ಬೆಳಗಾವಿ-೨೬:ಮಹಾರಾಷ್ಟ್ರದ ಬಾರಾಮತಿ ಕ್ಷೇತ್ರದ ಮಾದರಿಯಲ್ಲಿ ಬೆಳಗಾವಿಯ ಗ್ರಾಮೀಣ ಕ್ಷೇತ್ರದ ಅಭಿವೃದ್ಧಿ ಮಾಡಬೇಕೆಂದು ಕನಸು ಕಂಡಿರುವೆ. ಇದಕ್ಕೆ ಕ್ಷೇತ್ರದ ಜನರ ಸಹಕಾರ ಅಗತ್ಯ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಹೇಳಿದರು.
ಹಿಂಡಲಗಾ ಗ್ರಾಮದ ರಕ್ಷಕ್ ಕಾಲೋನಿಯ ಚರಂಡಿ ನಿರ್ಮಾಣದ ಕಾಮಗಾರಿಗೆ ಮಂಗಳವಾರ ಚಾಲನೆ ನೀಡಿದ ಸಚಿವರು, ಕ್ಷೇತ್ರದ ಯಾವುದೇ ಭಾಗಕ್ಕೆ ಹೋದರೂ ಯಾವುದೇ ಸಣ್ಣಪುಟ್ಟ ಕೆಲಸಗಳಿದ್ದರೂ ಕೂಡ ಜನರು ನನ್ನ ಬಳಿ ಹೇಳಿಕೊಳ್ಳುತ್ತಾರೆ. ರಸ್ತೆ ಇರಲಿ, ಚರಂಡಿ ಕೆಲಸವೇ ಇರಲಿ, ಒಬ್ಬ ಗ್ರಾಮ ಪಂಚಾಯಿತಿ ಸದಸ್ಯ ಮಾಡಬಹುದಾದ ಕೆಲಸಗಳನ್ನು ಕೂಡ ವಿಶ್ವಾಸದಿಂದ ನನ್ನ ಬಳಿ ಹೇಳಿಕೊಳ್ಳುತ್ತಾರೆ. ನಾನು ಕೂಡ ಅಷ್ಟೇ ಪ್ರೀತಿಯಿಂದ ಹೇಳಿದ ಕೆಲಸಗಳನ್ನು ಮಾಡಿ ಕೊಡುತ್ತಿದ್ದೇನೆ ಎಂದರು.
ನನ್ನ ಬಳಿ ಹೇಳಿಕೊಂಡರೆ ಪರಿಹಾರ ಸಿಗುತ್ತದೆ ಎನ್ನುವ ಕಾರಣದಿಂದ ಜನರು ತಮ್ಮ ಸಮಸ್ಯೆಗಳನ್ನು ಯಾವುದೇ ಸಂಕೋಚವಿಲ್ಲದೆ ಹೇಳಿಕೊಳ್ಳುತ್ತಾರೆ. ನನ್ನ ಮೇಲಿನ ಪ್ರೀತಿ, ವಿಶ್ವಾಸಕ್ಕೆ ಇದಕ್ಕಿಂತ ಬೇರೆ ಉದಾಹರಣೆ ಬೇಕೆ ಎಂದು ಪ್ರಶ್ನಿಸಿದ ಸಚಿವರು, ನಾನು ಯಾವುದೇ ಪಕ್ಷ ಭೇದವಿಲ್ಲದೆ, ಎಲ್ಲ ಕೆಲಸಗಳನ್ನು ಮಾಡಿಕೊಡುತ್ತಿದ್ದೇನೆ ಎಂದು ಹೇಳಿದರು.
ಕಳೆದ 5-6 ವರ್ಷಗಳಿಂದ ಕೈಗೊಂಡ ಅಭಿವೃದ್ಧಿ ಕೆಲಸಗಳ ಬಗ್ಗೆ ಮೆಲುಕು ಹಾಕಿದ ಸಚಿವರು, ಗ್ರಾಮಸ್ಥರ ಸಮಸ್ಯೆಗಳನ್ನು ಆಲಿಸಿದರು.
