23/12/2024
IMG-20241008-WA0131

ಬೆಳಗಾವಿ-೦೮: ಬಸವಾದಿ ಶರಣದ ಮಾರ್ಗದಂತೆ ಶೈಕ್ಷಣಿಕ, ಸಾಮಾಜಿಕ , ಧಾರ್ಮಿಕ, ಆಧ್ಯಾತ್ಮಿಕ ಕ್ರಾಂತಿ ಮಾಡಿದವರು ಶ್ರೀ ಗುರು ಕುಮಾರ ಮಹಾಶಿವಯೋಗಿಗಳು ಎಂದು ಪ್ರಭು ನೀಲಕಂಠ ಶ್ರೀಗಳು ಹೇಳಿದರು.

ಶಿವಬಸವ ನಗರದ ಶ್ರೀ ಕಾರಂಜಿಮಠದಲ್ಲಿ ನಡೆದ 179 ನೇ ಮಾಸಿಕ ಶಿವಾನುಭವದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಹಾನಗಲ್‌ ಶ್ರೀಗಳ ಸ್ಮರಣಿಸಿ, ಸಮಾಜಕ್ಕೆ ಶ್ರೀಗಳ ನೀಡಿರುವ ಕೊಡುಗೆ ಅಪಾರ ಎಂದು

ಲಿಂಗಾಯತಕ್ಕೆ ಬಸವಣ್ಣನೇ ಮೂಲ, ಶಿವಶರಣ ಪರಂಪರೆಯಲ್ಲಿ ನಡೆದವರು. 19 ನೇ ಶತಮಾನದಲ್ಲಿ ಬಾಳಿ ಬೆಳಗಿದ ಹಾನಗಲ್ಲದ ಪರಮ ಪೂಜ್ಯ ಶ್ರೀ ಗುರು ಕುಮಾರ ಮಹಾಶಿವಯೋಗಿಗಳು, ಬಾಗಲಕೋಟ ಜಿಲ್ಲೆಯ ಬಾದಾಮಿ ತಾಲೂಕಿನಲ್ಲಿ ಶಿವಯೋಗ ಮಂದಿರ ಸ್ಥಾಪಿಸಿ ಮಠಾಧೀಶರಾಗುವ ಸಾಧಕರಿಗೆ ತರಬೇತಿ ನೀಡಿದ್ದಾರೆ.

ಪ್ರತಿಯೊಂದು ಮಠ-ಪೀಠಗಳಿಗೆ ಮಠಾಧಿ ಪತಿಗಳನ್ನಾಗಿ ಮಾಡಿ, ಅವರ ಮೂಲಕ ವಚನ ಸಾಹಿತ್ಯ , ಶೈಕ್ಷಣಿಕ, ಸಾಮಾಜಿಕ , ಧಾರ್ಮಿಕ, ಆಧ್ಯಾತ್ಮಿಕ ಕ್ರಾಂತಿ ಮಾಡಿದವರು ಹಾನಗಲ್‌ ಕುಮಾರ ಮಹಾಶಿವಯೋಗಿಗಳು ಶ್ರೀಮದ್ವೀರಶೈವ ಶಿವಯೋಗ ಮಂದಿರ ಜೊತೆಗೆ ಅಖಿಲ ಭಾರತ ವೀರಶೈವ ಮಹಾಸಭಾ ಸ್ಥಾಪಿಸಿ, ಧರ್ಮಮುಖಿ ಕೆಲಸಗಳನ್ನು ಮಾಡಿದವರು. ಶಿರಸಂಗಿ ಲಿಂಗರಾಜರ ಮನವೊಲಿಸಿ ಲಿಂಗಾಯತ ಎಜ್ಯುಕೇಶನ್‌ ಫಂಡ್‌ ಸ್ಥಾಪಿಸಿ, ಧರ್ಮದ ಬಡ ಮತ್ತು ಪ್ರತಿಭಾವಂತರಿಗೆ ಶಿಕ್ಷಣ ಪಡೆಯಲು ಅನುಕೂಲ ಮಾಡಿಕೊಟ್ಟರು. ಕಾಶ್ಮೀರ್‌- ಕೋಲ್ಕತ್ತಾದಲ್ಲಿ ಸಿಗಲಾರದ ಗ್ರಂಥಗಳು ಸ್ಥಾಪಿಸಿ ಗ್ರಂಥಾಯಲದಲ್ಲಿ ಗ್ರಂಥಗಳು ದೊರೆಯುವ ಹಾಗೇ ಮಾಡಿದವರು. ಹಾನಗಲ್ಲ ಶ್ರೀಗಳು ಆತ್ಮೋದ್ಧಾರ ಜೊತೆಗೆ ಸಮಾಜೋದ್ಧಾರ ಸಾಧಿಸಿದರು ಎಂದು ಪ್ರಭು ನೀಲಕಂಠ ಶ್ರೀಗಳು ಹೇಳಿದರು.

ಈ ವೇಳೆ ಶೀ ಕಾರಂಜಿಮಠ ಪೂಜ್ಯ ಶ್ರೀ ಗುರುಸಿದ್ಧ ಮಾಹಾಸ್ವಾಮಿಗಳು ಸಾನಿಧ್ಯವಹಿಸಿದರು.

ಚಿಕ್ಕೋಡಿ ಸಹಕಾರಿ ಸಂಘದ ಧುರೀಣರಾದ ಜಗದೀಶ ಎಂ. ಕವಟಗಿಮಠ , ಪುರಸಭೆ ಅಧ್ಯಕ್ಷೇ ವೀಣಾ ಜಗದೀಶಕವಟಗಿಮಠ ಅವರನ್ನು ಸನ್ಮಾನಿಸಲಾಯಿತು. ಶ್ರೀಕಾಂತ ಶಾನವಾಡ ಸ್ವಾಗಿತಿಸಿದರು. ಪ್ರೊ. ವ್ಹಿ.ಬಿ ದೊಡಮನಿ ಗ್ರಂಥ ಪುಷ್ಪಾರ್ಪಣೆ , ಪ್ರೊ. ಎ ಕೆ. ಪಾಟೀಲ. ನಿರೂಪಿಸಿದರು. ವಕೀಲರಾದ ವ್ಹಿ. ಕೆ ಪಾಟೀಲ ವಂದಿಸಿದರು.

error: Content is protected !!