ಬೆಳಗಾವಿ-೦೮:ಕೆರೆಗಳಿಗೆ ಪುನರುಜ್ಜೀವನ ಮಾಡುವುದು ಬಹಳ ದೊಡ್ಡ ಕೆಲಸ.ಸಾಮಾಜಿಕ ಅಭಿವೃದ್ಧಿಗೆ ಮತ್ತು ಗ್ರಾಮೀಣ ಅಭಿವೃದ್ಧಿಗೆ ಹೆಚ್ಚಿನ ಅನುದಾನವನ್ನು ಕೊಡುವ ಮೂಲಕ,ಗ್ರಾಮೀಣ ಪ್ರದೇಶಗಳಿಗೆ ಮೂಲಸೌಕರ್ಯ ಒದಗಿಸುವ ಕೆಲಸವನ್ನು ಪೂಜ್ಯರು ತಮ್ಮ ಸಂಸ್ಥೆಯ ಮೂಲಕ ಯಾರು ಮಾಡದ ಕೆಲಸವನ್ನು ಮಾಡುತ್ತಿದ್ದಾರೆ ಎಂದು ಶಿಂದೊಳ್ಳಿ ಸರ್ಕಾರಿ ಕೆರೆಗೆ ಬಾಗಿನ ಅರ್ಪಣೆ ಮಾಡಿ ಬೆಳಗಾವಿ ಸಂಸದರಾದ ಜಗದೀಶ ಶೆಟ್ಟರವರು ಮಾತನಾಡಿದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಖಾಸಭಾಗ, ಗ್ರಾಮ ಪಂಚಾಯತ ನಿಲಜಿ,ಕೆರೆ ಅಭಿವೃದ್ಧಿ ಸಮಿತಿ ಶಿಂದೊಳ್ಳಿ ಇವರ ಸಹಯೋಗದೊಂದಿಗೆ ನಡೆದ 738 ನೇ ನಮ್ಮೂರು ನಮ್ಮ ಕೆರೆ ಕಾರ್ಯಕ್ರಮದಡಿ ಪುನಃಶ್ಚೇತನಗೊಳಿಸಿದ ಶಿಂದೊಳ್ಳಿ ಸರ್ಕಾರಿ ಕೆರೆ ಹಸ್ತಾಂತರ ಮತ್ತು ಬಾಗಿನ ಅರ್ಪಣೆ ಮಾಡಿ ಮಾತನಾಡಿದ ಅವರು ಕೆರೆಗಳು ಹೂಳು ತುಂಬುವುದರಿಂದ ನೀರು ಸಂಗ್ರಹಣೆ ಆಗುವುದಿಲ್ಲ. ಅಂತರ್ಜಲ ಕಡಿಮೆ ಆಗುತ್ತದೆ. ನೀರಿನ ಸಂಗ್ರಹಣೆ ಕಡಿಮೆ ಆದಾಗ ಜಾನುವಾರುಗಳಿಗೆ ಕುಡಿಯುವ ನೀರು ಮತ್ತು ಕೃಷಿಗೆ ನೀರಿನ ಅಭಾವ ಕಂಡುಬರುತ್ತದೆ. ಇದರಿಂದ ಬರಗಾಲದಂತ ಸಮಸ್ಯೆಗಳಿಗೆ ಕಾರಣವಾಗುತ್ತದೆ. ಧರ್ಮಸ್ಥಳ ಯೋಜನೆಯವರು ಬೆಳಗಾವಿ ಜಿಲ್ಲೆಯಲ್ಲಿ ಸುಮಾರು 48 ಕೆರೆಗಳನ್ನ ಹೂಳೆತ್ತಿದ್ದಾರೆ. ಶಿಂದೊಳ್ಳಿ ಸರ್ಕಾರಿ ಕೆರೆಗೆ 3.84.000 ಹಣ ವಿನಿಯೋಗಿಸಿ ಹೂಳಿತ್ತಿರುತ್ತಾರೆ. ಎಲ್ಲರೂ ಒಗ್ಗಟ್ಟಾಗಿ ಕೆರೆ ಮತ್ತು ಪರಿಸರವನ್ನು ಸಂರಕ್ಷಣೆ ಮಾಡಬೇಕೆಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗ್ರಾಮ ಪಂಚಾಯತ ಅಧ್ಯಕ್ಷರಾದ ಸತೀಶ ಶಹಪುರಕರ ವಹಿಸಿದ್ದರು.ಕೆರೆ ಸಮಿತಿ ಅಧ್ಯಕ್ಷರಾದ ಬಾಳರಾಮ ಅನಗೋಳಕರ, ಜಿಲ್ಲಾ ನಿರ್ದೇಶಕರಾದ ಸತೀಶ ನಾಯ್ಕ, ತಾಲೂಕ ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿಗಳಾದ ರಮೇಶ ಪಿ ಹೆಡಗೆ,ನರೇಗಾ ಯೋಜನೆಯ ಸಹಾಯಕ ನಿರ್ದೇಶಕರಾದ ಬಿ ಡಿ ಕಡೇಮನಿ, ಜಿಲ್ಲಾ ಜನಜಾಗೃತಿ ವೇದಿಕೆಯ ಅಧ್ಯಕ್ಷರಾದ ಬಸವರಾಜ ಸೊಪ್ಪಿಮಠ, ಯೋಜನಾಧಿಕಾರಿಗಳಾದ ಸುಭಾಷ ಪಿ ಸಿ,ಧಾರವಾಡ ಪ್ರಾದೇಶಿಕ ಕಚೇರಿಯ ಅಭಿಯಂತರರಾದ ನಿಂಗರಾಜ ಮಾಳವಾಡ, ಗ್ರಾಮ ಪಂಚಾಯತ ಸದಸ್ಯರಾದ ಬಾಬಗೌಡ ಪಾಟೀಲ, ಪಿರಾಜಿ ಅನಗೋಳಕರ, ಒಕ್ಕೂಟ ಅಧ್ಯಕ್ಷರಾದ ಶಿವಲೀಲಾ ಚರಂತಿಮಠ ಉಪಸ್ಥಿತರಿದ್ದರು.
ವಲಯ ಮೇಲ್ವಿಚಾರಕರಾದ ಪರಮೇಶ್ವರ ಕಾರ್ಯಕ್ರಮ ನಿರ್ವಹಣೆ ಮಾಡಿದರು.ಕೃಷಿಮೇಲ್ವಿಚಾರಕರಾದ ಮಂಜುನಾಥ ಗೌಡ, ಸೇವಾಪ್ರತಿನಿಧಿ ಸಾಕ್ಷಿ ,ಕೆರೆ ಸಮಿತಿ ಸದಸ್ಯರು ಮತ್ತು ಸಂಘದ ಸದಸ್ಯರು ಭಾಗವಹಿಸಿದ್ದರು.