23/12/2024
IMG-20241202-WA0000

ಬೆಳಗಾವಿ-೦೨: ಇಂದಿನ ಕಾಲಘಟ್ಟದಲ್ಲಿ ಪ್ರಶಸ್ತಿಗಾಗಿ ಬೇಡಿಕೆ, ಪದಕಗಳ ಚಿಂತೆಸುವವರ ಮಧ್ಯೆ ಯಾವುದಕ್ಕೂ ಆಸೆ ಇಟ್ಟುಕೊಳ್ಳದೆ ತನ್ನ ಆತ್ಮ ಸಂತೃಪ್ತಿಗಾಗಿ ಸಾಹಿತ್ಯ ಕೆಲಸ ಮಾಡಿದವರು ಆಶಾ ಕಡಪಟ್ಟಿ ನಮ್ಮೆಲ್ಲರಿಗೂ ಆದರ್ಶಪ್ರಾಯರು ಎಂದು ಲೇಖಕಿಯರ ಸಂಘದ ಅಧ್ಯಕ್ಷ ಸುಮಾ ಕಿತ್ತೂರ ಹೇಳಿದರು.

ಜಿಲ್ಲಾ ಲೇಖಕಿಯರ ಸಂಘದ ವತಿಯಿಂದ ಆಯೋಜಿಸಿಲಾದ ದತ್ತಿ ದಾನಿಗಳ ಕಾರ್ಯಕ್ರಮದ ನಿಮಿತ್ಯ ದಿ.ಆಶಾ ಕಡಪಟ್ಟಿ ಅವರ ಸಮಗ್ರ ಸಾಹಿತ್ಯ ಅವಲೋಕನ ಕುರಿತು ಮಾತನಾಡಿದ ಅವರು,ಸಾಹಿತ್ಯ, ಸಂಗೀತವನ್ನು ಆರಾಧಿಸುವ ಕುಟುಂಬದಲ್ಲಿ ನೆಮ್ಮದಿ, ವಿನಯ, ಸಮೃದ್ಧಿ ಸದಾ ತುಂಬಿರುತ್ತದೆ. ಹಿರಿಯರಾದ ದಿ. ಆಶಾ ಕಡಪಟ್ಟಿ ಅವರ ಬರವಣಿಗೆ ಆಚಾರ ವಿಚಾರಗಳು ನಮ್ಮೆಲ್ಲರಿಗೂ ಸ್ಪೂರ್ತಿದಾಯಕ ಎಂದರು.

ನಮ್ಮವರ ಸಾಹಿತ್ಯವನ್ನು ನಾವು ಮೆಲುಕು ಹಾಕುವುದು ಸಾಹಿತಿಗಳಿಗೆ ನೀಡುವ ಗೌರವ, ಆಶಾ ಕಡಪಟ್ಟಿ ಅವರ ಸಾಹಿತ್ಯದ ಅವಲೋಕನ ಮಾಡುವ ಇಚ್ಛೆ ಬಹುದಿನದಿಂದ ಇತ್ತು ಅದು ಇಂದು ಸಾಕಾರವಾಗಿದೆ ಎಂದು ಹೃದಯದ ಮಾತು ಬಿಚ್ಚಿಟ್ಟರು. ಭಾವನೆಗಳನ್ನೇ ತುಂಬಿಕೊಂಡ ಆಶಾ ನಮ್ಮೆಲ್ಲರಿಗೂ ಆದರ್ಶಪ್ರಾಯರು ಎಂದು ಹೇಳಿದರು.

ಡಾ. ವಿಜಯಲಕ್ಷ್ಮಿ ಪುಟ್ಟಿ ಮಾತನಾಡಿ, ಆಶಾ ಕಡಪಟ್ಟಿ ಅವರ ಜತೆಗಿನ ಒಡನಾಟ ಇಂದು ನಿನ್ನೆಯದಲ್ಲ ಅವರೊಬ್ಬ ಒಳ್ಳೆಯ ಸಾಹಿತಿ. ಸಾಹಿತ್ಯ ಲೋಕಕ್ಕೆ ಅಪಾರ ಕೊಡುಗೆ ನೀಡಿದ್ದಾರೆ ಅವರನ್ನು ನೆನೆದರು.

ಈ ಸಂದರ್ಭದಲ್ಲಿ ದತ್ತಿದಾನಿಗಳಾದ ಸುನಂದಾ ಎಮ್ಮಿ , ಸಂತೋಷ ದೇಶಪಾಂಡೆ .ಜಯಶೀಲಾ ಬ್ಯಾಕೋಡ್ , ಹೇಮಾ ಸೋನೋಳ್ಳಿ , ಜ್ಯೋತಿ ಬದಾಮಿ ನೀಲಗಂಗಾ ಚರಂತಿಮಠ, ಗುರುದೇವಿ ಹುಲೆಪ್ಪನವರಮಠ , ಕಾರ್ಯದರ್ಶಿ ಆಶಾ ಯಮಕನಮರಡಿ ಪ್ರಾಸ್ತಾವಿಕ ಮಾತನಾಡಿದರು. ಲೇಖಕಿಯರ ಸಂಘದ ಉಪಾಧ್ಯಕ್ಷ ವಾಸಂತಿ ಮೇಳೇದ ಸ್ವಾಗತಿಸಿದರು. ಜಿಲ್ಲಾ ಲೇಖಕಿಯರ ಸಂಘದ ಜ್ಯೋತಿ ಬದಾಮಿ, ಹೇಮಾ ಸೋನೋಳ್ಳಿ , ದೀಪಿಕಾ ಚಾಟೆ, ಶೈಲಜಾ ಬಿಂಗೆ ಡಾ.ಅನ್ನಪೂರ್ಣ ಹಿರೇಮಠ ನಿರೂಪಿಸಿದರು . ರಾಜೇಶ್ವರಿ ಹಿರೇಮಠ ಎಲ್ಲರನ್ನೂ ವಂದಿಸಿದರು.

Leave a Reply

Your email address will not be published. Required fields are marked *

error: Content is protected !!