ಬೆಳಗಾವಿ-೦೮: ಬೆಳಗಾವಿಯ ಜಿಲ್ಲಾ ಕಮಾಂಡೆಂಟ್ ಆಗಿದ್ದ ಡಾ. ಕಿರಣ್ ಆರ್ ನಾಯ್ಕ ಅವರ ಮೇಲೆ ಸುಳ್ಳು ಆರೋಪದಡಿ ಸೇವೆಯಿಂದ ಕರ್ನಾಟಕ ಸರ್ಕಾರದ ಗೃಹ ಇಲಾಖೆಯು ಅಮಾನತ್ತು ಮಾಡಿತು, ಇದನ್ನು ಪ್ರಶ್ನಿಸಿ ಡಾ. ಕಿರಣ ನಾಯ್ಕ ಅವರು ಹೈ ಕೋರ್ಟ್ ಮೆಟ್ಟಿಲೇರಿದರು. ಅವರ ಮೇಲೆ ಇದ್ದ ಎಲ್ಲಾ ಆರೋಪಗಳು ಸುಳ್ಳು ಎಂದು ಸಾಬೀತಾಗಿ, ಮರು ನೇಮಕಕ್ಕೆ ಹೈ ಕೋರ್ಟ್ ತೀರ್ಪು ನೀಡಿದೆ.
2023 ರಲ್ಲಿ ಗೃಹ ರಕ್ಷಕ ದಳ ಇಲಾಖೆಯ
ಕೆಲ ಸಿಬ್ಬಂದಿ ಮತ್ತು ಅಧಿಕಾರಿಗಳು ತಮ್ಮ ತಪ್ಪನ್ನು ಮರೆಮಾಚಲು ಆಗಿನ ಬೆಳಗಾವಿ ಜಿಲ್ಲೆಯ ಗೃಹ ರಕ್ಷಕ ದಳ ಇಲಾಖೆಯ ನಿಷ್ಠಾವಂತ ಹಾಗೂ ದಕ್ಷ ಅಧಿಕಾರಿ ಆಗಿದ್ದ ಡಾ. ಕಿರಣ ಆರ್ ನಾಯ್ಕ ಅವರ ಮೇಲೆ ಇಲ್ಲಸಲ್ಲದ ಆದಾರ ರಹಿತ ಸುಳ್ಳು ಆರೋಪ ಮಾಡಿ, ಯಾವುದೇ ತನಿಖೆ ಇಲ್ಲದೆ, ಗೃಹ ಇಲಾಖೆಯ ಆಧಿಕಾರಿಗಳು ಡಾ. ಕಿರಣ ನಾಯ್ಕ ಅವರನ್ನು ಅಮಾನತ್ತು ಮಾಡಿದರು. ಇದನ್ನು ಪ್ರಶ್ನಿಸಿ ಡಾ. ಕಿರಣ ನಾಯ್ಕ ಅವರು ಹೈ ಕೋರ್ಟ್ ಗೆ ರೀಟ್ ಪಿಟಿಶನ್ ಸಲ್ಲಿಸಿದರು. ಬಳಿಕ ಹೈ ಕೋರ್ಟ್ ಧಾರವಾಡ ಪೀಠವು ವಾದ ಪ್ರತಿವಾದ ಆಲಿಸಿ, ಡಾ. ಕಿರಣ ನಾಯ್ಕ ಅವರ ಮೇಲೆ ಇರುವ ಆರೋಪಗಳಿಗೆ ಯಾವುದೇ ಆಧಾರ ಅಥವಾ ಸಾಕ್ಷಿ ಇಲ್ಲದ ಕಾರಣ ಅವರ ಮೇಲೆ ಇದ್ದ ಎಲ್ಲಾ ಆರೋಪಗಳನ್ನು ಖುಲಾಸೆ ಮಾಡಿದೆ. ಹಾಗೂ ಕಾರ್ನಾಟಕ ಸರ್ಕಾರದ ಗೃಹ ಇಲಾಖೆ ಮಾಡಿದ್ದ ಅಮಾನತ್ತಿನ ಆದೇಶವನ್ನು ರದ್ದುಗೋಳಿಸಿದೆ. ಅಷ್ಟೆ ಅಲ್ಲದೆ ಅವರು ಈ ಹಿಂದೆ ಇದ್ದ ಹುದ್ದೆಗೆ ಮರು ನೇಮಕ ಮಾಡುವಂತೆ ಗೃಹ ಇಲಾಖೆಯ ಕಾರ್ಯದರ್ಶಿ ಹಾಗೂ ಗೃಹ ರಕ್ಷಕ ದಳದ ಡಿಜಿಪಿ ಅವರಿಗೆ ನಿರ್ದೇಶನ ನೀಡಿದೆ.
ಮಾನ್ಯ ಹೈ ಕೊರ್ಟ್ ನೀಡಿರುವ ತೀರ್ಪಿನ ಕುರಿತು ಡಾ. ಕಿರಣ ನಾಯ್ಕ ಅವರು ಧನ್ಯವಾದ ತಿಳಿಸಿದ್ದಾರೆ. ಹಾಗೂ ತಮ್ಮ ಮೇಲೆ ಸುಳ್ಳು ಆರೋಪ ಮಾಡಿದ ಸಿಬ್ಬಂದಿ ಹಾಗೂ ಅಧಿಕಾರಿಗಳ ಮೇಲೆ ಮಾನ ಹಾನಿ ಪ್ರಕರಣ ದಾಖಲಿಸುವದಾಗಿ ಡಾ. ಕಿರಣ ನಾಯ್ಕ ಅವರು ಪತ್ರಿಕಾ ಪ್ರಕಟಣೆ ಹೊರಡಿಸಿದ್ದಾರೆ.