ಬೆಳಗಾವಿ-೦೨ :ಬರುವ ಸೋಮವಾರ ನವ್ಹೆಂಬರ್ ೪ ರಂದು ವಕ್ಫ್ ಕಾಯ್ದೆಯಿಂದ ಜನಸಾಮಾನ್ಯರಿಗೆ ಹಾಗೂ ರೈತರಿಗೆ ಅನ್ಯಾಯವಾಗುತ್ತಿದ್ದು, ಇದನ್ನು ಖಂಡಿಸಿ ಬಿಜೆಪಿ ವತಿಯಿಂದ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಮಾಜಿ ಶಾಸಕ ಸಂಜಯ್ ಪಾಟೀಲ್ ತಿಳಿಸಿದರು.
ನಗರದ ಪ್ರವಾಸಿ ಮಂದಿರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು. ರೈತರ ಜಮೀನನ್ನು ಕಬಳಿಕೆ ಮಾಡಿಕೊಳ್ಳುವ ಕೆಲಸವನ್ನು ವಕ್ಫ್ ಬೋರ್ಡ್ ಮಾಡುತ್ತಿದೆ. ಬಡವರ ಜಮೀನು ತಮ್ಮದೆಂದು ಹೇಳುತ್ತಿರುವ ವಕ್ಫ್ ಬೋರ್ಡ್ ಗೆ ಅಧಿಕಾರ ಕೊಟ್ಟಿದ್ದು ಯಾರು? ಈ ಕುರಿತು ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.
ಶಾಸಕ ಅಭಯ್ ಪಾಟೀಲ್ ಮಾತನಾಡಿ. ವಕ್ಫ್ ಬೋರ್ಡ್ ರೈತರ ಜಮೀನುಗಳನ್ನು ತನ್ನದೆಂದು ಹೇಳಿಕೊಳ್ಳುತ್ತಿದೆ. ಇದು ಕಾಂಗ್ರೆಸ್ ಸರ್ಕಾರದ ಒಂದು ಸಮುದಾಯವನ್ನು ಸೆಳೆಯುವ ಉದ್ದೇಶದಿಂದ ಈ ರೀತಿಯ ಕೃತ್ಯ ಎಸಗುತ್ತಿದೆ. ಕೇವಲ ಬೆಳಗಾವಿ ದಕ್ಷಿಣ ಮತಕ್ಷೇತ್ರ ಒಂದರಲ್ಲೇ 200 ಜನಕ್ಕೆ ವಕ್ಫ್ ಬೋರ್ಡ್ ನಿಂದ ನೋಟಿಸ್ ಜಾರಿ ಮಾಡಿದ್ದು ಹಲವು ದಶಕಗಳಿಂದ ಮನೆ ಹೊಂದಿರುವ ನಿವಾಸಿಗಳಿಗೆ ಈ ರೀತಿಯಲ್ಲಿ ನೋಟಿಸ್ ನೀಡಿದ್ದು ಎಷ್ಟು ಸರಿ ಎಂದು ಪ್ರಶ್ನಿಸಿದರು.
ಈ ಸಂದರ್ಭದಲ್ಲಿ ಮಾಜಿ ಶಾಸಕ ಅನಿಲ್ ಬೆನಕೆ, ಮುಖಂಡರಾದ ಎಂ,ಬಿ ಜಿರಲಿ, ಮುರುಘೇಂದ್ರ ಗೌಡ ಪಾಟೀಲ್, ಎಫ್, ಎಸ್ ಸಿದ್ಧನಗೌಡರ್, ಹಣಮಂತ ಕೊಂಗಾಲಿ,ಇತರರು ಹಾಜರಿದ್ದರು.