ಬೆಳಗಾವಿ-೧೧: ಶ್ರೀ ನಾಮದೇವ ಶಿಂಪಿ ಸಮಾಜದ ಮೂವರು ರಾಜ್ಯ ಸಮಿತಿಗೆ ಆಯ್ಕೆಯಾಗಿದ್ದಾರೆ. ಈ ಮೂವರು ಈ ಆಯ್ಕೆಗೆ ಸಮುದಾಯದಿಂದ ಪ್ರಶಂಸೆಗೆ ಪಾತ್ರರಾಗಿದ್ದಾರೆ.
ಕರ್ನಾಟಕ ರಾಜ್ಯ ಶ್ರೀ ನಾಮದೇವ ಶಿಂಪಿ ಸಮಾಜ ಯುವ ಕ್ಷೇತ್ರ ಬೆಂಗಳೂರು ಸಂಚಾಲಕರಾಗಿ ಮಹೇಶ್ ಪ್ರಕಾಶ್ ಖಟಾವ್ಕರ್ ಆಯ್ಕೆಯಾಗಿದ್ದಾರೆ.
ಹಾಗೆಯೇ ಶ್ರೀ ನಾಮದೇವ ಶಿಂಪಿ ಸಮಾಜ ಬೆಳಗಾವಿ, ಮಹಿಳಾ ಮಂಡಲದ ಅಧ್ಯಕ್ಷೆ ಶ್ರೀಮತಿ ವಿಜಯಲಕ್ಷ್ಮಿ ಅಶೋಕ್ ಹೊವಲ್ ಕರ್ನಾಟಕ ರಾಜ್ಯ ಶ್ರೀ ನಾಮದೇವ ಶಿಂಪಿ ಸಮಾಜ ಮಹಿಳಾ ಕ್ಷೇತ್ರದ ಬೆಂಗಳೂರು ಉಪಾಧ್ಯಕ್ಷರಾಗಿ ಮತ್ತು ಶ್ರೀಮತಿ ಭಾರತಿ ಕೃಷ್ಣ ರೆನಕೆ ಅವರು ಶ್ರೀ ನಾಮದೇವ ಶಿಂಪಿ ಸಮಾಜ ಮಹಿಳಾ ಕ್ಷೇತ್ರದ ಬೆಂಗಳೂರು ಸಂಚಾಲಕರಾಗಿ ಆಯ್ಕೆಯಾಗಿದ್ದಾರೆ.