ಬೆಳಗಾವಿ-೧೭:ರಾಜ್ಯ ಮತ್ತು ಕೇಂದ್ರ ಸರ್ಕಾರ ನೇಕಾರಿಗೆ ಕಟ್ಟಡ ಕಾರ್ಮಿಕ ಮಾದರಿಯಲ್ಲಿ ವೃತ್ತಿಪರ ನೇಕಾರರಿಗೆ ಕಾರ್ಮಿಕ ಸೌಲಭ್ಯ ಒದಗಿಸಿ ಕಾರ್ಮಿಕರ ಕಾರ್ಡಗಳನ್ನು ಕಟ್ಟ ಕಡೆಯ ನೇಕಾರನಿಗೆ ಹಂಚಿಕೆ ಮಾಡುಬೇಕು. ಸೇರಿದಂತೆ ವಿವಿಧ ಬೇಡಿಯನ್ನು ಈಡೇರಿಸುವಂತೆ ಕರ್ನಾಟಕ ರಾಜ್ಯ ನೇಕಾರ ಸೇವಾ ಸಂಘ ಬುಧವಾರ ಜಿಲ್ಲಾಧಿಕಾರಿಗಳ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ರಾಣಿ ಚೆನ್ನಮ್ಮ ವೃತ್ತದಿಂದ ಜಿಲ್ಲಾ ಕಚೇರಿವರೆಗೆ ಪಾದಯಾತ್ರೆ ಮೂಲಕ ರಾಜ್ಯ ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗುತ್ತಾ ಬೃಹತ್ ಪ್ರತಿಭಟನೆ ನಡೆಸಿದರು.
ಕೈಮಗ್ಗ ಅಭಿವೃದ್ಧಿ ನಿಗಮದಲ್ಲಿ ನೂರಾರು ಕೋಟಿ ಅವ್ಯವಹಾರ ಆಗಿದ್ದು ಇದರ ಬಗ್ಗೆ ಸಮರ್ಪಕ ತನಿಖೆ ನಡೆಸಿ ತಪ್ಪಿತಸ್ಥರಿಗೆ ಶಿಕ್ಷೆ ಆಗಬೇಕು ಹಾಗೂಕೆ.ಎಚ್.ಡಿ.ಸಿ.ಯಲ್ಲಿ 37 ವರ್ಷಗಳಿಂದ ವಾಸಮಾಡುತ್ತಿರುವ 400 ಕುಟುಂಬಗಳಿಗೆ ಸಿ.ಟಿ.ಎಸ್. ಉತಾರ ಹಕ್ಕು ಪತ್ರ ಒದಗಿಸಬೇಕೆಂದು ಒತ್ತಾಯಿಸಿದರು.
ಕಳೆದ ಮೂರು ವರ್ಷದಲ್ಲಿ 52 ಜನ ನೇಕಾರರು ಆತ್ಮಹತ್ಯೆಗೆ ಶರಣಾಗಿದು ಇವರಲ್ಲಿ ಅನೇಕ ಜನರಿಗೆ ಪರಿಹಾರವು ದೊರೆತಿಲ್ಲ ಸುಮಾರು 10 ಲಕ್ಷ ರೂ.ಗಳ ಪರಿಹಾರ ಒದಗಿಸಬೇಕು. ನೇಕಾರರು ಸಹಕಾರಿ ಸಂಘಗಳಲ್ಲಿ ಕೆ.ಎಸ್.ಎಫ್.ಸಿ.ಯಲ್ಲಿ ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಪಡೆದಿದ್ದು ಸಾಲ ಸಾಲ ಪಡೆದಿದ್ದು ಇದನ್ನು ಸರ್ಕಾರ ಸಂಪೂರ್ಣ ಸಾಲ ಮನ್ನಾ ಮಾಡಬೇಕು ಎಂದು ಒತ್ತಾಯಿಸಿದರು.
