23/12/2024
IMG-20241002-WA0004

ವೈದ್ಯಕೀಯ ವೃತ್ತಿ ಸಮಾಜಮುಖಿಯಾಗಲಿ: ಡಾ.ಪ್ರಶಾಂತ ಕಟಕೋಳ

ಬೆಳಗಾವಿ-೦೨ : ‘ನಿಜವಾದ ವೈದ್ಯಕೀಯ ವೃತ್ತಿಯನ್ನು ಅರಿತು ಸಮಾಜಮುಖಿಯಾಗಿ ಕಾರ್ಯನಿರ್ವಹಿಸುವ ಮನಸ್ಸನ್ನು ನಾವು ಈಗಿನಿಂದಲೇ ಸಿದ್ಧಗೊಳಿಸಿಕೊಳ್ಳಬೇಕು. ವೈದ್ಯಕೀಯ ಕಲಿಕೆಯೆಡೆಗೆ ಗಮನ ಹರಿಸಿ ಜೀವನವನ್ನು ಅದ್ಭುತವಾಗಿ ನಿರ್ಮಿಸಿಕೊಳ್ಳಬೇಕೆಂದು ಖ್ಯಾತ ನರರೋಗ ಶಸ್ತç ಚಿಕಿತ್ಸಕ ಜಾಂಬೋಟಿಯ ಕೈವಲ್ಯಂ ಯೋಗಾಶ್ರಮದ’ ಡಾ.ಪ್ರಶಾಂತ ಕಟಕೋಳ ಹೇಳಿದರು.
ಅವರು ದೇವರಾಜ್ ಅರಸ್ ಬಡಾವಣೆಯ ನಾಗನೂರು ರುದ್ರಾಕ್ಷಿಮಠದ ಶ್ರೀಮತಿ ಚಿನ್ನಮ್ಮ ಹಿರೇಮಠ್ ವೃದ್ಧಾಶ್ರಮದಲ್ಲಿ , ಬೈಲಹೊಂಗಲದ ಡಾ.ರಾಮಣ್ಣವರ ಚಾರಿಟೇಬಲ್ ಟ್ರಸ್ಟ್ ನೀಟ್‌ದಲ್ಲಿ ರ‍್ಯಾಂಕ್ ಪಡೆದ ಪ್ರತಿಭಾವಂತ ವೈದ್ಯ ವಿದ್ಯಾರ್ಥಿಗಳಿಗೆ ವೈದ್ಯಕೀಯ ಪುಸ್ತಕ, ಸಮವಸ್ತç ಹಾಗೂ ವೈದ್ಯಕೀಯ ಸಾಮಗ್ರಿಗಳನ್ನು ಅರ್ಪಿಸಿ ಮಾತನಾಡಿದರು. ‘ನಮ್ಮ ಆತ್ಮಬಲವನ್ನು ಹೆಚ್ಚಿಸಿಕೊಳ್ಳುವುದು ಮುಖ್ಯ. ವೈದ್ಯಕೀಯ ವೃತ್ತಿ ಅತ್ಯಂತ ಪವಿತ್ರ ಹಾಗೂ ಶ್ರೇಷ್ಠ ವೃತ್ತಿಗಳಲ್ಲಿ ಒಂದಾಗಿದ್ದು ಅದನ್ನು ನಿಷ್ಠೆಯಿಂದ ಮಾಡಬೇಕು. ಮನಸ್ಸನ್ನು ಅತ್ತಿಇತ್ತ ಹರಿಬಿಡದೆ ಬದ್ಧತೆ ಹಾಗೂ ನಿಷ್ಠುರವಾಗಿ ತಪಿಸ್ಸಿನಂತೆ ಕೈಗೊಂಡಿದ್ದೇ ಆದರೆ ಯಶಸ್ಸು ಕಾಣಲು ಸಾಧ್ಯ. ರೋಗಿಯ ನೋವು ನನ್ನದೆಂದು ತಿಳಿದು ಚಿಕಿತ್ಸೆ ನೀಡಬೇಕು. ವೈದ್ಯ ಎಲ್ಲರೊಂದಿಗೆ ಆತ್ಮೀಯವಾದ ಒಡನಾಟವನ್ನು ಹೊಂದುವುದು ಮುಖ್ಯ. ನಾನೇ ಶ್ರೇಷ್ಠ ಎಂಬ ಅಹಂಮಿಕೆಯಿAದ ಹೊರಬಂದು ನಿಂತಾಗ ಒಬ್ಬ ಒಳ್ಳೆಯ ವೈದ್ಯ ರೂಪಗೊಳ್ಳಲು ಸಾಧ್ಯ. ಯಾವುದನ್ನು ಕೀಳಿರಮೆಯಿಂದ, ಸಣ್ಣತನವನ್ನು ನೋಡದೆ ಸಮಾನವಾಗಿ ಕಂಡಾಗ ಅದ್ಭುತವಾದುದು ಸಾಧಿಸಲು ಸಾಧ್ಯ. ನಮ್ಮೊಳಗಿನ ವ್ಯಾತ್ಯಾಸವನ್ನು ನಾವೇ ಗುರುತಿಸಿಕೊಳ್ಳಬೇಕು. ಇತರರನ್ನು ಸಮೀಕರಿಸದೆ ನಾವು ನಾವಾಗಿ ಬೆಳೆಯಬೇಕು. ಈ ಸಮಾಜಕ್ಕೆ ಉತ್ತಮವಾದ ಕೊಡುಗೆಗಳನ್ನು ಕೊಡಬೇಕೆಂದು’ ಹೇಳಿದರು.
ಇನ್ನೋರ್ವ ಅತಿಥಿಗಳಾಗಿ ಆಗಮಿಸಿದ್ದ ಬೆಳಗಾವಿ ವೈದ್ಯಕೀಯ ವಿಜ್ಞಾನ ಸಂಸ್ಥೆಯ ಔಷಧ ಶಾಸ್ತçವಿಭಾಗದ ಡಾ.ಬಸವರಾಜ ಕೋಟಿನತೋಟ ಅವರು ಮಾತನಾಡುತ್ತ, ನೀವೆಲ್ಲ ಅತ್ಯಂತ ಪರಿಶ್ರಮದಿಂದ ನೀಟ್ ಪರೀಕ್ಷೆಯಲ್ಲಿ ರ‍್ಯಾಂಕ್‌ನ್ನು ಸಂಪಾದಿಸಿದ್ದೀರಿ. ಇದೇ ಪರಿಶ್ರಮವು ಮುಂದಿನ ಎಂಬಿಬಿಎಸ್ ಕೋರ್ಸದಲ್ಲಿಯೂ ಇರಬೇಕು. ಹೆತ್ತರವ ಕನಸುಗಳನ್ನು ಸಾಕಾರಗೊಳಿಸಿ ಸಮಾಜದಋಣವನ್ನು ತೀರಸಬೇಕೆಂದು ಹೇಳಿದರು.
ಖ್ಯಾತ ಬಂಜೆತನ ಹಾಗೂ ಸ್ತಿçÃರೋಗ ತಜ್ಞರು ಜನನಿ ಟ್ರಸ್ಟ್ನ ಕಾರ್ಯದರ್ಶಿ ಡಾ. ದತ್ತು ಪ್ರಸಾದ್ ಗಿಜರೆ ಮಾತನಾಡಿ, ಪ್ರತಿ ವರ್ಷ ಡಾ.ರಾಮಣ್ಣವರ ಟ್ರಸ್ಟ್ ನೀಟ್ ಪರೀಕ್ಷೆಯಲ್ಲಿ ರಾಂಕ್ ಪಡೆದ ಬೈಲಹೊಂಗಲದ ವೈದ್ಯ ವಿದ್ಯಾರ್ಥಿಗಳನ್ನು ಕರೆದು ಸನ್ಮಾನ ಮಾಡುತ್ತಿದೆ, ಅದರ ಉದ್ದೇಶ ಸಮಾಜ ಸೇವೆಯಲ್ಲಿ ನೀವು ತೊಡಗಬೇಕು. ಇಂದು ವೈದ್ಯಕೀಯ ಕೋರ್ಸುಗಳನ್ನು ಕಲಿಯಲು ಸಾಕಷ್ಟು ಅನುಕೂಲತೆಗಳನ್ನು ಕಲ್ಪಿಸಿಕೊಡಲಾಗಿದೆ. ಅತ್ಯಾಧುನಿಕ ಸೌಲಭ್ಯಗಳು ಲಭ್ಯವಿದೆ, ಪಠ್ಯಕ್ಕೆ ಪೂರಕವಾದ ಅನೇಕ ಗ್ರಂಥಗಳನ್ನು ಅಭ್ಯಾಸ ಮೂಲಕ, ಹಾಗೂ ದೈವಿಕ ಚಿಂತನೆಗಳನ್ನ ಗಮನದಲ್ಲಿಟ್ಟುಕೊಂಡು ವೈದ್ಯ ಅಧ್ಯಯನವನ್ನು ಪೂರೈಸಿಕೊಳ್ಳಬೇಕಾಗಿದೆ. ವಿದ್ಯಾರ್ಥಿಗಳಾದವರು ಅನ್ಯ ಚಟಗಳಿಗೆ ದಾಸರಾಗದೆ, ಅತ್ಯಂತ ನಿಷ್ಠೆಯಿಂದ ಬದ್ಧತೆಯಿಂದ ಈ ವೃತ್ತಿಕೋರ್ಸವನ್ನು ಪೂರೈಸುವುದು ಅಷ್ಟೇ ಮುಖ್ಯ. ನಿಸ್ವಾರ್ಥವಾಗಿ ನಮ್ಮನ್ನು ಸಮಾಜಕ್ಕೆ ಸಮರ್ಪಿಸಿಕೊಳ್ಳಬೇಕೆಂದು ಹೇಳಿದರು.
