕೋಡ ಹೇಳಿದರು
ಹೊಂಬೆಳಕು ಸಾಂಸ್ಕೃತಿಕ ಸಂಘ ಹಮ್ಮಿಕೊಂಡ ಸನ್ಮಾನ ಕಾರ್ಯಕ್ರಮದಲ್ಲಿ ಅವರು ಸನ್ಮಾನ ಸ್ವೀಕರಿಸಿ ಮಾನಾಡಿದರು.
ಪ್ರಸಕ್ತ ಕಾಲಘಟ್ಟದಲ್ಲಿ ಸ್ವಾರ್ಥವೆ ಬದುಕಿನ ಮೂಲಧ್ಯೇಯವಾಗಿರುವ ಕಾರಣ ಮಾನವೀಯ ಸಂಬಧಗಳು ಸಡಿಲಗೊಳ್ಳುತ್ತಿವೆ. ಸಾಹಿತ್ಯ ಮಾತ್ರವೇ ಇಂಥದೊಂದು ವಿಷಮ ಸ್ಥಿತಿಯನ್ನು ಸ್ವಲ್ಪವಾದರೂ ಸರಿಪಡಿಸಬಲ್ಲದು. ಕರ್ನಾಟಕ ಸಾಹಿತ್ಯ ಅಕಾಡೆಮಿ ಈ ನಿಟ್ಟಿನಲ್ಲಿ ಹಲವಾರು ಕಾರ್ಯಕ್ರಮ ಹಮ್ಮಿಕೊಳ್ಳುತ್ತಿದೆ ಎಂದರು..
ಇದೇ ಸಂದರ್ಭದಲ್ಲಿ ಅಮೀನಗಡದ ಲೇಖಕ, ಗಮಕ ಕಲಾವಿದ ಶಿವಶಂಕ್ರಪ್ಪ ಶಿರೋಳ ಅವರನ್ನು ಸನ್ಮಾನಿಸಲಾಯಿತು.
ಹೊಂಬೆಳಕು ಸಾಂಸ್ಕೃತಿಕ ಸಂಘದ ಅಧ್ಯಕ್ಷ ಸ. ರಾ ಸುಳಕೋಡ, ಕಾರ್ಯದರ್ಶಿ ಆರ್. ಬಿ. ಬನಶಂಕರಿ, ನಿರ್ದೇಶಕ ಅಶೋಕ ಉಳ್ಳೆಗಡ್ಡಿ ಹಾಜರಿದ್ದರು.