23/12/2024
IMG-20241031-WA0004

ಬೆಳಗಾವಿ-೩೧:ಕುಂದಾನಗರಿ ಬೆಳಗಾವಿಯಲ್ಲಿ ನಗರದ ಖಡೇಬಜಾರ್, ಶನಿವಾರ ಕೂಟ, ಪಾಂಗುಳ ಗಲ್ಲಿ, ಮಾರುತಿ ಗಲ್ಲಿ, ಸಮಾದೇವ ಗಲ್ಲಿ ಸೇರಿದಂತೆ ನಗರದ ಬಹುತೇಕ ಮಾರುಕಟ್ಟೆ ಪ್ರದೇಶಗಳಲ್ಲಿ ಜನರು ಹಬ್ಬದ ವಸ್ತುಗಳ ಖರೀದಿಯಲ್ಲಿ ತೊಡಗಿದ್ದಾರೆ. ಕಳೆದೆರಡು ಮೂರು ದಿನಗಳಿಂದ ನಗರದ ಪ್ರಮುಖ ಮಾರುಕಟ್ಟೆಗಳಲ್ಲಿ ಜನದಟ್ಟಣೆ ಕಂಡು ಬರುತ್ತಿದೆ.

ಇಂದಿನಿಂದ ಆರಂಭವಾದ ದೀಪಾವಳಿ ಹಬ್ಬವನ್ನು ಸಂಭ್ರಮಿಸಲು ಜನತೆ ಭರ್ಜರಿ ತಯಾರಿ ನಡೆಸುತ್ತಿದ್ದಾರೆ. ನಗರದ ಜ್ಯುವೆಲ್ಲರಿ ಮಳಿಗೆಗಳು ಹಾಗೂ ಜವಳಿ ಮಳಿಗೆಗಳಲ್ಲಿ ಜನಜಂಗುಳಿ ತುಂಬಿ ತುಳುಕುತ್ತಿದ್ದು, ವ್ಯಾಪಾರ-ವಹಿವಾಟು ಬಲು ಜೋರಾಗಿ ನಡೆಯುತ್ತಿದೆ.

ದೀಪಾವಳಿ ಹಬ್ಬದ ಪ್ರಯುಕ್ತ ದಿನಸಿ ಅಂಗಡಿಗಳಿಗೆ ಜನ ಮುಗಿಬೀಳುತ್ತಿದ್ದಾರೆ. ಜೊತೆಗೆ ಬೇಕರಿಗಳಲ್ಲಿಯೂ ಸಿದ್ಧ ತಿಂಡಿ ತಿನಿಸುಗಳ ಖರೀದಿಯೂ ಜೋರಾಗಿದ್ದು. ಅಲಂಕಾರಿಕ ವಸ್ತುಗಳಿಗೆ ಮಾರುಕಟ್ಟೆಯಲ್ಲಿ ಬೇಡಿಕೆ ಶುರುವಾಗಿದೆ.

ವಾಹನಗಳ ಖರೀದಿಯಲ್ಲಿಯೂ ಭರಾಟೆ,ಕಾರ್, ಬೈಕ್ ಶೋ ರೂಂಗಳಲ್ಲಿಯೂ ಜನಜಂಗುಳಿ ಕಾಣಿಸುತ್ತಿದೆ. ದೀಪಾವಳಿ ಹಬ್ಬದ ಸಮಯದಲ್ಲಿ ವಾಹನಗಳನ್ನು ಖರೀದಿಸುವ ಆಲೋಚನೆಯಲ್ಲಿರುವ ಮಂದಿ ವಾಹನಗಳ ಶೋ ರೂಂಗಳಿಗೆ ಭೇಟಿ ನೀಡಿ ವೀಕ್ಷಣೆ ಮಾಡುತ್ತಿದ್ದಾರೆ. ಅದೇ ರೀತಿ ಟಿವಿ ಮತ್ತು ಮೊಬೈಲ್ ಮಳಿಗೆಗಳಲ್ಲಿಯೂ ಜನರ ದಂಡು ಕಾಣಿಸುತ್ತಿದೆ.

error: Content is protected !!