ಬೆಳಗಾವಿ-೦೮:ಬೆಳಗಾವಿಯನ್ನು ಮೂರು ಭಾಗವಾಗಿ ಮಾಡಲು ಸಚಿವರೋಬ್ಬರು ಹೇಳಿಕೆಯನ್ನು ನೀಡಿರುತ್ತಾರೆ. ಇದು ಕನ್ನಡಿಗರ ಭಾವನೆಯನ್ನು ಕೆಣಕುವಂತಹ ವಿಷಯವಾಗಿದ್ದು, ಬೆಳಗಾವಿ ಯುವ ಕರ್ನಾಟಕ ವೇದಿಕೆ ತಂಡ ಈ ವಿಚಾರವನ್ನು ಖಂಡಿಸುತ್ತಿದ್ದು ಯಾವುದೇ ಕಾರಣಕ್ಕೂ ಬೆಳಗಾವಿಯನ್ನು ಮೂರು ಭಾಗವಾಗಿ ಮಾಡಲು ಬಿಡುವುದಿಲ್ಲ.
ಅದೇ ರೀತಿಯಾಗಿ ತಾವುಗಳು ತಕ್ಷಣ ಎಚ್ಚೆತ್ತುಕೊಂಡು ಇಂತಹ ನಿರ್ಧಾರವನ್ನು ಕೈಬಿಡಬೇಕು ಒಂದು ವೇಳೆ ಇಂತ ವಿಷಯಕ್ಕೆ ಸರ್ಕಾರ ಅವಕಾಶ ಮಾಡಿಕೊಟ್ಟಿದಲ್ಲಿ ಮುಂದಿನ ದಿನಗಳಲ್ಲಿ ಸರ್ಕಾರದ ವಿರುದ್ಧ ದೊಡ್ಡ ಮಟ್ಟದ ಹೋರಾಟವನ್ನು ತಿವ್ರವಾಗಿ ಮಾಡಬೇಕಾಗುತ್ತದೆ ಎಂದು ಬೆಳಗಾವಿ ಯುವ ಕರ್ನಾಟಕ ವೇದಿಕೆಯ ಸಂಸ್ಥಾಪಕ ಅಧ್ಯಕ್ಷರಾದ ರೂಪೇಶ್ ರಾಜ್ಜಣ್ಣ ಹಾಗೂ ಯುವ ಕರ್ನಾಟಕ ವೇದಿಕೆ ಜಿಲ್ಲಾಧ್ಯಕ್ಷರಾದ ಶಿವು ಎಸ್ ದೇವರವರ ಅವರು ಬೆಳಗಾವಿ ಪರವಾಗಿ ಎಚ್ಚರಿಕೆ ನೀಡಿದರು.