23/12/2024
IMG-20240930-WA0085

ಬೆಳಗಾವಿ-೩೦: ಸೋಮವಾರ ಬೆಳಗಾವಿ ನಗರದ ದೈವಜ್ಞ ಮಂಗಳ ಕಾರ್ಯಾಲಯದಲ್ಲಿ ಸಂಸ್ಕೃತ ಸಂಭಾಷಣ ಶಿಬಿರಗಳ ಅಭಿಯಾನದ ಸಮಾರೋಪ ಸಮಾರಂಭ ಯಶಸ್ವಿಯಾಗಿ ಮುಕ್ತಾಯಗೊಂಡಿತು. ಈ ಕಾರ್ಯಕ್ರಮದಲ್ಲಿ ಶಿಬಿರಾರ್ಥಿಗಳು ಮತ್ತು ಸಂಸ್ಕೃತ ಪ್ರೇಮಿಗಳು ಉತ್ಸಾಹದಿಂದ ಪಾಲ್ಗೊಂಡರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪ್ರಣವ್ ಪಿತ್ರೆ ಮಹಾವಿದ್ಯಾಲಯ ಉಪನ್ಯಾಸಕರು ಉಪಸ್ಥಿತರಿದ್ದರು. ಮುಖ್ಯ ವಕ್ತಾರರೂಪದಲ್ಲಿ ಕರ್ನಾಟಕ ಉತ್ತರ ಪ್ರಾಂತದ ಸಹಮಂತ್ರಿಯಾದ ಶ್ರೀ ಶ್ರೀಕಾಂತ್ ಕುಲಕರ್ಣಿ ಹಾಗೂ ಬೆಳಗಾವಿ ನಗರ ಅಧ್ಯಕ್ಷರಾದ ಶ್ರೀ ಶ್ರೀಧರ್ ಗುಮ್ಮಾನಿ ಅವರು ವೇದಿಕೆಯ ಮೇಲೆ ಆಸೀನರಾಗಿದ್ದರು.

ಮುಖ್ಯ ವಕ್ತಾರರಾದ ಶ್ರೀ ಶ್ರೀಕಾಂತ್ ಕುಲಕರ್ಣಿ ಅವರು ಸಂಸ್ಕೃತವು ನಮ್ಮ ಎಲ್ಲ ಭಾರತೀಯ ಭಾಷೆಗಳ ಮೂಲ ಭಾಷೆಯಾಗಿದ್ದು, ಅದರ ಮೌಲ್ಯವನ್ನು ನಾವು ಮರೆತಿದ್ದೇವೆ. ಇದು ಈಗ ಪುನಃ ಜೀವಂತವಾಗಬೇಕೆಂದು ಮತ್ತು ನಾವೆಲ್ಲರೂ ಅದಕ್ಕಾಗಿ ಶ್ರಮಿಸಬೇಕೆಂದು ಹೇಳಿದರು. ಅತಿಥಿಗಳು ಸಂಸ್ಕೃತವು ವೈಜ್ಞಾನಿಕ ಭಾಷೆ ಎಂದು ಹೇಳಿದರು ಮತ್ತು ಸಂಸ್ಕೃತ ಭಾಷೆಯಿಂದ ಸಂಸ್ಕೃತಿಯನ್ನು ಉಳಿಸುವ ಅಗತ್ಯವಿದೆ ಎಂಬ ಅಭಿಪ್ರಾಯವನ್ನು ಹಂಚಿಕೊಂಡರು.
ಅಧ್ಯಕ್ಷರು ನಗರದ ವಿವಿಧ ಸ್ಥಳಗಳ ಜವಾಬ್ದಾರಿ ಘೋಷಣೆ ಮಾಡಿದರು.
ಈ ಅಭಿಯಾನದ ಯಶಸ್ಸಿಗಾಗಿ ಬೆಳಗಾವಿ ನಗರದ ಕಾರ್ಯಕರ್ತರು ಮತ್ತು ವಿಶೇಷವಾಗಿ ಯುವಕರು ಬಹಳಷ್ಟು ಶ್ರಮಿಸಿದರು. ಇವರೆಲ್ಲರ ಪರಿಶ್ರಮದಿಂದ ಸಂಭಾಷಣ ಶಿಬಿರ ಯಶಸ್ವಿಯಾಗಿ ಮುಕ್ತಾಯಗೊಂಡಿತು.

error: Content is protected !!