ಬೆಳಗಾವಿ-೨೪:ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ ಬೆಳಗಾವಿಯಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದ್ದು, ಮಹಾರಾಷ್ಟ್ರ ಏಕೀಕರಣ ಸಮಿತಿ (ಎಂ.ಇ.ಎಸ್.) ಅವರ “ಕರಾಳ ದಿನಾಚರಣೆ”ಗೆ ಸರ್ಕಾರವು ಅನುಮತಿ ನೀಡದಂತೆ ದೀಪಕ್ ಗುಡಗನಟ್ಟಿ ಒತ್ತಾಯಿಸಿದ್ದಾರೆ.
ಪ್ರತಿ ವರ್ಷವೂ ಎಂ.ಇ.ಎಸ್. ಗೆ ಈ ಕಾರ್ಯಕ್ರಮ ನಡೆಸಲು ಕೊನೆಯ ಕ್ಷಣದಲ್ಲಿ ಸರ್ಕಾರವು ಅನುಮತಿ ನೀಡುತ್ತದೆ, ಆದರೆ ಈ ಬಾರಿ ಯಾವುದೇ ಕಾರಣಕ್ಕೂ ಈ ಕಾರ್ಯಕ್ರಮಕ್ಕೆ ಅನುಮತಿ ನೀಡಬಾರದು ಎಂದು ಗುಡಗನಟ್ಟಿ ತೀವ್ರವಾಗಿ ವಾದಿಸುತ್ತಿದ್ದಾರೆ.ಇಂತಹ ಕಾರ್ಯಕ್ರಮಗಳು ಇಲ್ಲಿನ ಕನ್ನಡ ಮತ್ತು ಮರಾಠಿ ಸಮುದಾಯಗಳ ನಡುವಿನ ಶಾಂತಿಯುತ ಸಹವಾಸವನ್ನು ಹಾನಿ ಮಾಡುತ್ತವೆ. ಸರ್ಕಾರವು ಈ ಕಾರ್ಯಕ್ರಮಕ್ಕೆ ಅನುಮತಿ ನೀಡದ ಮೂಲಕ ಸಮುದಾಯದಲ್ಲಿ ಶಾಂತಿ ಕಾಪಾಡಬೇಕು ಎಂದು ಅವರು ಹೇಳಿದ್ದಾರೆ.
ಗುಡಗನಟ್ಟಿ ಅವರು,ಎಂ.ಇ.ಎಸ್. ತನ್ನ ರಾಜಕೀಯ ಪ್ರಭಾವವನ್ನು ಕಳೆದುಕೊಂಡಿದ್ದು, ಅದನ್ನು ಪುನಃ ಪಡೆಯಲು ಈ ತರದ ದಿನಾಚರಣೆಗಳನ್ನು ಆಯೋಜಿಸುತ್ತಿದೆ. ಇದು ಬೆಳಗಾವಿಯ ಶಾಂತಿಯುತ ಪರಿಸರಕ್ಕೆ ಮಾರಕವಾಗುತ್ತದೆ,ಎಂದು ಹೇಳಿದ್ದಾರೆ.
ಮಹಾರಾಷ್ಟ್ರದ ರಾಜಕಾರಣಿಗಳು ಬೆಳಗಾವಿಗೆ ಪ್ರವೇಶಿಸಲು ಪ್ರಯತ್ನಿಸಿದರೆ, ಅವರನ್ನು ಗಡಿಯಲ್ಲಿ ಬಂಧಿಸಬೇಕೆಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.
ಈ ಸಂದರ್ಭದಲ್ಲಿ ಬಾಳು ಜಡಗಿ
ಹೋಳೆಪ್ಪಾ ಸುಲಧಾಳ
ಸತೀಶ ಗುಡದವರ
ರಮೇಶ್ ಯರಗಣ್ಣವರ
ರುದ್ರಗೌಡ ಪಾಟೀಲ್
ಅಭಿಷೇಕ ಅಗಸಗಿ
ಅರ್ಜುನ ಕಾಂಬಳೆ
ಲೋಕೇಶ್ ರಾಠೋಡ
ಇಸ್ಮಾಯಿಲ್ ಮುಲ್ಲಾ
ಶ್ರೀಧರ್ ಕುರುಬರ
ಮಡಿವಾಳಿ ಗುಣಪ್ಪಾಚಿ
ರೋಖಾ ಲೋಕರಿ
ಮಹಾದೇವಿ ಕುರಬೇಟ
ಮಧು ಇಟಗಿ
ರೂಪಾಲಿ ಬಾರಿಗಡ್ಡಿ ಈ ಪ್ರತಿಭಟನೆ ಯಲ್ಲಿ ಉಪಸ್ಥಿತಿರಿದ್ದರು.