23/12/2024
IMG-20241004-WA0143

ಬೆಳಗಾವಿ-೦೪. ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯ ವ್ಯಾಪ್ತಿಯ ಅರ್ಥಶಾಸ್ತ್ರ ಉಪನ್ಯಾಸಕರ ವೇದಿಕೆ ವತಿಯಿಂದ ಬಿ.ಎ ಬಿ.ಕಾಂ ವಿಭಾಗದ ಪಠ್ಯಕ್ರಮ ಪರಿಷ್ಕರಣೆ ಹಾಗೂ ಚರ್ಚಾ ಕಾರ್ಯಗಾರ ಸ್ಥಳೀಯ ಮರಾಠ ಮಂಡಲ ಪದವಿ ಮಹಾವಿದ್ಯಾಲಯದಲ್ಲಿ ಗುರುವಾರ ನಡೆಯಿತು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ರಾಣಿ ಚೆನ್ನಮ್ಮ ವಿವಿ ಕಲಾ ನಿಕಾಯದ ಡೀನ್ ಆದ ಡಾ. ಡಿ ಎನ್ ಪಾಟೀಲ್ ಅವರ ಮಾತನಾಡಿ, ಪಠ್ಯ ಪರಿಸ್ಕರಣೆಯನ್ನು ಹೊಸ ಶಿಕ್ಷಣ ನೀತಿ ಅನ್ವಯ ಸ್ಪರ್ಧಾತ್ಮಕವಾಗಿ ಹಾಗೂ ವಿದ್ಯಾರ್ಥಿ ಕೇಂದ್ರಿತವಾಗಿ ಮಾಡುವುದಲ್ಲದೆ ಜಾಗತೀಕರಣದ ಯುಗದಲ್ಲಿ ವೈಜ್ಞಾನಿಕತೆಯನ್ನು ವಿದ್ಯಾರ್ಥಿಗಳು ಕಲಿಯುವಂತೆ ಭೋದಿಸಬೇಕು. ಅರ್ಥಶಾಸ್ತ್ರವು ಸಾಮಾಜಿಕ ವಿಜ್ಞಾನಗಳ ಪ್ರಮುಖವಾದ ಶಾಸ್ತ್ರವಾಗಿದ್ದು. ಅರ್ಥಶಾಸ್ತ್ರ ಕಲಿತವರು ಹಲವು ಸಾಮಾಜಿಕ ಸಮಸ್ಯೆಗಳಿಗೆ ವೈದ್ಯರಂತೆ ಕೆಲಸ ಮಾಡುತ್ತಾರೆ. ವಿಷಯದ ಪ್ರಾಮುಖ್ಯತೆಯನ್ನು ಉಳಿಸಿಕೊಳ್ಳಬೇಕೆಂದು ಹೇಳಿದರು.
ಅಧ್ಯಯನ ಮಂಡಳಿ ಸದಸ್ಯರಾದ ಬಿ ಎಸ್ ಕಾಂಬಳೆ, ಎನ್‌. ಪಿ ಬಿರಾದಾರ ಆರ್ ಎಂ ತೇಲಿ ಜೆ. ಬಿ ಮುರಗೋಡ ಅರ್ಜುನ್ ಜಂಬಗಿ, ಶಿವಕುಮಾರ್ ಪರಾಂಡೆ ವೇದಿಕೆಯಲ್ಲಿ ಇದ್ದರು. ಸಭೆಯಲ್ಲಿ ನೂತನವಾಗಿ ವೇದಿಕೆಯ ಅಧ್ಯಕ್ಷರನ್ನಾಗಿ ಮದಕರಿ ನಾಯಕ ಅವರನ್ನು ಆರಿಸಲಾಯಿತು. ಅಶೋಕ ರಾಥೋಡ್ ದಿಲೀಪ್ ರಾಥೋಡ್ ಶ್ರೀಕಾಂತ್ ಮರಿಯಪ್ಪನವರ ಉಪಾಧ್ಯಕ್ಷರಾಗಿ. ಗಣಪತಿ ಸಂಗೋಟಿ ಪ್ರಧಾನ ಕಾರ್ಯದರ್ಶಿ. ರಾಜು ಕಪಾಲಿ ಖಜಾಂಚಿ ಆಗಿ ಆಯ್ಕೆಯಾದರು. ರುದ್ರಪ್ಪ ಅರಳಿಮಟ್ಟಿ ಕಾರ್ಯಕ್ರಮ ನಿರೂಪಿಸಿದರು. ರವೀಂದ್ರ ನಂದಪ್ಪನವರ ವಂದಿಸಿದರು.

error: Content is protected !!