23/12/2024
IMG-20241030-WA0080

ಬೈಲಹೊಂಗಲ-೩೦: ವಿದ್ಯಾರ್ಥಿಗಳಲ್ಲಿ‌ರುವ ಸುಪ್ತ ಶಕ್ತಿಯನ್ನು ಹೊರತರಲು ಶಿಕ್ಷಕರಿಂದ ಮಾತ್ರಸಾಧ್ಯ ಅಂತಹ

ಶಿಕ್ಷಕ ವೃತ್ತಿ ಮಾಡುವುದು ಭಾಗ್ಯವಂತರ ಕೆಲಸವಾಗಿದ್ದು, ಇದೊಂದು ಅತ್ಯಂತ ಶ್ರೇಷ್ಠ ಸೇವೆಯಾಗಿದೆ ಎಂದು ನ್ಯಾಯವಾದಿ ಎಫ್.ಎಸ್.ಸಿದ್ದನಗೌಡರ ಹೇಳಿದರು.
ಪಟ್ಟಣದ ಕೆ ಆರ್ ಸಿ ಎಸ್ ಶಿಕ್ಷಣ ಮಹಾವಿದ್ಯಾಲಯದಲ್ಲಿ ಬುಧವಾರದಂದು ನಡೆದ ಸಂಸ್ಥೆಯ
ದೈಹಿಕ ನಿರ್ದೇಶಕರಾಗಿ 31 ವರ್ಷದ ಸಾರ್ಥಕ‌ ಸೇವೆ ಸಲ್ಲಿಸಿ ನಿವೃತ್ತಿಯಾದ ಬಿ.ಸಿ.ಹರ್ಲಾಪೂರ ಅವರ ಬಿಳ್ಕೊಡುಗೆ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿ,
ಶಿಕ್ಷಕಕರು ಕೇವಲ ಒಂದೆ ಕ್ಷೇತ್ರಕ್ಕೆ ಸೀಮಿತವಾಗದೆ ಎಲ್ಲ ಕ್ಷೇತ್ರಗಳಲ್ಲಿ ವಿದ್ಯಾರ್ಥಿಗಳನ್ನು ಬೆಳೆಸುವ ಗಾರುಡಿಗರು. ಶಿಕ್ಷಕವೃತ್ತಿ
ಸಾಮಾಜಿಕ ಬದಲಾವಣೆ ತರುವಂತಹ ಹುದ್ದೆಯಾಗಿದೆ. ಈ ಸೇವೆ ಸಿಗುವುದು ತುಂಬಾ ಅದೃಷ್ಟವಂತರಿಗೆ, ಕಠಿಣ ಪರಿಶ್ರಮಿಗಳಿಗೆ ಮತ್ತು ನಿರಂತರ ಪ್ರಯತ್ನಗಳನ್ನು ಮಾಡುತ್ತಲೇ ತಮ್ಮ ಜೀವನ ಕಟ್ಟಿಕೊಳ್ಳುವ ವ್ಯಕ್ತಿಗಳಿಗೆ ಒಲಿದಿದೆ. ಆ ಕಾರಣದಿಂದಾಗಿ ವಿದ್ಯಾರ್ಥಿಗಳಿಗೆ ಪ್ರತಿ ಕ್ಷಣವೂ ಕಲಿಸುವ ತುಳಿತ ಇಮ್ಮಡಿಗೊಳಿಸಿಕೊಳ್ಳಬೇಕು. ಶಿಕ್ಷಕರಾದವರನ್ನು ವಿದ್ಯಾರ್ಥಿಗಳು ಸದಾ ಅನುಕರಣೆ ಮಾಡುವದರಿಂದ‌ ಇವರ ಪ್ರಭಾವ ವಿದ್ಯಾರ್ಥಿಗಳ ಮೇಲೆ ಇರುತ್ತದೆ ಎಂದರು.
ಸರ್ಕಾರಿ ಮಹಿಳಾ ಕಾಲೇಜು ಪ್ರಾಚಾರ್ಯ ಬಿ.ಕೆ. ಮದವಾಲ, ಶಿಕ್ಷಣ ಮಹಾವಿದ್ಯಾಲಯದ ಪ್ರಾಚಾರ್ಯೆ ಮಹಾದೇವಿ ತಲ್ಲೂರ ಮಾತನಾಡಿ, ಶಿಕ್ಷಣ ಮಹಾವಿದ್ಯಾಲಯದಲ್ಲಿ ದೈಹಿಕ ಶಿಕ್ಷಕರಾಗಿ ನೇಮಕವಾಗಿದ್ದರು ಕಳೆದ 15 ವರ್ಷದಿಂದ ಸರ್ಕಾರಿ ಮಹಿಳಾ ಕಾಲೇಜಿನಲ್ಲಿಯು ಉತ್ತಮ ಸೇವೆ ಸಲ್ಲಿಸುವದರೊಂದಿಗೆ ಅನೇಕ ವಿದ್ಯಾರ್ಥಿಗಳನ್ನು ವಿಶ್ವವಿದ್ಯಾಲಯದ ಬ್ಲ್ಯೂ ಆಗುವದರೊಂದಿಗೆ ರಾಷ್ಟ್ರಮಟ್ಟದಲ್ಲಿ ವಿದ್ಯಾರ್ಥಿಗಳನ್ನು ಕ್ರೀಡೆಯಲ್ಲಿ ಪಾಲ್ಗೊಳ್ಳವಂತೆ ಮಾಡಿದ ಅವರ ಸಾಧನೆ ಶ್ಲಾಘನೀಯ ಎಂದರು.
ಕಾರ್ಯಕ್ರಮದಲ್ಲಿ ಮಾಜಿ ಜಿಪಂ ಸದಸ್ಯ ಈಶ್ವರ ಉಳೆಗಡ್ಡಿ, ಶಿಕ್ಷಕರಾದ ಪಿ.ಎಮ್‌.ಆಯಾಚಿತ, ವೀರಭದ್ರ ಕೌದಿ, ಚಂದ್ರಶೇಖರ ಮೆಳವೆಂಕಿ ಮಾತನಾಡಿದರು.
ಶಿಕ್ಷಣ ಮಹಾವಿದ್ಯಾಲಯದ ಉಪ ಸಮಿತಿ ಅಧ್ಯಕ್ಷ ಎನ್.ಎಸ್‌ ಪಾಟೀಲ‌ ಅಧ್ಯಕ್ಷತೆವಹಿಸಿದ್ದರು.
ಕಾರ್ಯಕ್ರಮದಲ್ಲಿ ಶಿಕ್ಷಕರಾದ ಪಿ.ಬಿ.ಹೂಲಿ. ಬಿ.ಎನ್.ಮುದೆನ್ನವರ,
ಬಿ.ಎಮ್.ಕಾಡೇಶನವರ, ಎಸ್.ಬಿ.ಕರಡಿಗುದ್ದಿ, ಎಮ್.ಎಸ್.ಅವಕನವರ, ಕೆ.ಪಿ.ತಿಪ್ಪೆಸ್ವಾಮಿ, ಸಿ.ಎಸ್.ಅರಕೆರಿ, ಶ್ರೀಶೈಲ ಪರಂಡೆ, ಎಮ್.ವಾಯ್.ಹಿತಾರಿಗೌಡರ, ಪ್ರಾಚಾರ್ಯರಾದ ಬಿ.ಬಿ.ಬೂದಿಹಾಳ, ಎಮ್.ಎಸ್.ಇಂಚಲ, ಪ್ರಾಧ್ಯಾಪಕ ರಾದ ಡಿ.ಎಮ್.ಏಣಗಿ, ಎನ್.ಡಿ ಚಿನ್ನಪ್ಪಗೌಡರ, ಮಂಜುನಾಥ ದೇಶನೂರ, ಮಲ್ಲೇಶ ಬೊಳೆತ್ತಿನ, ಈಶ್ವರ ಏಣಗಿ, ಮಹಾಂತೇಶ ಮೊರಬದ, ಸಹದೇವ ಗಡದ ಕೆ ಅರ್ ಸಿಈ ಪದವಿ ಕಾಲೇಜು, ಪದವಿ ಪೂರ್ವಕಾಲೇಜು ಹಾಗೂ ಸರ್ಕಾರಿ ಮಹಿಳಾ ಕಾಲೇಜು ಸಿಬ್ಬಂದಿ ವಿದ್ಯಾರ್ಥಿಗಳು ಇದ್ದರು. ಪ್ರಶಿಕ್ಷಣಾರ್ಥಿ ಸುನಂದಾ ಪಾಟೀಲ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

