24/12/2024
collage_2_1-1731346925310

ಯುವ ಜನತೆ ಶಿಕ್ಷಿತರಾಗಿ, ಸಂಘಟಿತರಾಗಿ ಸಮಾಜದಲ್ಲಿ ಮುಂದೆ ಬರಬೇಕು:ಸವಿತಾ ಕಾಂಬಳೆ

ಬೆಳಗಾವಿ-೧೧: ಒನಕೆ ಒಬ್ಬವ್ವಳ ಧೈರ್ಯ ಹಾಗೂ ಸಾಹಸವನ್ನು ಮಹಿಳೆಯರು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವದು ಅತ್ಯಗ್ಯತವಾಗಿದೆ. ಇಂದಿನ ಯುವ ಜನತೆ ಉತ್ತಮ ಶಿಕ್ಷಣ ಪಡದುಕೊಂಡು ಸಂಘಟಿತರಾಗಿ ಸಮಾಜದಲ್ಲಿ ಮುಂದೆ ಬರುವದರ ಮೂಲಕ ಸಧೃಢ ಸಮಾಜ ನಿರ್ಮಾಣಕ್ಕೆ ಮುಂದಾಗುವಂತೆಮಹಾನಗರ ಪಾಲಿಕೆ ಮಹಾಪೌರರಾದ ಸವಿತಾ ಕಾಂಬಳೆ ಅವರು ಹೇಳಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಮಹಾನಗರ ಪಾಲಿಕೆ ಇವರ ಸಂಯುಕ್ತಾಶ್ರಯದಲ್ಲಿ ನಗರದ ಕುಮಾರ ಗಂಧರ್ವ ಕಲಾ ಮಂದಿರದಲ್ಲಿ ಸೋಮವಾರ ನಡೆದ ವೀರ ವನಿತೆ ಒನಕೆ ಒಬ್ಬವ್ವ ಜಯಂತ್ಯೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ಒನಕೆ ಓಬವ್ವನ ಪತಿ ಚಿತ್ರದುರ್ಗದ ಕಲ್ಲಿನ ಕೋಟೆಯಲ್ಲಿ ಕಾವಲುಗಾರರಾಗಿದರು. ಹೈದರಾಲಿ ಸೈನ್ಯ ಚಿತ್ರದುರ್ಗದ ಮೇಲೆ ಆಕ್ರಮಣ ಮಾಡಿದಾಗ ಓಬವ್ವ ತನ್ನ ಒನಕೆಯನ್ನು ಅಸ್ತçವಾಗಿ ಇಟ್ಟುಕೊಂಡು ಶತ್ರುಗಳನ್ನು ಎದುರಿಸಿದ್ದಳು. ನೂರಾರು ಶತ್ರು ಸೈನಿಕರನ್ನು ತನ್ನ ಒನಕೆಯಿಂದಲೇ ಕೊಂದು ಕೊನೆಯಲ್ಲಿ ಎದುರಾಳಿಯು ಬೆನ್ನಹಿಂದೆ ಬಂದದ್ದನ್ನು ಗಮನಿಸಲಾಗದೆ ಶತ್ರುವಿನ ಕತ್ತಿಗೆ ಬಲಿಯಾದರು.ವೀರ ವನಿತೆ ಒನಕೆ ಒಬ್ಬವ್ವನ ಸಿದ್ದಾಂತಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಸರ್ಕಾರದಿಂದ ಸಿಗುವ ಸೌಲಭ್ಯಗಳನ್ನು ವಿದ್ಯಾರ್ಥಿಗಳು ಪಡೆದು ಸಮಾಜಕ್ಕೆ ಮಾದರಿಯಾಗಬೇಕು ಎಂದು ಮಹಾಪೌರರಾದ ಸವಿತಾ ಕಾಂಬಳೆ ಅವರು ಹೇಳಿದರು.