ಈ ವೇಳೆ ಮಿನಾಕ್ಷಿ ಹಿತ್ತಲಮನಿ, ವಿಠ್ಠಲ ದೇಸಾಯಿ, ಪ್ರವೀಣ್ ಪಾಟೀಲ್, ರಾಹುಲ್ ಉರನಕರ್, ರೇಣುಕಾ ಬಾತ್ಕಂಡೆ, ಡಿ.ಬಿ.ಪಾಟೀಲ್ ಸೇರಿದಂತೆ ರಕ್ಷಕ್ ಕಾಲೋನಿಯ ನಿವಾಸಿಗಳು ಉಪಸ್ಥಿತರಿದ್ದರು.
* *ಚರಂಡಿ ನಿರ್ಮಾಣಕ್ಕೆ ಚಾಲನೆ*
ಹಿಂಡಲಗಾ ಗ್ರಾಮದ ಸಾಯಿನಂದನ್ ರೆಸಿಡೆನ್ಸಿ ಹಾಗೂ ಶ್ರೀರಾಮ್ ಕಾಲೋನಿಯ ಚರಂಡಿ ನಿರ್ಮಾಣದ ಕಾಮಗಾರಿಗೆ ಸಚಿವರು ಭೂಮಿ ಪೂಜೆ ನೆರವೇರಿಸಿದರು. ಸಾರ್ವಜನಿಕರಿಗೆ ಯಾವುದೇ ತೊಂದರೆಗಳಾಗದಂತೆ ಚರಂಡಿ ಕಾಮಗಾರಿಯನ್ನು ನಿಗದಿತ ಸಮಯದಲ್ಲಿ ಸ್ಥಳೀಯರ ಸಲಹೆ ಪಡೆದು, ಪೂರ್ಣಗೊಳಿಸುವಂತೆ ಗುತ್ತಿಗೆದಾರರಿಗೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಸೂಚಿಸಿದರು.
ಈ ವೇಳೆ ಗಜಾನಂದ ಬಂಡೇಕರ್, ವಿಠ್ಠಲ ದೇಸಾಯಿ, ದಳವಿ, ಜಯ ಪಾಸೆ, ಹನುಮ ಸೇಠ್, ಪಾಟ್ನೇಕರ್, ರುದ್ರಗೌಡರ್, ಬಿಲ್ಲೆ, ಪ್ರವೀಣ, ರಾಹುಲ್ ಉರನಕರ್, ಸೀಮಾ ದೇವಕರ್, ಪ್ರವೀಣ ಮಿರಜಕರ್, ಅಶೋಕ್ ಕಾಂಬಳೆ, ರೇಣುಕಾ ಬಾತ್ಕಂಡೆ, ಕೃಷ್ಣ ಪಾಟೀಲ್, ವಿಲಾಸ ನಲವಡೆ, ಶಿವಾಜಿ ನಲವಡೆ, ಮಾಯಾ ಬಾಚಿಕರ್, ಒಂದನಾ ನಲವಡೆ, ಭಾರತಿ ಗಾವಡೆ, ಪ್ರಭಾವತಿ ಗಾವಡೆ, ಮಂಗಲ ಕುಳಿಂದ್ರಕರ್, ಯುವರಾಜ ಸಾವಗಾಂವ್ಕರ್, ಯಶವಂತ ಕೆ ಮುಂತಾದವರು ಉಪಸ್ಥಿತರಿದ್ದರು.
