24/12/2024
IMG-20241008-WA0038

ದೇವಸ್ಥಾನಗಳು ಬಾಂಧವ್ಯ ಗಟ್ಟಿಗೊಳಿಸುವ ಕೆಂದ್ರಗಳು

ಅಂಕಲಗಿ-೦೮:ಬದುಕಿಗೆ ಸಂಸ್ಕಾರ ಬೇಕು. ನಮ್ಮತನವನ್ನ್ನು ಸಮಾಜಕ್ಕೆ ಸಮರ್ಪಿಸಿಕೊಳ್ಳುವ ಮೂಲಕ ಮುಂದಿನ ಜನಾಂಗೀಯ ಸುಂದರತನಕ್ಕೆ ಸಂಸ್ಕಾರ ಹಂಚಿದಂತಾಗುವದು. ದೇವಸ್ಥಾನಗಳು ,ಮಠ ಮಂದಿರಗಳು, ಸಂಸ್ಕಾರ ಕೊಡಬಲ್ಲ ಗಟ್ಟಿ ಕೆಂದ್ರಗಳು ಹೌದು ಎಂದು ಬೆಳಗಾವಿ ಕನ್ನಡಪ್ರಭ ದಿನಪತ್ರಿಕೆಯ ಮುಖ್ಯ ವರದಿಗಾರ, ಹಿರಿಯ ಪತ್ರಕರ್ತ, ಶ್ರೀಶೈಲ ಮಠದ ಹೇಳಿದರು. ಅವರು ಮಂಗಳವಾರ ಬೆಳಗಾವಿ ರಾಮತೀರ್ಥನಗರದ ಸ್ನೇಹ ಸಮಾಜ ಸೇವಾ ಸಂಘದ ಕಾರ್ಯಸಿದ್ಧಿ ಆಂಜನೇಯ ದೇವಸ್ಥಾನ ದ ಆವರಣದಲ್ಲಿ ಜರುಗಿದ ೫ ನೇ ದಿನದ ಮಹಿಳೆಯರ ಮತ್ತು ಮಕ್ಕಳ ದಾಂಡಿಯಾ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಪಾಲ್ಗೊಂಡು, ಸಂಘದಿಂದ ಸನ್ಮಾನ ಸ್ವೀಕರಿಸಿ ಮಾತನಾಡಿದರು. ನಮ್ಮ ತಪ್ಪಿನಿಂದಾಗಿ ಮಕ್ಕಳು ದಾರಿ ತಪ್ಪುತ್ತಿದ್ದು, ಇದರ ಅರಿವು ನಮಗಾಗಬೇಕು. ಮಕ್ಕಳಿಂದ ಮೊಬೈಲ್ ಕಸಿದು, ಕೈಗೆ ಪುಸ್ತಕ ಕೊಡುವದಾಗಬೇಕು. ಪುಸ್ತಕಗಳು ನಮ್ಮ ಪೀಳಿಗೆಯ ಬಹು ದೊಡ್ಡ ಆಸ್ತಿ. ಎಂದರಲ್ಲದೆ, ಇಂಥಹ ಕಾರ್ಯಕ್ರಮಗಳು ಪರಸ್ಪರರ ನಡುವಿನ ಸ್ನೇಹ, ಪ್ರೀತಿ,ವಿಶ್ವಾಸಗಳನ್ನು ಬೆಸೆದು ಅಂತರದ ಹೃದಯಗಳನ್ನು ಒಂದಾಗಿಸಬಲ್ಲ ಹೃದಯ ಸ್ಪರ್ಶಿ ತಾಣಗಳು ಎಂದರಲ್ಲದೆ, ಸನ್ಮಾನ ಕೊಟ್ಟದ್ದಕ್ಕೆ ಧನ್ಯವಾದ ಹೇಳಿದರು.
ಸಂಘದ ಅಧ್ಯಕ್ಷ ಸುರೇಶ ಉರಬಿನಹಟ್ಟಿ ಸರ್ವರನ್ನು ಸ್ವಾಗತಿಸಿದರಲ್ಲದೆ, ಮಾತನಾಡಿ ಗಟ್ಟಿ ಮನಸ್ಸಿನಿಂದ ಕಸವನ್ನು ರಸವನ್ನಾಗಿಸಬಹುದಾಗಿದ್ದು, ಇದಕ್ಕೆ ಇಲ್ಲಿಯ ಗ್ರಂಥಾಲಯ ಮತ್ತು ದೇವಸ್ಥಾನಗಳೇ ಸಾಕ್ಷಿ ಎಂದರಲ್ಲದೆ, ದೇವಸ್ಥಾನದ ಕಟ್ಟಡಕ್ಕೆ ಮುಕ್ತ ದೇಣಿಗೆ ಸಲ್ಲಿಸುವಂತೆ ಕೋರಿದರು.
ವೇದಿಕೆಯಲ್ಲಿ ದಾಂಡಿಯಾ ಕಾರ್ಯಕ್ರಮದ ಮುಖ್ಯ ಸಂಯೋಜಕ ಮಹಾದೇವ ಟೊಣ್ಣೆ, ಜಿಲ್ಲಾ ಪಂಚಾಯತಿ ಅಭಿಯಂತರರಾದ ಮಂಜುನಾಥ ಪಾಟೀಲ, ಎಲ್.ಎಸ್.ಸನದಿ, ಆಸೀನರಾಗಿದ್ದರು.
ಸಂಘದ ಸದಸ್ಯರಾದ ಬಸವರಾಜ ಗೌಡಪ್ಪಗೋಳ, ಮನೋಹರ ಕಾಜಗಾರ, ಕ್ರಷ್ಣಾ ಪಾಟೀಲ, ಡಿ ಎಮ್ ಟೊಣ್ಣೆ, ಜಿ.ಐ.ದಳವಾಯಿ, ಮಲ್ಲಪ್ಪ ದಂಡಿನವರ ಬಸವರಾಜ ಹಿರೇಮಠ, ಎಸ್.ಸಿ.ಕಮತ್, ರಾಜೇಂದ್ರ ರತನ್, ಜಿ.ಜಿ.ಹುನ್ನೂರ,
ಸೇರಿದಂತೆ, ಮಹಿಳೆ ಯರಾದ ನಿರ್ಮಲಾ ಉರಬಿನಹಟ್ಟಿ, ಕಾವ್ಯಾ ಚಿಟಗಿ, ಲತಾ ಕಾಜಗಾರ, ಸುನೀತಾ ಕೆರೂರ, ವಿದ್ಯಾ ಮೆಳವಂಕಿ, ಪಲ್ಲವಿ ಪಾಟೀಲ, ಸುಜಾತಾ ಜುಟ್ಟನವರ, ಮಹಾದೇವಿ ಉಳ್ಳೇಗಡ್ಡಿ, ಪ್ರೇಮಾ ಬಾಗೇವಾಡಿ ಮಹಾನಂದಾ ಹಿರೇಮಠ ಪ್ರತೀಕ್ಷಾ ಟೊಣ್ಣೆ ಸೇರಿದಂತೆ ಮಹಿಳೆಯರು ಮಕ್ಕಳು ಪಾಲ್ಗೊಂಡಿದ್ದರು.

error: Content is protected !!