ಜಿಲ್ಲಾ ಪಂಚಾಯತ ಉಪ ಕಾರ್ಯದರ್ಶಿಗಳಾದ ಬಸವರಾಜ ಹೆಗ್ಗನಾಯಕ ಅವರು ಮಾತನಾಡಿ, ಒನಕೆ ಓಬವ್ವ ಹೈದರ್ ಅಲಿಯೊಂದಿಗೆ ಏಕಾಂಗಿಯಾಗಿ ಹೋರಾಡಿದ ವೀರ ವನಿತೆಯಾಗಿದ್ದಳು.ಕನ್ನಡ ನಾಡಿನ ವೀರವನಿತೆಯರಾದ ಕಿತ್ತೂರು ಚೆನ್ನಮ್ಮ,ರಾಣಿ ಅಬ್ಬಕ್ಕರ ಸಾಲಿನಲ್ಲಿ ಇವರನ್ನು ಸಹ ಪರಿಗಣಿಸಲಾಗುತ್ತದೆ. ಇತಿಹಾಸ ಪುಟ್ಟಗಳ್ಳಲ್ಲಿ ಕಂಡು ಬರುವ ಒನಕೆ ಓಬ್ಬವ್ವ ಅವರ ಸಾಹಸ ಸಾಧನೆ ಎಲ್ಲರನ್ನು ಪ್ರೇರಣೆ ಮಾಡುವಂತದ್ದು ಎಂದು ಅವರು ಹೇಳಿದರು.ಮಹನೀಯರ ಜಯಂತಿಗಳು ಆಚರಣೆಗೆ ಮಾತ್ರ ಸೀಮಿತವಾಗಿರದೆ ಒನಕ್ಕೆ ಓಬ್ಬವ್ವಳಂತ ಮಹಿಳೆಯರ ಸಾಹಸ ಸಾಧನೆಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಸಮಾಜದಲ್ಲಿ ಮುಂದೆ ಬರು ಕಾರ್ಯ ಮಾಡಬೇಕು ಎಂದು ಹೇಳಿದರು.ಕಡೋಳಿ ಸರ್ಕಾರಿ ಪ್ರೌಢ ಶಾಲೆಯ ಶಿಕ್ಷಕರಾದ ಡಾ.ಪ್ರವೀಣಾ ಕೆ. ಎಸ್ ಅವರು ಮಾತನಾಡಿ, ವೀರವನಿತೆ ಒನಕ್ಕೆ ಓಬ್ಬವ್ವ ಒಂದು ಸಾಮಾನ್ಯ ಕುಟುಂಬದಲ್ಲಿ ಜನಿಸಿ ಇಂದು ಇತಿಹಾಸದ ಪುಟ್ಟಗಳ್ಳಲ್ಲಿ ಓದುವಂತೆ ಸಮಾಜಕ್ಕೆ ಮಾದರಿ ಆದವಳು. ಅವಳಂತೆ ನಮ್ಮ ಸಮಾಜದ ಹೆಣ್ಣುಮಕ್ಕಳು ಸಹ ಬೆಳೆಯಬೇಕು ಎಂದರು.ಒನಕ್ಕೆ ಓಬ್ಬವಳಿಗೆ ಯಾವುದೇ ರೀತಿಯ ಶಸ್ತçದ ಬಗ್ಗೆ ಗೊತ್ತೇ ಇಲ್ಲದ ಸಮಯದಲ್ಲಿ ಹೈದರಾಲಿ ಸೈನ್ಯ ಚಿತ್ರದುರ್ಗಕ್ಕೆ ಮುತ್ತಿಗೆ ಹಾಕುವುದನ್ನು ನೋಡಿ ಒನಕೆಯಿಂದಲೇ ನೂರಾರು ಸೈನಿಕರನ್ನು ಕೊಂದವಳು. ಸಂಸ್ಕೃತಿಕ ನಾರಿ ವೀರವನಿತೆ ಒನಕೆ ಓಬ್ಬವ್ವ ಸಮಯ ಪ್ರಜ್ಞೆ, ಶಕ್ತಿ ಸಾಮರ್ಥ, ಸಾಹಸವನ್ನು ಮೆಚ್ಚುವಂತದ್ದು.ವೀರ ವನಿತೆ ಓಬ್ಬವ್ವ ಕನ್ನಡ ನಾಡಿಗೆ ಮಾತ್ರ ಸೀಮಿತವಾಗದೆ ಇಂಗ್ಲಿಷ ಪುಟ್ಟಗಳಲ್ಲಿ ಓದುವಂತೆ ಆಗಬೇಕುಎಂದರು.