23/12/2024
IMG-20241010-WA0111
ಸುಸಜ್ಜಿತ‌ ಮಾಧ್ಯಮ‌ ಕೇಂದ್ರ ಸ್ಥಾಪನೆ: ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್
ಬೆಳಗಾವಿ-೧೧: ಮುಂಬರುವ ಕಿತ್ತೂರು ಉತ್ಸವ ಹಾಗೂ ಚನ್ನಮ್ಮನವರ 200ನೇ‌ ವಿಜಯೋತ್ಸವವನ್ನು  ಅದ್ದೂರಿ‌ಯಾಗಿ ಆಚರಿಸಲಾಗುತ್ತಿದೆ. ಉತ್ಸವದ ವ್ಯಾಪಕ ಪ್ರಚಾರಕ್ಕೆ ಅನುಕೂಲವಾಗುವಂತೆ ಸುಸಜ್ಜಿತ ಮಾಧ್ಯಮ ಕೇಂದ್ರವನ್ನು ಸ್ಥಾಪಿಸಲಾಗುವುದು ಎಂದು ಜಿಲ್ಲಾಧಿಕಾರಿ‌ ಮೊಹಮ್ಮದ್ ರೋಷನ್ ತಿಳಿಸಿದರು.
ಕಿತ್ತೂರಿನ ಶೆಟ್ಟರ ಕಲ್ಯಾಣ ಮಂಟಪದಲ್ಲಿ ಗುರುವಾರ  ನಡೆದ ಮಾಧ್ಯಮ‌ ಪ್ರತಿನಿಧಿಗಳ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಅ.23 ರಿಂದ ಮೂರು ದಿನಗಳ‌ ಕಾಲ ಜರುಗಲಿರುವ ಕಿತ್ತೂರು ಉತ್ಸವ ‌ಕಾರ್ಯಕ್ರಮದ ವರದಿಗಾಗಿ ಆಗಮಿಸುವ ಮಾಧ್ಯಮ ಪ್ರತಿನಿಧಿಗೆ ಯಾವುದೇ ರೀತಿಯ ಅನಾನುಕೂಲ ಆಗದಂತೆ ನಿಗಾವಹಿಸಲು ತಿಳಿಸಿದರು.
ಮಾಧ್ಯಮ‌‌‌ ಕೇಂದ್ರ ಹಾಗೂ ಮಾಧ್ಯಮ‌ ಪ್ರತಿನಿಧಿಗಳೊಂದಿಗೆ ಸಮನ್ವಯ ಸಾಧಿಸಲು  ಪ್ರಶಿಕ್ಷಣಾರ್ಥಿ ಆಯ್.ಎ.ಎಸ್. ಅಧಿಕಾರಿ‌ ದೀನೇಶಕುಮಾರ್ ಮೀನಾ ಅವರನ್ನು ಉಸ್ತುವಾರಿ ಅಧಿಕಾರಿಯಾಗಿರುತ್ತಾರೆ ಎಂದು ತಿಳಿಸಿದರು.
ಮಾಧ್ಯಮ ಕೇಂದ್ರ‌ ಹಾಗೂ ವೇದಿಕೆ ಹತ್ತಿರದ ಪತ್ರಕರ್ತರ ಗ್ಯಾಲರಿಯಲ್ಲಿ‌ ಯಾವುದೇ ಕಾರಣಕ್ಕೂ ಸಾರ್ವಜನಿಕರು ಅಥವಾ ಬೇರೆಯವರಿಗೆ ಅವಕಾಶ ನೀಡಬಾರದು ಎಂದರು.
