ಬೆಳಗಾವಿ-೦೭: ಸರಕಾರದ ಬೆಳಗಾವಿ ತಾಲೂಕಾ ಭೂ ನ್ಯಾಯ ಮಂಡಲದ ಸದಸ್ಯರಾಗಿ ಗ್ರಾಮ ಪಂಚಾಯಿತಿ ಸದಸ್ಯ ಹಾಗೂ ಸಾಮಾಜಿಕ ಕಾರ್ಯಕರ್ತ ಬೆನಕನಹಳ್ಳಿಯ ಮೋಹನ್ (ಮಹೇಶ್) ಮಲ್ಲಪ್ಪ ಕೋಲ್ಕಾರ ಆಯ್ಕೆಯಾಗಿದ್ದಾರೆ.
ಮಹೇಶ ಕೋಲ್ಕಾರ ಅವರ ಸಮಾಜಮುಖಿ ಕಾರ್ಯದ ಶಿಫಾರಸಿನ ಮೇರೆಗೆ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ, ಮಹಿಳಾ ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹಾಗೂ ವಿಧಾನ ಪರಿಷತ್ ಸದಸ್ಯ ಚನ್ನರಾಜ್ ಹಟ್ಟಿಹೊಳಿ ಅವರು ತಾಲೂಕಾ ಭೂ ನ್ಯಾಯ ಮಂಡಳಿ ಸದಸ್ಯರಾಗಿ ಮಹೇಶ ಕೋಲ್ಕಾರ ಆಯ್ಕೆಯಾಗಿದ್ದಾರೆ.
ಕಂದಾಯ ಸಚಿವರು ಹಾಗೂ ರಾಜ್ಯಪಾಲರ ಸೂಚನೆ ಮೇರೆಗೆ ಕಂದಾಯ ಇಲಾಖೆ ಕಾರ್ಯದರ್ಶಿ (ಭೂಧಾರಣ) ಗೌರಮ್ಮ ಆರ್. ಅವರು ಈ ಆಯ್ಕೆ ಆದೇಶ ಹೊರಡಿಸಿದ್ದಾರೆ. ಅವರ ಈ ಆಯ್ಕೆಗೆ ಎಲ್ಲೆಡೆ ಅಭಿನಂದನೆಗಳು ವ್ಯಕ್ತವಾಗುತ್ತಿದೆ.