ಬೆಳಗಾವಿ-೦೮: ಭಾರತೀಯ ವೈದ್ಯಕೀಯ ಸಂಘ ಬೆಳಗಾವಿ ಶಾಖೆಯ ವತಿಯಿಂದ ದಿನಾಂಕ ನವಂಬರ್ 6 2024ರಂದು 69ನೇ ಕರ್ನಾಟಕ ರಾಜ್ಯೋತ್ಸವವನ್ನು ಸಂಭ್ರಮ ಸಡಗರದಿಂದ ನಗರದ ಐಎಂಎ ಹಾಲ್ ನಲ್ಲಿ ಆಚರಿಸಲಾಯಿತು. ಕರ್ನಾಟಕ ರಾಜ್ಯೋತ್ಸವದ ಹಿನ್ನೆಲೆಯಲ್ಲಿ ಸಾಂಸ್ಕೃತಿಕ ಸಂಭ್ರಮವನ್ನು ಆಯೋಜಿಸಲಾಗಿತ್ತು.
ಭಾರತೀಯ ವೈದ್ಯಕೀಯ ಸಂಘ ಬೆಳಗಾವಿ ಶಾಖೆಯ ಅಧ್ಯಕ್ಷರಾದ ಡಾ. ಸಚಿನ್ ಮಾವುಲಿ, ಕಾರ್ಯದರ್ಶಿಗಳಾದ ಡಾ. ರಾಘವೇಂದ್ರ ಸಾಗರ್, ಖಜಾಂಶಿಗಳಾದ ಡಾ. ಬಸವರಾಜ ಬಿಜ್ಜರಗಿ, ಹಿರಿಯ ವೈದ್ಯರಾದ ಡಾ. ರಾಜು ನಾಯಕ್, ಡಾ. ಮಾಲ್ತೇಶ್ ಪಾಟೀಲ್, ಡಾ. ಶಾಂತಾ ಶೇಖರ್ ಕಾರ್ಯಕ್ರಮದ ಉದ್ಘಾಟನೆಯನ್ನು ನೆರವೇರಿಸಿದರು. ಡಾ. ರಾಜು ನಾಯಕ್ ಅವರು ಕರ್ನಾಟಕ ರಾಜ್ಯೋತ್ಸವದ ಹಿನ್ನೆಲೆಯ ಕುರಿತಾಗಿ ಪ್ರಸ್ತಾವಿಕ ನುಡಿಗಳನ್ನಾಡಿದರು. ಐಎಂಎ ಸದಸ್ಯರಾದ ನಗರದ ವೈದ್ಯರು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳಾದ ಕನ್ನಡ ಗೀತ ಗಾಯನ, ಜಾನಪದ ನೃತ್ಯ, ಫ್ಯಾಶನ್ ಶೋ ಗಳಲ್ಲಿ ಭಾಗವಹಿಸಿ ಕಾರ್ಯಕ್ರಮಕ್ಕೆ ಶೋಭೆಯನ್ನು ತಂದರು. ಡಾ. ಅವಿನಾಶ್ ಕವಿಯವರು ಕಾರ್ಯಕ್ರಮವನ್ನು ನಿರೂಪಿಸಿದರು.