23/12/2024
IMG_20241120_223425

ಬೆಳಗಾವಿ-೨೦: ಹಜರತ್ ಟೀಪ್ಪು ಸುಲ್ತಾನ ಹುಟ್ಟು ಹಬ್ಬದ ಪ್ರಯುಕ್ತ ಹಿಂದ ಕೇ ಫರೀಷ್ತೆ ಫೌಂಡೇಷನ್ ಹಾಗೂ ಹಜರತ್ ಟೀಪ್ಪು ಸುಲ್ತಾನ ಸೇವ ಸಂಘದಿಂದ ಸಿಹಿ ವಿತರಿಸಿ ಕನ್ನಡ ಪರ ಹೋರಾಟಗಾರರಿಗೆ ಸನ್ಮಾನಿಸಲಾಯಿತು.‌

ನಗರದ ಕನ್ನಡ ಸಾಹಿತ್ಯ ಭವನದಲ್ಲಿ ಆಯೋಜನೆ ಮಾಡಲಾಗಿದ್ದ ಕಾರ್ಯಕ್ರಮವನ್ನು ಟಿಪ್ಪು ಸುಲ್ತಾನ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಕನ್ನಡಪರ ಹೊರಾಟಗಾರರು ಹಾಗೂ ಸಮಾಜ ಸೇವಕರಿಗೆ ಸನ್ಮಾನಿಸಲಾಯಿತು.

ಇದರ ಮುಂಚೆ ಹಿಂದ ಕೇ ಫರೀಷ್ತೆ ಫೌಂಡೇಷನ್ ಚರ್ಮನ್ ಕಲಮುದ್ದೀನಶಾ ಮಕಾನದಾರ ನೆತೃತ್ವದಲ್ಲಿ ಟಿಪ್ಪು ಸುಲ್ತಾನ ಹುಟ್ಟು ಹಬ್ಬದ ಪ್ರಯುಕ್ತ ನಗರದ ವಿವಿಧ ಕಡೆ ಒಂದು ಸಾವಿರ ಸಿಹಿ ಪಾಕೆಟ್ ಹಂಚಲಾಯಿತು. ಅನೇಕ ಆಶ್ರಮಗಳಿಗೆ ಮದ್ಯಾಹ್ನ ಊಟದ ವ್ಯವಸ್ಥೆ ಮಾಡಲಾಯಿತು.‌

error: Content is protected !!