ನವರಾತ್ರಿ ದಾಂಡಿಯಾ ಉತ್ಸವಕ್ಕೆ ಸುರೇಶ ಯಾದವ ಚಾಲನೆ
ಬೆಳಗಾವಿ-೦೬:ನವರಾತ್ರಿ ಶಕ್ತಿದೇವತೆಯನ್ನು ಆರಾಧಿಸುವ ಹಬ್ಬ ದುಷ್ಟ ಶಕ್ತಿಗಳ ನಾಶ, ಶಿಷ್ಟರ ರಕ್ಷಣೆಯೇ ಶ್ರೀ ದೇವಿಯ ಆರಾಧನೆಯ ಉದ್ದೇಶವಾಗಿದೆ ಎಂದು ಸುರೇಶ ಯಾದವ ಫೌಂಡೇಶ ಅಧ್ಯಕ್ಷ ಸುರೇಶ್ ಯಾದವ್ ಎಂದು ಹೇಳಿದರು.
ರಾಮತೀರ್ಥ ನಗರದ ವೀರಭದ್ರದೇವಸ್ಥಾನ ಆವರಣದಲ್ಲಿ ಸುರೇಶ ಯಾದವ ಫೌಂಡೇಶನ ಸದಸ್ಯರು ಹಮ್ಮಿಕೊಂಡ ನವರಾತ್ರಿ ದಾಂಡಿಯಾ ಉತ್ಸವಕ್ಕೆ ಸುರೇಶ ಯಾದವ ಅವರು ಚಾಲನೆ ನೀಡಿದರು.
ನಾಡಿನ ಒಳಿತಿಗಾಗಿ ತಾಯಿ ಜಗನ್ಮಾತೆ ಶಕ್ತಿ ದೇವತೆ
ಒಂಬತ್ತು ಅವತಾರಗಳ ಎತ್ತಿ, ನಮ್ಮೆಲ್ಲರನ್ನೂ ಕಾಯುತ್ತಿದ್ದಾಳೆ. ನವರಾತ್ರಿ ಪ್ರತಿವರ್ಷದಂತೆ ಈ ವರ್ಷವೂ ದಸರಾ ಹಬ್ಬದ ನಿಮಿತ್ತವಾಗಿ ದಾಂಡಿಯಾ ಉತ್ಸವವನ್ನು ಆಯೋಜಿಸಲಾಗಿದೆ. ದಾಂಡಿಯಾ ಉತ್ಸವಕ್ಕೆ ಸಹಸ್ರಾರು ಭಕ್ತರು ಆಗಮಿಸಿ ಉತ್ಸವಕ್ಕೆ ಮೆರಗು ತರಬೇಕು. ಸರ್ವರು ಭಾಗವಹಿಸುವ ಮೂಲಕ ನವರಾತ್ರಿ ಹಬ್ಬವನ್ನು ಸಂಭ್ರಮ, ಸಡಗರದಿಂದ ಆಚರಿಸಬೇಕು. ನವರಾತ್ರಿಯಲ್ಲಿ ದುರ್ಗಾಮಾತೆಯ ಆರಾಧನೆಯನ್ನು ಶ್ರದ್ಧಾ ಭಕ್ತಿಯಿಂದ ಮಾಡಲಾಗುತ್ತಿದೆ.
ಅಂತೆಯೇ ಇಲ್ಲಿಯೂ ದುರ್ಗಾಮಾತೆಗೆ ಪ್ರತಿದಿನವೂ ವಿಶೇಷ ಪೂಜಾರಾಧನೆಗಳನ್ನು ನೆರವೇರಿಸಲಾಗುತ್ತದೆ. ಪ್ರತಿದಿನವೂ ಸಂಜೆ ಸಾಂಸ್ಕೃತಿಕ ಕಾರ್ಯಕ್ರಮ ಅನಂತರ ದಾಂಡಿಯಾ ಉತ್ಸವ ನಡೆಯಲಿದೆ. ಆಹಾರ ಮೇಳದ ಜೊತೆಗೆ ವಿವಿಧ ಮಳಿಗೆಗಳು ಜನರನ್ನು ಆಕರ್ಷಿಸಲಿದೆ. ಎಲ್ಲ ಕಾರ್ಯಕ್ರಮದಲ್ಲಿ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಕರೆ ನೀಡಿದರು.
ನಾವು ಸುಮಾರು ವರ್ಷಗಳಿಂದ ಉತ್ಸವವನ್ನು ರವಾಹಸೀಗಳ ಸಂಘ ದ ಸಹಕಾರದಿಂದ ನವರಾತ್ರಿ ಪ್ರಯುಕ್ತ ನಗರದಲ್ಲಿ ನಡೆಯುತ್ತಿರುವ ದುರ್ಗಾ ಮಾತಾ ದೌಡ ಎರಡನೇ ದಿನವಾದ ಶುಕ್ರವಾರ ಅತ್ಯಂತ ಸಂಭ್ರಮದಿಂದ ರಾಮತೀರ್ಥ ನಗರದಲ್ಲಿ ಜರುಗಿತು. ಹೀಗೆ ಪ್ರತಿ ವರ್ಷ ಹಲವಾರು ಸಮಾಜ ಮುಖಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುತ್ತದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಗುರುಪುತ್ರಪ್ಪಾ ತೊರಗಲ, ಅಪ್ಪಯ್ಯಾ ಕೋಲ್ಕಾರ , ಅರ್ಜುನ ಉರ್ಬಿನಹಟ್ಟಿ , ರಾಜು ಪಾಟೀಲ,ಬಾಳಪ್ಪ ಹಂಜಿ,ಮಲ್ಹರ ಡಿಕ್ಸಿತ, ಸಂತೋಷ ಮೇರಾಕಾರ, ಕೆಂಪಣ್ಣ ಜಿನರಾಲ, ಮಾರುತಿ ಬಾಸಕರ, ಬಸವರಾಜ ಕಣಗಣ್ಣಿ , ಮಹೇಶ ಶೇಗಹಳ್ಳಿ, ಛಾಯಾ ಬೆಳ್ಳಿ, ಸಂಗೀತ ಗುಣಕಿ , ಅಕ್ಷತಾ ಕಾಂಬ್ಳೆ , ನಿಸರ್ಗ ಅವಜ್ಜಿ , ಕುಮಥೇಕರ, ಅಕ್ಷಯ, ರಾಜಶೇಖರ, ಅಭಿಷೇಕ, ಅಮಿತ್ ಬಿಡೇಕರ ಹಾಗೂ ಇನ್ನಿತರರು ಉತ್ಸವದಲ್ಲಿ ಭಾಗವಹಿಸಿದ್ದರು.