ಬೆಳಗಾವಿ-೧೧:ಬೆಳಗಾವಿ ಮಹಾನಗರ ಪಾಲಿಕೆಯ ಸಾಮಾನ್ಯ ಸಭೆ ನಿನ್ನೆ(ಗುರುವಾರ) ನಡೆಯಿತು. ಈ ಸಭೆಯಲ್ಲಿ ಎಲ್ ಅಂಡ್ ಟಿ ಕಂಪನಿಯ ಕಾರ್ಯಶೈಲಿ ಬಗ್ಗೆಯೂ ಅಧಿಕಾರಿಗಳು ಉತ್ತರಿಸುವಂತೆ ಸೂಚಿಸಲಾಯಿತು. ಈಗಿನ ಕಾರ್ಪೊರೇಟರ್‌ಗಳು ಎಲ್ ಆ್ಯಂಡ್‌ಟಿ ಕಂಪನಿಯಿಂದ ಅಭಿವೃದ್ಧಿ ಕಾಮಗಾರಿಗಳು ನಡೆದರೂ ರಸ್ತೆಗಳು ಮೊದಲಿನ ಸ್ಥಿತಿಗೆ ತಲುಪುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಮೇಲಾಗಿ ದಕ್ಷಿಣ ಕ್ಷೇತ್ರದಲ್ಲಿ ಎಲ್ ಆ್ಯಂಡ್‌ಟಿ ಕಂಪನಿಯಿಂದ ಹಲವು ರಸ್ತೆಗಳು ಕೆಡವಿದ್ದು, ಅಭಿವೃದ್ಧಿ ಕಾಮಗಾರಿಗೆ ಕೆಡವಿರುವ ರಸ್ತೆಗಳಿಂದ ಹಲವು ಅಪಘಾತಗಳು ಸಂಭವಿಸಿ ನಾಗರಿಕರು ತೊಂದರೆ ಅನುಭವಿಸುತ್ತಿದ್ದಾರೆ. ಮೇಯರ್ ಸವಿತಾ ಕಾಂಬಳೆ ಅಧ್ಯಕ್ಷತೆಯಲ್ಲಿ ನಡೆದ ಈ ಸಭೆಯಲ್ಲಿ ಪದ್ಮವಿಭೂಷಣ ರತನ್ ಟಾಟಾ ಹಾಗೂ ನಗರಸಭೆ ಮಾಜಿ ನೌಕರ ಎಚ್. ಬಿ. ಪಿರ್ಜಾದೆಯನ್ನು ೨ ನಿಮಿಷಗಳ ಮೌನಾಚರಣೆ ನಡೆಸಿದರು.
ಈ ಎಲ್ ಅಂಡ್ ಟಿ ಕಂಪನಿಯ ಬಗ್ಗೆಯೇ ಹೆಚ್ಚಿನ ದೂರುಗಳು ಬಂದಿವೆ ಎಂದು ಸಭೆಯಲ್ಲಿ ಗಮನ ಸೆಳೆದರು. ನೀರು ಪೂರೈಕೆಯಾಗದೆ ಭಾರಿ ಬಿಲ್ ಪಾವತಿ, ಅನೇಕ ನಾಗರಿಕರು ಪೈಪ್ ಸಂಪರ್ಕದಿಂದ ವಂಚಿತರಾಗಿರುವುದರಿಂದ ನೀರಿನ ತೊಂದರೆಯಂತಹ ಹಲವು ಸಮಸ್ಯೆಗಳನ್ನು ಸಭೆಯಲ್ಲಿ ಓದಲಾಯಿತು. ಇದರಿಂದಾಗಿ ಎಲ್ ಆ್ಯಂಡ್ ಟಿ ಕಂಪನಿಯ ಎಲ್ಲ ಸಮಸ್ಯೆಗಳನ್ನು ಪರಿಹರಿಸಲು ಪ್ರತ್ಯೇಕ ಸಭೆ ನಡೆಸಲು ನಗರಸಭೆಯ ಸಾಮಾನ್ಯ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು.