ಬೆಳಗಾವಿ-೦೨: ವಿಶ್ವವಿಖ್ಯಾತ ಮೈಸೂರು ದಸರಾ ಅಂಗವಾಗಿ ದಿನಾಂಕ 09.10.2024 ರಂದು ಜಗನ್ಮೋಹನ ಅರಮನೆಯಲ್ಲಿ ನಡೆಯಲಿರುವ ಸಮೃದ್ಧ ಕವಿಗೋಷ್ಠಿಗೆ ಬೆಳಗಾವಿಯ ಯುವಕವಿ ನದೀಮ ಸನದಿ ಆಯ್ಕೆಯಾಗಿದ್ದಾರೆ. ವೃತ್ತಿಯಿಂದ ಸಿವಿಲ್ ಇಂಜಿನಿಯರ್ ಆಗಿರುವ ನದೀಮ ಅವರ ಮೊದಲ ಕವನ ಸಂಕಲನ “ಹುಲಿಯ ನೆತ್ತಿಗೆ ನೆರಳು” ಕೃತಿಗೆ ಹಲಸಂಗಿಯ ಮಧುರಚೆನ್ನ ಕಾವ್ಯ ಪ್ರಶಸ್ತಿ, ಸೇಡಂನ ಅಮ್ಮ ಪ್ರಶಸ್ತಿ, ಹಾಸನದ ಕಾವ್ಯಮಾಣಿಕ್ಯ ರಾಜ್ಯ ಪ್ರಶಸ್ತಿ, ಬೆಳಗಾವಿ ಜಿಲ್ಲಾ ಸಾಹಿತ್ಯ ಪ್ರತಿಷ್ಠಾನದ ಸಿರಿಗನ್ನಡ ಪುಸ್ತಕ ಪ್ರಶಸ್ತಿ, ಬೆಂಗಳೂರಿನ ಭಾವಯಾನ ಪುಸ್ತಕ ಪ್ರಶಸ್ತಿಗಳು ದೊರೆತಿವೆ. ಒಂದು ಕವನ ಬೆಳಗಾವಿಯ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಬಿ.ಕಾಂ ಪಠ್ಯದಲ್ಲಿ ಸೇರ್ಪಡೆಗೊಂಡಿದೆ. ಎರಡನೆಯ ಕವನ ಸಂಕಲನ “ಪ್ರತಿರೋಧ ಮತ್ತು ಪ್ರಿಯತಮೆ” ಬಿಡುಗಡೆಗೆ ಸಿದ್ಧವಾಗಿದೆ.