ಬೆಳಗಾವಿ-೨೫:ಸೋಮವಾರ ಬೆಳಗಾವಿ ಪತ್ರಿಕಾಗೋಷ್ಠಿಯಲ್ಲಿ ಚಳಿಗಾಲ ಅಧಿವೇಶನ ಈ ಭಾಗದ ರೈತರ ಸಮಸ್ಯೆಯನ್ನು ಬಗೆಹರಿಸುವಂತದ್ದು ಆಗಬೇಕು. ಈ ಭಾಗದ ಅಭಿವೃದ್ಧಿಯ ಸಮಸ್ಯೆಗಳ ಪರಿಹಾರಕೊಂಡುಕೊಳ್ಳುವಂತದು ಒಂದು ರಚನಾತ್ಮಕ ಅಧಿವೇಶನ ಆಗಬೇಕು ಹಾಗೂ ಒಂದು ಒಳ್ಳೆಯ ಗಟ್ಟಿ ನಿರ್ಣಯ ತೆಗೆದುಕೊಳ್ಳುವಂತಹ ಅಧಿವೇಶನ ಆಗಬೇಕು ಎಂದು ಪ್ರಕಾಶ ನಾಯಕ ತಿಳಿಸಿದರು.
ಪತ್ರಿಕಾ ಗೋಷ್ಠಿ ಯಲ್ಲಿ ಮಾತನಾಡುತ್ತಾ ಅವರು ರಾಜ್ಯ ಮಟ್ಟದಲ್ಲಿ ಡಾ.ಸ್ವಾಮಿನಾಥನ್ ಆಯೋಗದ ವರದಿ ಜಾರಿಗೊಸಬೇಕು, ಸಂಪೂರ್ಣ ರೈತ ವಿರೋಧಿ ಕಾಯಿದೆಗಳನ್ನು ಹಿಂಪಡೆಯಬೇಕು ಹಾಗೂ ಇ. ಭೂ-ಸುಧಾರಣಾ ಕಾಯ್ದೆಯ ಪರಿವರ್ತನೆ, ಬಿ.ಜೆ.ಪಿ. ಸರಕಾರದಲ್ಲಿ ಮಾಡಿರುವ 70ಎಬಿ ಕೈ-ಬಿಡುವುದು. b. ಈ ಕಾಯ್ದೆ ಮುಖ್ಯಮಂತ್ರಿಗಳು ಹಿಮಪಡೆಯುವದರ ಜೊತೆಗೆ ಎ.ಪಿ.ಎಂ.ಸಿ ಕಾಯ್ದೆಯನ್ನು ಪರಿವರ್ತನೆಗೊಳಿಸಬೇಕು ಎಂದು ಪ್ರಕಾಶ ನಾಯಕ ಹೇಳಿದರು.
ಮಧ್ಯವರ್ತಿಗಳ ಹಾವಳಿ ತಪ್ಪಿಸಿ, ಸಧ್ಯದ ಮಾರುಕಟ್ಟೆಯ ದರದೊಂದಿಗೆ ರೈತರ ಸಮ್ಮತಿಯೊಂದಿಗೆ ಇ-ಪೇಮೆಂಟ ಮಾದರಿಯಲ್ಲಿ ತಲುಪುವುದು.
ಜೈ ಕಿಸಾನ್ ಗೆ ಅನುಕೂಲ ಸರ್ಕಾರದ ನೂರಾರು ಬಂಡವಾಳ ಹಾಕಿರುವಂತಹ ಎಪಿಎಂಸಿ ಜಾಹಿರಾತನು ಹಾಲಿಗಿಡಿಸಿ ಕೆಲವು ರಾಜಕಾರಣಿಗಳು ಅಧಿಕಾರಿಗಳ ಸ್ವಾರ್ಥಕ್ಕಾಗಿ ಅಥವಾ ವ್ಯವಸ್ಥೆಗೆ ಮಾರಾಟ ಹೋಗಿ ರೈತರ ಸಾರ್ವಜನಿಕರ ತೆರಿಗೆ ಹಣದ ಫಲವಾಗಿ ರೈತರಿಗೆ ಅನುಕೂಲವಾಗಬೇಕಾಗಿರುವ ವ್ಯವಸ್ಥೆಗಳನ್ನು ಹಾಳು ಮಾಡಿದೆ.