ದಿವ್ಯಸಾನ್ನಿಧ್ಯವಹಿಸಿ ಆಶೀರ್ವಚನ ನೀಡಿದ ದೇಹದಾನಿ ಕಾರಂಜಿಮಠದ ಪೂಜ್ಯ ಗುರುಸಿದ್ಧ ಮಹಾಸ್ವಾಮೀಜಿಯವರು ವೈದ್ಯ ವೃತ್ತಿ ಪವಿತ್ರವಾದ ಸೇವೆ ಅದು ಸಮಾಜಕ್ಕೆ ಮೀಸಲಾಗಿಟ್ಟರೆ ಇನ್ನೂ ಶ್ರೇಷ್ಠ. ತಂದೆ ತಾಯಿಗಳ ಕನಸನ್ನು ನೀವು ಈಡೇರಿಸಿದ್ದೀರಿ. ತಮ್ಮ ವೈದ್ಯಕೀಯ ಕೋರ್ಸ್ ಯಶಸ್ವಿಯಾಗಿ ಪೂರೈಸಬೇಕು. ಕೆಟ್ಟಚಟಗಳ ದಾಸರಾಗದೆ, ವೈದ್ಯಲೋಕ ಸಾಧಕರಾಗಬೇಕು. ಕೇವಲ ವೈದ್ಯರಾಗುವುದು ಮಾತ್ರವಲ್ಲ ಸಮಾಜದ ಸೇವೆಯಲ್ಲಿ ತಮ್ಮನ್ನು ತೊಡಗಿಸುವಂಥಾಗಬೇಕು. ಖ್ಯಾತ ವೈದ್ಯರಾಗಿರುವ ಡಾ.ಮಹಾಂತೇಶ ರಾಮಣ್ಣನವರ ಅವರು ನಿಮ್ಮೆಲ್ಲರಿಗೂ ಸ್ಪೂರ್ತಿಯ ಸೆಲೆಯಾಗಿದ್ದಾರೆ. ಅವರ ಪಥದಲ್ಲಿ ಮುನ್ನಡೆಯಬೇಕು ಎಂದು ನುಡಿದರು.
ಸ್ವಾಗತ ಕೋರಿ ಪ್ರಸ್ತಾವಿಕ ನುಡಿಗಳನ್ನಾಡಿದ ಕೆಎಲ್‌ಇ ಬಿ ಎಂ ಕಂಕಣವಾಡಿ ಮಹಾವಿದ್ಯಾಲಯ ಶರೀರ ರಚನಾ ಶಾಸ್ತç ವಿಭಾಗದ ಮುಖ್ಯಸ್ಥ ಡಾ. ಮಹಾಂತೇಶ್ ರಾಮಣ್ಣವರ್ ಅವರು ವೃದ್ಧಾಶ್ರಮದಲ್ಲಿ ಕಾರ್ಯಕ್ರಮವನ್ನು ಆಯೋಜಿಸುವ ಮೂಲಕ ವೈದ್ಯಕೀಯ ವಿದ್ಯಾರ್ಥಿಗಳಿಗೆ ಸಂದೇಶವನ್ನು ರವಾನಿಸಲಾಗುತ್ತಿದೆ. ಸಮಾಜಸೇವೆಗೆ ನಮ್ಮ ಬದುಕು ಮೀಸಲಾಗಿರಬೇಕು, ಜೀವನದಲ್ಲಿ ನಾವು ಏನೆಲ್ಲವನ್ನು ಗಳಿಸಬಹುದು ಆದರೆ ತಂದೆ ತಾಯಿಗಳನ್ನು ಋಣವನ್ನು ತೀರಿಸಲಾಗುವುದಿಲ್ಲ. ನಮ್ಮ ಬದುಕು ಸಮಾಜಮುಖಿಯಾಗಲಿ ಎಂದು ಕಿವಿಮಾತು ಹೇಳಿದರು.
ವೇದಿಕೆ ಮೇಲೆ ವೃದ್ರಾಶ್ರಮ ಸಂಯೋಜಕರಾದ ಎಂ ಎಸ್ ಚೌಗುಲಾ, ಪ್ರೊಫೆಸರ್ ಕಿರಣ್ ಚೌಗಲಾ, ಯುನಿವರ್ಸಲ್ ಬುಕ್ಸ್ ಮತ್ತು ಮೆಡಿಕಲ್ ಎಕ್ವಿಪ್ಮೆಂಟ್ಸ್ ಸೋಮಶೇಖರ್ ಕಣಗಲಿ ಉಪಸ್ಥಿತರಿದ್ದರು. ಯೋಗ್ಯಾ ಶೆಟ್ಟಿ ನಿರೂಪಿಸಿದರು. ನಿಖಿಲ್ ಹೂಲಿ ಪ್ರಾರ್ಥಿಸಿದರು. ಸುಮನ ಕರ್ನಾವತ್, ಡಾ.ಅಭಿಷೇಕ್ ಅಸ್ಕಿ, ಡಾ.ಮಲ್ಲಿಕಾರ್ಜುನ ಪಡತಾರೆ, ಐಶ್ವರ್ಯಾ ಮಿಟ್ಟಿ, ಸ್ಫೂರ್ತಿ ಪಡಗುರೆ ಪಾಲಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

error: Content is protected !!