ಅಂಕಲಗಿ-೦೧, ಮಹಾಂತೇಶನಗರದ ನಿವಾಸಿಗಳಾದ ವೈದ್ಯ ದಂಪತಿಗಳ ಮನೆಯಲ್ಲಿ ಕಳ್ಳತನ ಮಾಡಿ ದೋಚಿದ್ದ ಸುಮಾರು ೪ ಲಕ್ಷಕ್ಕೂ ಹೆಚ್ವು ಮೌಲ್ಯದ ಚಿನ್ನಾಭರಣ ಸೇರಿದಂತೆ ಇಲೆಕ್ಟ್ರಾನಿಕ್ಸ್ ವಸ್ತುಗಳನ್ನು ಕಳ್ಳರಿಂದ ವಶಪಡಿಸಿಕೊಂಡು ವೈದ್ಯರಿಗೆ ಮರಳಿಸಿದ ಪೋಲೀಸರ ಕಾರ್ಯಕ್ಕೆ ಸಾರ್ವಜನಿಕರಿಂದ ಎಲ್ಲೆಡೆ ಪ್ರಶಂಸೆ ವ್ಯಕ್ತವಾಗಿದೆ.
ಕಳೆದ ಜುಲೈ ೨೭ ರಂದು ಮನೆ ಬಾಗಿಲಿಗೆ ಕೀಲಿ ಹಾಕಿ ವೈದ್ಯರೀರ್ವರು ಹುಟ್ಟೂರಿಗೆ ತೆರಳಿದ್ದನ್ನು ಗಮನಿಸಿದ್ದ ಚಾಲಾಕಿ ಕಳ್ಳರು ಬೆಳಗಿನ ಜಾವ ಮನೆಯ ಕೀಲಿ ಮುರಿದು ಮನೆಯಲ್ಲಿಟ್ಟಿದ್ದ ಸುಮಾರು ೪ ಲಕ್ಷಕ್ಕೂ ಹೆಚ್ಚು ಮೌಲ್ಯದ ಚಿನ್ನಾಭರಣ ಸೇರಿದಂತೆ ಇತರ ಇಲೆಕ್ಟ್ರಾನಿಕ್ಸ್ ವಸ್ತುಗಳನ್ನು ಕಳ್ಳತನ ಮಾಡಿ ಪರಾರಿಯಾಗಿದ್ದರು. ಹತ್ತಿರದ ಮನೆಯವರಿಂದ ಸುದ್ದಿ ತಿಳಿದ ಮನೆಯ ವೈದ್ಯ ದಂಪತಿಗಳಾದ ಡಾ ವೀಣಾ ಮತ್ತು ಡಾ ವಿಜಯಮಹಾಂತೇಶ ನಿಡಗುಂದಿ ಮಾಳಮಾರುತಿ ಪೊಲೀಸ ಠಾಣೆಗೆ ಕಳ್ಳತನದ ಪ್ರಕರಣ ದಾಖಲಿಸಿದ್ದರು. ಮನೆಯಲ್ಲಿದ್ದ ಸಿ ಸಿ ಕ್ಯಾಮರಾ ದ ಆಧಾರದ ಮೇಲೆ ಪೊಲೀಸರು ಕಳ್ಳರ ಜಾಡು ಹಿಡಿದು ಬೆನ್ನು ಹತ್ತಿ ಯಶಸ್ವಿಯಾಗಿ ಪ್ರಕರಣ ಭೇಧಿಸಿ ಕಳ್ಳರನ್ನು ಹಿಡಿದಿದ್ದಲ್ಲದೆ, ಪ್ರಕರಣ ದಾಖಲಿಸಿ ಅವರಿಂದ ಕಳ್ಳತನ ಮಾಡಿದ್ದ ವಸ್ತುಗಳನ್ನು ವಶಪಡಿಸಿಕೊಂಡು ಸೋಮವಾರ ವೈದ್ಯ ದಂಪತಿಗಳಿಗೆ ಮರಳಿಸಿದ್ದಾರೆ. ಕಳುವಾದ ವಸ್ತುಗಳನ್ನು ಮರಳಿಸಿದ ಸಿ ಪಿಐ ಜೆ.ಎಂ ಕಾಲಿಮಿರ್ಚಿ, ಎಸ್ ಐ. ಶ್ರೀಶೈಲ ಹುಳಗೇರಿ ಮತ್ತು ಸಿಬ್ಬಂದಿ ಅವರನ್ನು ವೈದ್ಯರಾದ ಡಾ ವೀಣಾ ಮತ್ತು ಡಾ ವಿಜಯಮಹಾಂತೇಶ ನಿಡಗುಂದಿ ಅಭಿನಂದಿಸಿದ್ದಲ್ಲದೆ, ಧನ್ಯವಾದ ಹೇಳಿದ್ದಾರೆ. ಮಾಳಮಾರುತಿ ಪೊಲೀಸ ಠಾಣಾಧಿಕಾರಿ ಗಳು ಮತ್ತು ಸಿಬ್ಬಂದಿ ಈ ಸಾಹಸಕ್ಕೆ ಮಹಾಂತೇಶ ನಗರ, ಆಂಜನೇಯ ನಗರ ಸೇರಿದಂತೆ ಇತರ ಬಡಾವಣೆಗಳ ಎಲ್ಲೆಡೆ ಸಾರ್ವಜನಿಕರಿಂದ ಪ್ರಶಂಸೆ ವ್ಯಕ್ತವಾಗಿದೆ. ಈ ಸಂದರ್ಭದಲ್ಲಿ ಪೊಲೀಸ ಠಾಣೆಯ ಸಿಪಿಐ ಜೆ.ಎಮ್. ಕಾಲಿಮಿರ್ಚಿ, ಎಸ್.ಐ. ಶ್ರೀಶೈಲ ಹುಳಗೇರಿ ಸೇರಿದಂತೆ, ಡಾ ವೀಣಾ ರ ತಂದೆ ಕ್ಯಾಪ್ಟನ್ ಬಿಎಲ್ ಪರಗನ್ನವರ ಸೇರಿದಂತೆ ಪೊಲೀಸ ಸಿಬ್ಬಂದಿ ಹಾಜರಿದ್ದರು.