ರಾಜ್ಯದಲ್ಲಿರುವಂತ ಸರ್ಕಾರಿ ಎಪಿಎಂಸಿ ಖಾಸಗಿಕರಣ ರಾಜ್ಯ ವ್ಯಾಪ್ತಿ ಬೆಳಗಾವಿ, ಬೆಂಗಳೂರು, ರಾಮನಗರ ,ಚಿತ್ರದುರ್ಗ, ಐದು ಕಡೆಗೆ ಸರ್ಕಾರಿ ಎಪಿಎಂಸಿ ವಿಶೇಷವಾಗಿ ಬೆಳಗಾವಿಯಲ್ಲಿ 80 ಎಕರೆಯಲ್ಲಿ ಎಲ್ಲಾ ರೀತಿಯ ಸರ್ಕಾರಿ ಸೌಲತ್ತುಗಳು ಹಾಗೂ ಮಳಿಗೆಗಳು ಇದ್ದು ಇವತ್ತು ಸರ್ಕಾರದ ನಿರ್ಲಕ್ಷದಿಂದ ಖಾಸಗಿ ತರಕಾರಿ ಮಾರುಕಟ್ಟೆಯನ್ನು ಪ್ರಾರಂಭ ಮಾಡುವಂತ ಕೆಲಸ ಆಗಿದೆ ಎಂದು ರಾಜ್ಯ ಅಧ್ಯಕ್ಷ ಚುನಪ್ಪಾ ಪುಜೇರಿ ಹೇಳಿದರು.
2008ರಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಮಿಶ್ರ ಸರ್ಕಾರ ಇರುವಾಗ 87 b ಎಂಬುವಂತ ಕಾಯ್ದೆಯನ್ನು ಖಾಸಗಿಕರಣಕ್ಕೆ ಅನುಕೂಲ ಆಗಲೆಂದು ತಿದ್ದುಪಡೆ ಮಾಡಿದರು ಆ ಸಂದರ್ಭದಲ್ಲಿ ಖಾಸಗಿ ತರಕಾರಿ ಮಾರುಕಟ್ಟೆ ಮಾಡಿಕೊಡಲು ಅನುಕೂಲ ಸರಕಾರ ಮಾಡಿದೆ ಆದ್ದರಿಂದ ಐದು ಆರು ಜಿಲ್ಲೆಗಳಲ್ಲಿ ಖಾಸಗಿ ಮಾರುಕಟ್ಟೆಗಳಾಗಿ ಎಪಿಎಂಸಿ ಮಾರುಕಟ್ಟೆ ಸಂಪೂರ್ಣ ಹಾಳಾಗಿದ್ದು ತಕ್ಷಣ ಮುಖ್ಯಮಂತ್ರಿಗಳು 87 ಬಿ ಎಂಬ ಕಾಯ್ದೆಯನ್ನು ಚಳಿಗಾಲ ಅಧಿವೇಶನಕ್ಕೆ ಮುಂಚೆ ಹಿಂಪಡೆಯಬೇಕೆಂದು ಹೇಳಿದರು.
ಬೆಳಗಾವಿಯಲ್ಲಿ ಜೈ ಕಿಸಾನ್ ತರಕಾರಿ ಮಾರುಕಟ್ಟೆ ಪ್ರಾರಂಭವಾಗಿದ್ದು ಅಲ್ಲಿ ಅನೈತಿಕ ಅವ್ಯವಹಾರಗಳು ಚಟುವಟಿಕೆಗಳು ನಡೆಯುತ್ತಿವೆ. ತಕ್ಷಣ ಜೈ ಕಿಸಾನ್ ಮಾರುಕಟ್ಟೆಯನ್ನು ನಿಲ್ಲಿಸಿ ಸರ್ಕಾರಿ ಎಪಿಎಂಸಿ ಎನ್ನು ಅಭಿವೃದ್ಧಿ ಮಾಡಬೇಕೆಂದು ಹೇಳಿದರು
87 b ಎಂಬುವಂತ ಕಾಯ್ದೆಯನ್ನು ಚಳಿಗಾಲ ಅಧಿವೇಶನದ ಒಳಗಡೆ ರದ್ದುಗೊಳಿಸದಿದ್ದರೆ ಅಧಿವೇಶನ ವೇಳೆ ಲಕ್ಷಾಂತರ ಜನ ಕೊಡಿ ಉಗ್ರ ಹೋರಾಟ ಮಾಡುತ್ತೇವೆ ಎಂದು ರಾಜ್ಯ ಅಧ್ಯಕ್ಷ ಚುನಪ್ಪಾ ಪುಜೇರಿ ಪತ್ರಿಕಾಗೋಷ್ಠಿ ಆಗ್ರಹಿಸಿದ್ದಾರೆ.