ಬೆಳಗಾವಿ-೦೨:ಕರ್ನಾಟಕ ರಾಜ್ಯೋತ್ಸವದ ನಿಮಿತ್ಯವಾಗಿ ಮರಾಠಿ ಭಾಷಿಕರು ನವೆಂಬರ್ 1 ಅನ್ನು ಕರಾಳ ದಿನವಾಗಿ ಆಚರಿಸುತ್ತಾರೆ.
ಈ ಸಂದರ್ಭದಲ್ಲಿ ಮಹಾರಾಷ್ಟ್ರ ಏಕೀಕರಣ ಸಮಿತಿ ವತಿಯಿಂದ ವಿರಾಟ್ ಸೈಕಲ್ ರ್ಯಾಲಿ ನಡೆಸಲಾಯಿತು.
ಮಹಾರಾಷ್ಟ್ರ ಏಕೀಕರಣ ಸಮಿತಿಯ ಕಾರ್ಯಕರ್ತರು, ಮಹಿಳೆಯರು, ಯುವಕರು ಮತ್ತು ವೃದ್ಧರು ಬೆಳಗ್ಗೆಯಿಂದಲೇ ಸಂಭಾಜಿ ಉದ್ಯಾನದಲ್ಲಿ ಪ್ರತಿಭಟನಾ ಹತ್ತಿರ ಸೇರಿ,
ಕರಾಳ ದಿನದಂದು, ಕಪ್ಪು ಬಟ್ಟೆ ಧರಿಸಿ, ಸಮಿತಿಯ ಬ್ಯಾನರ್ ಮತ್ತು ಬೆಳಗಾವಿ, ಕಾರವಾರ, ಬೀದರ್, ಭಾಲ್ಕಿಯೊಂದಿಗೆ ಸಂಯುಕ್ತ ಮಹಾರಾಷ್ಟ್ರ ರಚನೆಯಾಗಬೇಕು ಎಂಬ ಘೋಷಣೆಗಳು ಕೂಗಿದರು.ಈ ವೇಳೆ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರನ್ನು ನಿಯೋಜಿಸಲಾಗಿತ್ತು.
ಮಹಾರಾಷ್ಟ್ರ ಏಕೀಕರಣ ಸಮಿತಿ ನೇತೃತ್ವದಲ್ಲಿ ಬೆಳಗ್ಗೆ 9.30ಕ್ಕೆ ಪ್ರತಿಭಟನಾ ರ್ಯಾಲಿ ಆರಂಭವಾಯಿತು. ಸಂಭಾಜಿ ಉದ್ಯಾನದಿಂದ ಭಾಂದೂರು ಗಲ್ಲಿ ಮೂಲಕ ಅಂಬಾಭವನ ರಸ್ತೆ, ಶಿವಾಜಿ ರಸ್ತೆ, ಹೇಮು ಕಲಾನಿ ಚೌಕ್, ತಹಶೀಲ್ದಾರ್ ಗಲ್ಲಿ, ಪಾಟೀಲ್ ಗಲ್ಲಿ, ಎಸ್‌ಪಿಎಂ ರಸ್ತೆ ಮೂಲಕ ಕಪಿಲೇಶ್ವರ ಮೇಲ್ಸೇತುವೆ, ಹೊಸೂರು ರಸ್ತೆ, ನಾರ್ವೇಕರ ಗಲ್ಲಿ, ಆಚಾರ್ಯ ಗಲ್ಲಿ, ಸರಾಫ್ ಗಲ್ಲಿ, ಕಚೇರಿ ಗಲ್ಲಿ, ಶಹಾಪುರ, ಮೀರಾಪುರ ಗಲ್ಲಿ ಮೂಲಕ ರ್ಯಾಲಿ, ಮಹಾತ್ಮ ಫುಲೆ ರಸ್ತೆ, ಗೋವಾವೇಸ್ ವೃತ್ತದ ಮೂಲಕ ಮರಾಠಾ ಮಂದಿರ ರೈಲ್ವೆ ಮೇಲ್ಸೇತುವೆ ಹತ್ತಿರ ರ್ಯಾಲಿ ಮುಕ್ತಾಯಗೊಳಿಸಲಾಯಿತು.
ಈ ಸಂದರ್ಭದಲ್ಲಿ ಸಮಿತಿ ಮುಖಂಡರು, ಕಾರ್ಯಕರ್ತರು, ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.