ಮಾಧ್ಯಮ‌ ಕೇಂದ್ರದಲ್ಲಿ ಮಾಧ್ಯಮ ಪ್ರತಿನಿಧಿಗಳು ಕಾರ್ಯಕ್ರಮದ‌ ವರದಿಗಾಗಿ ಸುಸಜ್ಜಿತ ಗಣಕಯಂತ್ರ, ಹೈಸ್ಪಿಡ್ ಇಂಟರನೆಟ್ ವ್ಯವಸ್ಥೆ ಜೊತೆಗೆ ಉತ್ತಮ ಆಸನ ವ್ಯವಸ್ಥೆಯಾಗಬೇಕು. ಮಾಧ್ಯಮ‌ ಕೇಂದ್ರದ ಸಂಪೂರ್ಣ ಮೇಲುಸ್ತುವಾರಿ ಜವಾಬ್ದಾರಿ ಹಾಗೂ ಮಾಧ್ಯಮ‌ ಸಮನ್ವಯದ‌ ಜವಾಬ್ದಾರಿ  ಪ್ರಶಿಕ್ಷಣಾರ್ಥಿ ಆಯ್.ಎ.ಎಸ್. ಅಧಿಕಾರಿಗಳು ವಹಿಸಿಕೊಳ್ಳುವಂತೆ ಸೂಚಿಸಿದರು.
ಇದರ ಜೊತೆಗೆ ಮಾಧ್ಯಮ ಪ್ರತಿನಿಧಿಗಳು ಕಾರ್ಯಕ್ರಮದ ಮುಖ್ಯ ವೇದಿಕೆ ಹಾಗೂ ಮಾಧ್ಯಮ ಕೇಂದ್ರಕ್ಕೆ
ತಲುಪಲು ಪ್ರತ್ಯೇಕ ದಾರಿ ವ್ಯವಸ್ಥೆ ಆಗಬೇಕು. ಕಾರ್ಯಕ್ರಮದ ವರದಿಗಾಗಿ ಆಗಮಿಸುವಂತಹ ಪತ್ರಕರ್ತರಿಗೆ ಪಾಸಗಳನ್ನು ವಿತರಿಸುವದರ ಜೊತೆಗೆ  ಎಲ್ಲ ರೀತಿಯ ಸೌಲಭ್ಯಗಳನ್ನು ಒದಗಿಸುವಂತೆ ತಿಳಿಸಿದರು.
ಒಟ್ಟಾರೆಯಾಗಿ ಕಿತ್ತೂರು ಉತ್ಸವ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಜಿಲ್ಲಾಡಳಿತದೊಂದಿಗೆ  ಮಾಧ್ಯಮ‌ ಪ್ರತಿನಿಧಿಗಳು ಕೈಜೋಡಿಸುವಂತೆ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅವರು ಕೋರಿದರು.
ಸಭೆಯಲ್ಲಿ ಪ್ರಶಿಕ್ಷಣಾರ್ಥಿ ದಿನೇಶಕುಮಾರ ಮೀನಾ, ಬೈಲಹೊಂಗಲ ಉಪ ವಿಭಾಗಾಧಿಕಾರಿ ಪ್ರಭಾವತಿ ಬಫಕ್ಕೀರಪುರ, ವಾರ್ತಾ ಇಲಾಖೆ ಉಪನಿರ್ದೆಶಕ ಗುರುನಾಥ ಕಡಬೂರ, ತಹಶೀಲ್ದಾರ ರವೀಂದ್ರ‌ ಹಾದಿಮನಿ, ಪತ್ರಕರ್ತರಾದ ದೀಲಿಪ್ ಕುರಂದವಾಡೆ, ಸಹದೇವ ಮಾನೆ, ಮಂಜುನಾಥ ಪಾಟೀಲ, ಮೈಲಾರಿ ಪಟಾತ್, ರವೀಂದ್ರ ಉಪ್ಪಾರ, ಶ್ರೀಶೈಲ್ ಮಠದ, ಸಂತೋಷ ಚಿನಗುಡಿ, ಕುಂತಿನಾಥ ಕಲಮನಿ, ಕೇಶವ ಆದಿ‌‌ ಸೇರಿದಂತೆ  ಕಿತ್ತೂರಿನ ಕಾರ್ಯನಿರತ ಪತ್ರಕರ್ತರು ಹಾಜರಿದ್ದರು.
error: Content is protected !!