*ಕೆ.ಆರ್.ಸಿ.ಎಸ್.ಸಂಸ್ಥೆಯ ವಿದ್ಯಾರ್ಥಿಯಾಗಿ ಇದೆ ಸಂಸ್ಥೆಯಲ್ಲಿ ಹಾಗೂ ಸರ್ಕಾರಿ ಮಹಿಳಾ ಮಹಾವಿದ್ಯಾಲಯದಲ್ಲಿ ಸಾರ್ಥಕ 31 ವರ್ಷದ ಶಿಕ್ಷಕ ವೃತ್ತಿಯಲ್ಲಿ ಸುಖದುಖವನ್ನು ಕಂಡು ಸಂಸ್ಥೆಯಲ್ಲಿ ಸಲ್ಲಿಸಿರುವ ಸೇವೆ ತೃಪ್ತಿತಂದಿದೆ. ಅನೇಕ ವಿದ್ಯಾರ್ಥಿಗಳನ್ನ ವಿವಿಗಳಲ್ಲಿ, ರಾಜ್ಯ ಮತ್ತು ರಾಷ್ಟ್ರಮಟ್ಟದ ಕ್ರೀಡಾಪಟುಗಳನ್ನಾಗಿಸಿದ ಸಮಾಧಾನ ನನಗಿದೆ.*
ಪ್ರೋ.ಬಿ.ಸಿ. ಹರ್ಲಾಪೂರ

error: Content is protected !!