23/12/2024
IMG-20241016-WA0001

ಬೆಳಗಾವಿ-೧೬: ಆನ್ ಲೈನ್ ಬೆಟ್ಟಿಂಗ್ ಮತ್ತು ಆನ್ಸೆನ್ ಬೆಟ್ಟಿಂಗ್ ಗೇಮ್ ಗಳಿಂದ ಆಗುತ್ತಿರುವ ಅನಾಹುತಗಳನ್ನು ತಡೆಯುವುದು ಹಾಗೂ ಆನ್ ಲೈನ್ ಬೆಟ್ಟಿಂಗ್” ಗೇಮ್ ವೆಬ್ ಸೈಟ್ ನಿಷೇಧಿಸುವಂತೆ ಬುಧವಾರ  ಮನವಿ ಸಲ್ಲಿಸಿದರು.

ಬೆಳಗಾವಿಯ ಡಿಸಿ ಕಚೇರಿಗೆ ನಮ್ಮ ಕರ್ನಾಟಕ ಸೇನೆ ಜಿಲ್ಲಾ ಅಧ್ಯಕ್ಷ ಇರ್ಫಾನ ಅತ್ತಾರ ನೇತೃತ್ವದಲ್ಲಿ ಮನವಿ ಸಲ್ಲಿಸಲಾಯಿತು. ಸ್ವತಹ ಜಿಲ್ಲಾಧಿಕಾರಿ ಮಹಮ್ಮದ ರೋಷನ್ ಅವರು ಮನವಿ ಸ್ವೀಕರಿಸಿದರು.‌

ಸುಮಾರು ದಿನಗಳಿಂದ ಅನ್ ಲೈನ್ ಬೆಟ್ಟಿಂಗ್ ಹಾಗೂ ಆನ್ ಲೈನ್ ಗೇಮಿಂಗ್ ನಿಂದ ಆಗುತ್ತಿರುವ ಅನಾಹುತಗಳಿಂದ ಹಲವಾರು ವಿದ್ಯಾರ್ಥಿಗಳು, ಯುವಕರು, ಇದನ್ನು ಚಟವಾಗಿಸಿಕೊಂಡಿದ್ದಾರೆ. ಇದರಿಂದ ಹಲವಾರು ಕುಟುಂಬಗಳು ಬೀದಿಗೆ ಬಂದಿದೆ. ಹಾಗೂ ಹಲವಾರು ಯುವಕರು, ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಹಾಗಾಗಿ
ಇದರ ಬಗ್ಗೆ ಇನ್ನೂ ಹೆಚ್ಚಿನ ರೀತಿಯಲ್ಲಿ ಜನರಿಗೆ ಅರಿವುಮೂಡಿಸಲು ಹಾಗೂ ಈ ರೀತಿ ಮೋಸಮಾಡುವ ಉದ್ದೇಶದಿಂದಲೇ, ಜರನ್ನು ವಂಚಿಸುತ್ತಿರುವ ಆನ್ ಲೈನ್ ಗೇಮಿಂಗ್ ವೆಬೈಟ್ ಹಾಗೂ ಅಪ್ಲಿಕೇಶನ್‌ಗಳನ್ನು ನಿಷೇಧಿಸುವಂತೆ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷರಾದ  ಇರ್ಫಾನ  ಅತ್ತಾರ ಬಲರಾಮ,ಗಂಗಾಧರ ದೊಡಮನಿ ಸೇರಿದಂತೆ ಅನೇಕ ಕಾರ್ಯಕರ್ತರು ಉಪಸ್ಥಿತರಿದ್ದರು.

error: Content is protected !!