23/12/2024
IMG-20241006-WA0102

ಅಂಕಲಗಿ-೦೬: ಒಂದು ಬಲಾಡ್ಯ ರಾಷ್ಟ್ರ ಕಾಣಲು ಅಲ್ಲಿಯ ಗ್ರಂಥಾಲಯಗಳ ಸಂಖ್ಯೆ ಯೇ ಮುಖ್ಯ ಕಾರಣ. ಬಲಾಡ್ಯ ರಾಷ್ಟ್ರ ನಿರ್ಮಾಣದಲ್ಲಿ ಗ್ರಂಥಾಲಯಗಳ ಸೇವಾ ಪಾತ್ರ ಅದ್ವಿತೀಯ ಎಂದು ಬೆಳಗಾವಿ ಸಾರ್ವಜನಿಕ ಗ್ರಂಥಾಲಯ ಇಲಾಖೆ ಉಪನಿರ್ದೇಶಕರಾದ ರಾಮಯ್ಯ ಹೇಳಿದರು. ಅವರು ರಾಮತೀರ್ಥನಗರ ದ ಸ್ನೇಹ ಸಮಾಜ ಸೇವಾ ಸಂಘ ದ ಶ್ರೀ ಕಾರ್ಯಸಿದ್ಧಿ ಆಂಜನೇಯ ದೇವಸ್ಥಾನ ಕಮಿಟಿ ಆಡಳಿತ ಮಂಡಳಿಯ ವತಿಯಿಂದ ದಸರಾ ಪ್ರಯುಕ್ತ ಹಮ್ಮಿಕೊಂಡ ಮಹಿಳೆಯರ ಮತ್ತು ಮಕ್ಕಳ ೩ ನೇ ದಿನದ ದಾಂಡಿಯಾ ಕಾರ್ಯಕ್ರಮ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಸಂಘದಿಂದ ಸನ್ಮಾನ ಸ್ವೀಕರಿಸಿ ಮಾತನಾಡಿದರು. ನಮ್ಮ ನೆಲದ ವಿಶೇಷತೆಯಿಂದಾಗಿ ವಿಶ್ವದಲ್ಲಿ ಭಾರತ ಸದ್ರಢವೆನಿಸಿದ್ದು, ಎಲ್ಲರೂ ತಿರುಗಿ ನೋಡುವಂಥ ಸಾಧನೆ ನಮ್ಮದಾಗಿದೆ. ಗ್ರಂಥಾಲಯ ಸೇವೆ ಎಲ್ಲರಿಗೂ ಇದೆ. ಇದರ ಸದ್ಬಳಕೆ ನಿಮ್ಮದಾಗಲಿ. ಕೊರತೆ ಇರುವ ಪುಸ್ತಕ, ಪತ್ರಿಕೆಗೆಳನ್ನು ಮತ್ತಷ್ಟು ಹೆಚ್ಚಿಸಲಾಗುವದು ಎಂದರಲ್ಲದೆ ಸನ್ಮಾನಿಸಿದ್ದಕ್ಕೆ ಧನ್ಯವಾದ ಹೇಳಿದರು. ಸಂಘದ ಅದ್ಯಕ್ಷ ಸುರೇಶ ಉರಬಿನಹಟ್ಟಿ ಸರ್ವರನ್ನು ಸ್ವಾಗತಿಸಿ, ಮಾತನಾಡಿ ನಮ್ಮ. ಬೇಡಿಕೆಗೆ ತಕ್ಷಣ ಸ್ಪಂದಿಸಿ ಗ್ರಂಥಾಲಯದ ಸೌಲಭ್ಯ ವಿಸ್ತರಿಸುವದು ಸುಲಭ ಮಾತಲ್ಲ. ಅಂಥಹ ದೊಡ್ಡ ಕಾರ್ಯ ಮಾಡಿ ರಾಮಯ್ಯ ಅವರು ರಹಾವಾಸಿಗಳ ಪ್ರೀತಿಗೆ ಪಾತ್ರರಾಗಿದ್ದು ಇದು ಎಲ್ಲರಿಗೂ ಹೆಮ್ಮೆಯ ವಿಷಯ ಎಂದರಲ್ಲದೆ, ಉಪಸ್ತಿತರಿದ್ದ ಗ್ರಂಥಪಾಲಕರಾದ ಶೋಭಾ ಸವದಿ ಅವರಿಗೆ ಅಭಿನಂದಿಸಿದರು.
ವೇದಿಕೆಯಲ್ಲಿದ್ದ ಮನೋಹರ ಕಾಜಗಾರ, ಜಿ.ಐ.ದಳವಾಯಿ, ಮಲ್ಲಪ್ಪ ದಂಡಿನವರ, ರಾಜೇಂದ್ರ ರತನ್ ,ವಿಲಾಸ ಕೆರೂರ ,ಎನ್ ಬಿ ಹನ್ನಿಕೇರಿ ಸೇರಿದಂತೆ ಸಂಘದ ಸದಸ್ಯರು ರಾಮಯ್ಯ ಅವರನ್ನು ಸನ್ಮಾನಿಸಿ ಗೌರವಿಸಿದರು.
ಕಾರ್ಯಕ್ರಮದಲ್ಲಿ ಎಲ್ ಎಸ್ ಸನದಿ, ಬಸವರಾಜ ಹಿರೇಮಠ, ಬಸವರಾಜ ಗೌಡಪ್ಪಗೋಳ, ಮಹಾದೇವ ಟೊಣ್ಣೆ, ಕ್ರಷ್ಣಾ ಪಾಟೀಲ, ಕಲ್ಲಪ್ಪ ಮಜಲಟ್ಟಿ, ದುಂಡಪ್ಪ ಉಳ್ಳೇಗಡ್ಡಿ, ತೇರಣಿ ಬಸವರಾಜ, ಮಹೇಶ ಚಿಟಗಿ, ಸೇರಿದಂತೆ ಶ್ರೀ ದುರ್ಗಾ ದಾಂಡಿಯಾ ಸಂಘದ ಸದಸ್ಯರು, ರಹವಾಸಿಗಳು ಹಾಜರಿದ್ದರು.

error: Content is protected !!