ಬೆಳಗಾವಿ-೨೯:ಬಸ್ತವಾಡ ಗ್ರಾಮದಲ್ಲಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಅವರ ಅನುದಾನದಿಂದ 10 ಲಕ್ಷ ರೂ,ಗಳ ವೆಚ್ಚದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ಭೂಮಿ ಪೂಜೆ ನೆರವೇರಿಸಿ ಚಾಲನೆ ನೀಡಿದರು.
ಶ್ರೀ 1008 ಶಾಂತಿನಾಥ ತೀರ್ಥಂಕರ ಜೀನ ಮಂದಿರೋಪರಿ, ಶ್ರೀ 1008 ನವಗ್ರಹ ಪ್ರತಿಮಾ ಯುವಕ ಮಂಡಳದ ಅಭಿವೃದ್ಧಿ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಲಾಯಿತು.
ಈ ವೇಳೆ ನವಗ್ರಹ ತೀರ್ಥ ಪ್ರವರ್ತಕ ರಾಷ್ಟ್ರಸಂತ ಪರಮ ಪೂಜ್ಯ 108 ಗುಣಧರನಂದಿ ಮುನಿ ಮಹಾರಾಜರು, ಪರಮ ಪೂಜ್ಯ ಡಾ.ಬಾಲಚಾರ್ಯ ಶ್ರೀ 108 ಸಿದ್ಧಸೇನಾ ಮುನಿ ಮಹಾರಾಜರು, ಬಾಹುಬಲಿ ಪಾಟೀಲ, ಸಂತೋಷ ದೊಡ್ಡಕಲ್ಲಣ್ಣವರ, ಶಾಂತಿನಾಥ್ ಮಾರಿಹಾಳ, ಸಮೇದ್ ಬಾಗನ್ನವರ್, ಶ್ರೀಧರ್ ಬರ್ಚಿ, ಅರಿಹಂತ ದೊಡ್ಡಬೊಮ್ಮನ್ನವರ್, ವೃಷಭ್ ದೊಡ್ಡಕಲ್ಲಣ್ಣವರ, ಶುಭಂ ಬಾಗನ್ನವರ್, ಚಂದ್ರಕಾಂತ ಜಕ್ಕನ್ನವರ್, ಅನೂಪ್ ಬಾಗನ್ನವರ್ ಮೊದಲಾದವರು ಹಾಜರಿದ್ದರು.