23/12/2024
IMG-20241108-WA0006

ಬೆಳಗಾವಿ-೦೮:2022-2023 ನೇ ಸಾಲಿನ ಆಯವ್ಯಯ ಭಾಷಣದ ಕಂಡಿಕೆ 224 ರಲ್ಲಿ ಘೋಷಿಸಿರುವಂತೆ ರಾಜ್ಯದ ನಗರ ಸ್ಥಳಿಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಪೌರಕಾರ್ಮಿಕರಿಗೆ ರೂ. 2000 ಗಳ ಸಂಕಷ್ಟ ಭತ್ಯೆಯನ್ನು ನೀಡಬೇಕೆಂದು ಸರ್ಕಾರದ ಆದೇಶ ಸಂಖ್ಯೆ ನಅಇ/147/ಎಸ್.ಎಫ್.ಸಿ-2020-22. ದಿನಾಂಕ: 08-04-2022 ರ ಆದೇಶದಲ್ಲಿ ಅನುಮೋದನೆ ನೀಡಿರುತ್ತಾರೆ.

ಬೆಂಗಳೂರು ಮಹಾನಗರ ಪಾಲಿಕೆ ಸೇರಿದಂತೆ ರಾಜ್ಯದ ಎಲ್ಲಾ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಸರ್ಕಾರದ ಆದೇಶ ಸಂಖ್ಯೆ: ನಅಇ/143/ಎಸ್.ಎಫ್.ಸಿ-2020-22, ದಿನಾಂಕ: 04-08-2022 ರ ಪ್ರಸ್ತಾವಣೆಯಲ್ಲಿ ವಿವರಿಸಿರುವ ಅಂಶಗಳನ್ವಯ ಬೃಹತ ಕಾರ್ಯನಿರ್ವಹಿಸುತ್ತಿರುವ ಪೌರಕಾರ್ಮಿಕರುಗಳಿಗೆ ರೂ. 2000 ಮಾಸಿಕ ಸಂಕಷ್ಟ ಭತ್ಯೆಯನ್ನು ನೀಡಲು ಅನುಮೋದನೆ ನೀಡಿದ್ದು, ಇನ್ನುವರೆಗೆ ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಪೌರಕಾರ್ಮಿಕರಿಗೆ ರೂ. 2000 ಗಳ ಮಾಸಿಕ ಸಂಕಷ್ಟ ಭತ್ಯೆಯನ್ನು ನೀಡಿರುವುದಿಲ್ಲ ಸದರಿ ಭತ್ಯೆಯನ್ನು ನೀಡದಿರಲು ಕಾರಣವನ್ನು ತಿಳಿಸಬೇಕು.

2022-2023 ಇಲ್ಲಿಯವರೆಗೆ ಪೌರಕಾರ್ಮಿಕರಿಗೆ ಮಾಸಿಕ ಸಂಕಷ್ಟ ಭತ್ಯೆಯನ್ನು ನೀಡಬೇಕೆಂದು ವಿನಂತಿಸಲಾಗಿದ್ದು, ಹಾಗೂ ಒಂದು ವಾರದಲ್ಲಿ ಮಾಸಿಕ ಸಂಕಷ್ಟ ಭತ್ಯೆಯನ್ನು ನೀಡಲು ತಾವು ಕೈಗೊಂಡ ಕ್ರಮದ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನೀಡಬೇಕು.

ಸದರಿ ಮಾಹಿತಿಯನ್ನು ನೀಡದೇ ಇದ್ದಲ್ಲಿ ಮಹಾನಗರ ಪಾಲಿಕೆಯ ಆಯುಕ್ತರ ಕೊಠಡಿ ಮುಂಭಾಗದಲ್ಲಿ ಉಪವಾಸ ಸತ್ಯಾಗೃಹವನ್ನು ಹಮ್ಮಿಕೊಳ್ಳಲಾಗುವುದೆಂದು ಬೆಳಗಾವಿ ಮಹಾನಗರ ಪಾಲಿಕೆ ಕರ್ನಾಟಕ ಸರ್ಕಾರದಿಂದ ನಾಮನಿರ್ದೇಶಿತ ಸದಸ್ಯರಾದ ಡಾ॥ ದಿನೇಶ ನಾಶಿಪುಡಿ ಅವರು ವಿನೂತನ ಪ್ರತಿಭಟನೆ ಮ‌ೂಲಕ ತಿಳಿಸಿದ್ದಾರೆ.

error: Content is protected !!