* *ಕಾಂಕ್ರೀಟ್ ರಸ್ತೆ ನಿರ್ಮಾಣಕ್ಕೆ ಭೂಮಿ ಪೂಜೆ*
ಬಳಿಕ ಬೆಳಗಾವಿ ಗ್ರಾಮೀಣ ಕ್ಷೇತ್ರದ ತುರಮರಿ ಗ್ರಾಮದಲ್ಲಿ ಕಾಂಕ್ರೀಟ್ ರಸ್ತೆ ನಿರ್ಮಾಣದ ಕಾಮಗಾರಿಗೂ ಸಚಿವರು ಭೂಮಿ ಪೂಜೆ ಮಾಡುವ ಮೂಲಕ ಚಾಲನೆ ನೀಡಿದರು. ತುರಮರಿ ಗ್ರಾಮದಲ್ಲಿ ನೂತನ ಅಂಗನವಾಡಿ ಕಟ್ಟಡದ ನಿರ್ಮಾಣದ ಕಾಮಗಾರಿಗೆ ಗುದ್ದಲಿ ಪೂಜೆ ನೇರವೇರಿಸಿದ ಸಚಿವರು, ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಕನ್ನಡ ಶಾಲೆ ಹಾಗೂ ಅಂಗನವಾಡಿ ಕೇಂದ್ರಕ್ಕೆ ತೆರಳಿ, ಮಕ್ಕಳ ವಿದ್ಯಾಭ್ಯಾಸದ ಮಾಹಿತಿ ಪಡೆದು, ಶಾಲೆಯ ಕುಂದುಕೊರತೆಗಳನ್ನು ಆಲಿಸಿದರು.
ಈ ವೇಳೆ ಸಿಡಿಪಿಒ ಸುಮಿತ್ರಾ, ಯುವರಾಜ್ ಕದಂ, ಚಂದ್ರಕಾತ ಜಾಧವ್, ಮಾರುತಿ ಖಾಂಡೇಕರ್, ಲಕ್ಷ್ಮೀ ಸುತಾರ್, ವೈಶಾಲಿ ಖಾಂಡೇಕರ್, ಜ್ಞಾನೇಶ್ವರ ಕೊರಡೆ, ವೈಜು ತಂಗುನಕರ್, ಮಾರುತಿ ಜಾಧವ್, ಶಿವಾಜಿ ಬೆಳಗುಂದಕರ್ ಮೊದಲಾದವರು ಉಪಸ್ಥಿತರಿದ್ದರು.
ಉಚಾಗಾಂವ್ ಅಂಗನವಾಡಿ ಕಾಮಗಾರಿ
ನಂತರ ಕ್ಷೇತ್ರದ ಉಚಗಾಂವ ಗ್ರಾಮದಲ್ಲಿ ನೂತನ ಅಂಗನವಾಡಿ ಕಟ್ಟಡದ ನಿರ್ಮಾಣದ ಕಾಮಗಾರಿಗೆ ಸಚಿವರು ಭೂಮಿ ಪೂಜೆ ನೆರವೇರಿಸಿ, ಚಾಲನೆ ನೀಡಿದರು. ಸರಕಾರಿ ಜಾಗ ಇರುವ ಎಲ್ಲ ಕಡೆ ಅಂಗನವಾಡಿಗಳಿಗೆ ಸ್ವಂತ ಕಟ್ಟಡ ಒದಗಿಸಲಾಗುತ್ತಿದೆ. ರಾಜ್ಯದಲ್ಲಿ ಇದೇ ವರ್ಷ ಸಾವಿರಕ್ಕೂ ಹೆಚ್ಚು ಅಂಗನವಾಡಿ ಕಟ್ಟಡಗಳನ್ನು ನಿರ್ಮಾಣ ಮಾಡಲಾಗುತ್ತಿದೆ. ಇದಕ್ಕಾಗಿ ಬಜೆಟ್ ನಲ್ಲಿ ಹಣ ಮೀಸಲಿಡಲಾಗಿದೆ ಎಂದು ಅವರು ತಿಳಿಸಿದರು.
ಈ ವೇಳೆ ಸಿಡಿಪಿಒ ಸುಮಿತ್ರಾ, ಯುವರಾಜ ಕದಂ, ಮಥುರಾ ತೇರಸೆ, ಎಲ್.ಡಿ.ಚೌಗುಲೆ, ಗೋಪಾಲ್ ಪಿ. ಶಶಿಕಾಂತ ಜಾಧವ್, ಬಾಲಕೃಷ್ಣ ತೇರಸೆ, ನಿಂಗಪ್ಪ ಜಾಧವ್, ವಿಶಾಲ ಕೋವಾಡ್ಕರ್, ಯೋಗಿತಾ ದೇಸಾಯಿ, ಅಂಗನವಾಡಿಯ ಸಿಬ್ಬಂದಿ ಹಾಜರಿದ್ದರು.