ಬೆಳಗಾವಿ-೦೨: ಬೆಳಗಾವಿಯಲ್ಲಿ ನಿರ್ಮಾಣವಾಗಿರುವ ಸೂಪರ್ ಸ್ಪೆಷಾಲಿಟಿ ಸರ್ಕಾರಿ ಆಸ್ಪತ್ರೆ ಬೇಗನೆ ಉದ್ಘಾಟಣೆ ಮಾಡಬೆಕೆಂದು ಆಗ್ರಹಿಸಿ ಹಿಂದೆ ಕೆ ಫರಿಷಸ್ತೆ ಫೌಂಡೇಷನ್ ವತಿಯಿಂದ ಡಿಸಿ ಕಚೇರಿಗೆ ತೆರಳಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಯಿತು.
ಸೋಮವಾರ ನಗರದ ಡಿಸಿ ಕಚೇರಿಗೆ ತೆರಳಿದ ಹಿಂದೆ ಕೆ ಫರಿಷಸ್ತೆ ಫೌಂಡೇಷನ್ ಕಾರ್ಯಕರ್ತರು, ಬಿಮ್ಸ್ ಕ್ಯಾಂಪಸ್‌ನಲ್ಲಿ ನಿರ್ಮಿಸಿಲಾದ ಬೆಳಗಾವಿಯ ಸೂಪರ್ ಸ್ಪೆಷಾಲಿಟಿ ಸರ್ಕಾರಿ ಆಸ್ಪತ್ರೆ ನಿಮ್ಮ ಗಮನಕ್ಕೆ ತರಲು ನಾವು ಬಯಸುತ್ತೇವೆ. ಆಸ್ಪತ್ರೆಯ ಕಾಮಗಾರಿ ಮುಗಿದು ಹಲವು ದಿನಗಳು ಕಳೆದರು ಇನ್ನು ಆರಂಭವಾಗಿಲ್ಲ. ಈ ಆಸ್ಪತ್ರೆಯಿಂದ ಬೆಳಗಾವಿ ಮತ್ತು ಸುತ್ತಮುತ್ತಲಿನ ಜನರಿಗೆ ಅತ್ಯಗತ್ಯ ಸೇವೆಯಾಗಿದೆ. ಖಾಸಗಿ ಆಸ್ಪತ್ರೆಗಳ ಕಡಿಮೆ ವೇಚ್ಚವನ್ನು ಗಮನಿಸಿದರೆ. ಇದು ಇಲ್ಲಿನ ಜನರಿಗೆ ಸುಲಭ ಮತ್ತು ಕೈಗೆಟುಕುವ ಆರೋಗ್ಯದ ಅಗತ್ಯ ಮೂಲವಾಗಿದೆ.
ಆಸ್ಪತ್ರೆಯ ಕಾಮಗಾರಿಗಾಗಿ ಸರ್ಕಾರದಿಂದ 180 ಕೋಟಿ ರೂ. ಗಳು ಬಿಡಗಡೆ ಆಗಿದರು ಕುಡಾ ಇನ್ನು ಆಸ್ಪತ್ರೆ ಉದ್ಘಾಟನೆ ಆಗಿಲ್ಲ. ಹಾಗಾಗಿ ಆಸ್ಪತ್ರೆಯನ್ನು ಶೀಘ್ರದಲ್ಲಿ ಉದ್ಘಾಟಣೆ ಮಾಡಿ ಕಾಮಗಾರಿ ಆರಂಭಿಸಬೇಕು. ಅಗತ್ಯ ಸಿಬ್ಬಂದಿ ನೇಮಕಾತಿ ಮತ್ತು ವೈದ್ಯಕೀಯ ಉಪಕರಣಗಳನ್ನು ವ್ಯವಸ್ಥೆ ಮಾಡಬೇಕು ಎಂದು ಆಗ್ರಹಿಸಿದರು.