ಮಹಾನ್ ವ್ಯಕ್ತಿಗಳ ಜಯಂತಿ ಆಚರಣೆಗಳನ್ನು ಯಾವುದೇ ಒಂದು ಸಮುದಾಯಕ್ಕೆ ಸೀಮಿತವಾಗದೇಅವರ ಆಚರ-ವಿಚಾರಗಳು ಎಲ್ಲ ಸಮುದಾಯದವರು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಉತ್ತಮ ಜೀವನವನ್ನು ನಡೆಸಬೇಕು. ಮಹಿಳೆಯರು ಮಾನಸಿಕ ಒತಡದಿಂದ ಹೊರಗೆ ಬಂದು ತಮ್ಮಲ್ಲಿ ಇರುವ ತಪ್ಪು ಕಲ್ಪಿನೆಗಳನ್ನು ತೆಗೆದು ಹಾಕಿ, ದೈಹಿಕವಾಗಿ, ಮಾನಸಿಕವಾಗಿ ಸದೃಢರಾಗಿ ಸಮಾಜದಲ್ಲಿ ಉತ್ತಮ ಜೀವನ ಕಟ್ಟಿಕೊಂಡು ಉಳಿದ ಹೆಣ್ಣುಮಕ್ಕಳಿಗೆ ಮಾದರಿಯಾಗಬೇಕು ಎಂದು ತಿಳಿ ಹೇಳಿದರು.ಇದೇ ವೇಳೆ ಬೆಳಗಾವಿ ಮತ್ತು ಚಿಕ್ಕೋಡಿ ಕ್ಷೇತ್ರದಲ್ಲಿ ಎಸ್ ಎಸ್ ಎಲ್ ಸಿ ಹಾಗೂ ಪಿ ಯು ಸಿ ಮಟ್ಟದಲ್ಲಿ ಅತೀ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಸನ್ಮಾನಿಸಿ ಗೌರವಿಸಲಾಯಿತು.ಕಾರ್ಯಕ್ರಮದಲ್ಲಿ ಮಹಾನಗರ ಪಾಲಿಕೆ ಉಪ ಮಹಾಪೌರರಾದ ಆನಂದ ಚವ್ಹಾಣ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಉಪ ನಿರ್ದೇಶಕರಾದ ವಿದ್ಯಾವತಿ ಭಜಂತ್ರಿ, ಮಹಾನಗರ ಪಾಲಿಕೆ ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷರಾದ ಶ್ರೀಶೈಲ ಕಾಂಬಳೆ, ನಗರ ಸೇವಕರಾದ ಸಂದೀಪ ಜೀರಗ್ಯಾಳ, ಉಪ ತಹಸೀಲ್ದಾರರಾದ ಎಸ್.ಬಿ.ಅಸೋದೆ, ಆದಿ ಜಾಂಬವ ನಿಗಮ ಮಂಡಳಿ ವ್ಯವಸ್ಥಾಪಕರಾದ ಬಸವರಾಜ ಚನ್ನಣ್ಣವರ, ತಾಲೂಕಾ ಸಮಾಜ ಕಲ್ಯಾಣ ಅಧಿಕಾರಿಗಳಾದ ಮಹಾಂತೇಶ ಜವುಟಗುಂಡಿ, ರಾಯಬಾಗ ಚಲವಾದಿ ಮಠದ ಶ್ರೀ ಮಹಾದೇವ, ಗಣ್ಯರುಗಳಾದ ಉದಯಕುಮಾರ ತಳವಾರ, ಮಲ್ಲೇಶ ಚೌಗುಲೆ, ಮಲ್ಲೇಶ ಕುರಂಗಿ, ಮಹಾದೇವ ತಳವಾರ, ದುರ್ಗೇಶ ಮೇತ್ರಿ, ಮಲ್ಲಿಕಾರ್ಜುನ ರಾಶಿಂಗ, ರಾಜು ಕೋಲಕಾರ, ಸುಬ್ರಮಣ್ಯ ಕಾಂಬಳೆ, ಶಾಲಾ ಶಿಕ್ಷಕರು ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಹಾಜರಿದ್ದರು.

error: Content is protected !!