ಕೇಂದ್ರ ಸರ್ಕಾರ ರೈತ ಸಮ್ಮಾನ ಯೋಜನೆಯಂತೆ ನೇಕಾರ ಸಮ್ಮಾನ ಯೋಜನೆಯನ್ನು ಜಾರಿ ಮಾಡಿ ಆಂಧ್ರ ಪ್ರದೇಶದ ತೆಲಂಗಾನ, ಕೆರಳ, ತಮಿಳುನಾಡಿನಲ್ಲಿ ನೇಕಾರರನ್ನು ಪ್ರೋತ್ಸಾಹಿಸುವಂತೆ ಕರ್ನಾಟಕದಲ್ಲು ಕೂಡಾ ನೇಕಾರನ್ನು ಪ್ರೋತ್ಸಾಹಿಸಬೇಕು ಜೊತೆಗೆ ತಮಿಳುನಾಡಿನಲ್ಲಿ ವೃತ್ತಿಪರ ನೇಕಾರರಿಗೆ ನಿರಂತರ ಉದ್ಯೋಗ ಒದಗಿಸುವ ಯೋಜನೆಯ ಮಾದರಿಯಲ್ಲಿ ಕರ್ನಾಟಕದಲ್ಲಿಯೂ ಕೂಡಾ ಜಾರಿ ಮಾಡಬೇಕೆಂದು ಆಗ್ರಹಿಸಿದರು.
ವೃತ್ತಿ ಪರ ನೇಕಾರರ ಸರ್ಪಕ ಯೋಜನೆಗಳನ್ನು ಒದಗಿಸಲು 1500 ಕೋಟಿ ಅನುದಾನವನ್ನು ಒದಗಿಸಬೇಕು. ರಾಜ್ಯದ ಬೇರೆ ಬೇರೆ ಜಿಲ್ಲೆಗಳಲ್ಲಿ ನೇಕಾರಿಕೆ ವೃತ್ತಿಯಲ್ಲಿರು ನೇಕಾರಿಕೆಯೇ ನಿಂತು ಹೋಗುತ್ತಿದ್ದು, ಇದನ್ನು ಸರಳಿಕರಣಗೊಳಿಸಿ, ನೇಕಾರಿಕೆ ಮಾಡಲು ಮತ್ತು ಸಾಲ ಸೌಲಭ್ಯ ಬೇರೆ ಯೋಜನೆಗಳಿಗೆ ದಾಖಲಾತಿಗಳ ಸರಳಿಕರಣಗೊಳಿಸಿ, ನೇಕಾರ ಮತ್ತು ನೇಕಾರಿಕೆಯನ್ನು ಉಳಿಸಬೇಕು ಎಂದು ಮನವಿ ಮಾಡಿಕೊಂಡರು.
ಇತ್ತೀಚೆಗೆ ವಿದ್ಯುತ್ ಕಂಪನಿಗಳು ಬಾಕಿ ಬಿಲ್ಲ ವಸೂಲಿಗೆ ಅತೀ ಕಠಿಣವಾಗಿ ಕ್ರಮ ಜರುಗಿಸಲು ಲೈನ್‌ಮನ್ ಗಳಿ ಸಂಪರ್ಕ ಕಡಿತ ಮಾಡುವ ಅಧಿಕಾರ ವಹಿಸಿ, ಗ್ರಾಹಕರನ್ನು ಹೆದರಿಸುವ ತಂತ್ರಗಾರಿಕೆ ಮಾಡುತ್ತಿದ್ದು, ನೇಕಾರ ಮತ್ತು ಗ್ರಾಹಕರ ಮೇಲಿನ ದಬ್ಬಾಳಿಕೆ ಕೂಡಲೇ ನಿಲ್ಲಬೇಕು ಈ ಎಲ್ಲ ಬೇಡಿಕೆಗಳು ಈಡೇರಿಸದೆ ಹೋದರೆ ಹುಬ್ಬಳ್ಳಿಯ ಕೆ.ಎಚ್.ಡಿ.ಸಿ.ಯ ಕೇಂದ್ರ ಕಛೇರಿಯ ಮುಂದೆ ಅ.19 ರಂದು ಬೃಹ ಪ್ರತಿಭಟನೆ ನಡೆಸಲಾಗುವುದು ಎಂದು ಈ ಸಂದರ್ಭದಲ್ಲಿ ಎಚ್ಚರಿಸಿದರು.