ಬೆಳಗಾವಿ-೨೧ :ಕುಂದಾನಗರಿ ಬೆಳಗಾವಿ ಯಲ್ಲಿರುವ ಪಾಟೀಲ ಗಲ್ಲಿಯ ಶ್ರೀ ಶನೈಶ್ಚರ ದೇವಸ್ಥಾನಕ್ಕೆ ಸಂಸದ ಜಗದೀಶ ಶೆಟ್ಟರ್ ಭೇಟಿ ನೀಡಿ ಪೂಜೆ, ಆರತಿ ನೆರವೇರಿಸಿ, ಲೋಕಕಲ್ಯಾಣಕ್ಕಾಗಿ ಪ್ರಾರ್ಥನೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಶ್ರೀ ಶನಿ ಮಂದಿರದ ಟ್ರಸ್ಟಿ ವಿಲಾಸ ಅಧ್ಯಾಪಕ ಅವರು ಸಂಸದ ಶೆಟ್ಟರ್ ಅವರನ್ನು ಸನ್ಮಾನಿಸಿದರು. ಈ ಸಂದರ್ಭದಲ್ಲಿ ದೇವಸ್ಥಾನದ ಜೀರ್ಣೋದ್ಧಾರ ಮತ್ತು ಅಭಿವೃದ್ಧಿಗೆ ಸಹಕರಿಸಿ ಬಿಜೆಪಿ ಧುರೀಣ ಕಿರಣ ಜಾಧವ, ಕಾರ್ಯಕರ್ತರಾದ ಸಂಜಯ ಭಂಡಾರಿ, ಜ್ಯೋತಿ ಶೆಟ್ಟಿ ಹಾಗೂ ಭಕ್ತರು ಹಾಜರಿದ್ದರು.