23/12/2024
IMG-20240930-WA0074

ಬೆಳಗಾವಿ-೩೦ : ರಾಜ್ಯ ಸರ್ಕಾರ, ನಾಮಫಲಕ ಮತ್ತು ಜಾಹಿರಾತು ಫಲಕಗಳಲ್ಲಿ ಕನ್ನಡ ಭಾಷೆಯನ್ನು ಕಡ್ಡಾಯವಾಗಿ ಬಳಸುವಂತೆ ಆದೇಶ ಹೊರಡಿಸಲಾಗಿದ್ದು, ಬೆಳಗಾವಿ ಮಹಾನಗರ ಸೇರಿದಂತೆ ಜಿಲ್ಲೆಯಾದ್ಯಂತ, ಅನ್ಯ ಭಾಷೆಯ ಜಾಹಿರಾತು ಫಲಕಗಳು ರಾರಾಜಿಸುತ್ತಿರುವುದಕ್ಕೆ ರಾಜಕೀಯ ನಾಯಕರು ಮತ್ತು ಜನ ಪ್ರತಿನಿಧಿಗಳು ಅನ್ಯಭಾಷೆಯಲ್ಲಿ ಬ್ಯಾನರ್ ಮತ್ತು ಕಟೌಟ್‌ಗಳನ್ನು ಅಚ್ಚುವ ಮೂಲಕ ಸರ್ಕಾರದ ಆದೇಶವನ್ನು ರಾಜಕೀಯ ನಾಯಕರೇ ಉಲ್ಲಂಘನೆ ಮಾಡುತ್ತಿರುವುದು ಕಂಡು ಬಂದಿರುತ್ತದೆ.

ಆದರಿಂದ ಕನ್ನಡ ನಾಮಫಲಕ ಕಡ್ಡಾಯದ ವಿಚಾರದಲ್ಲಿ ಬೆಳಗಾವಿ ಜಿಲ್ಲಾಡಳಿತ ಯಾವುದೇ ಮುಲಾಜಿಲ್ಲದೇ ಅನ್ಯ ಭಾಷೆಯ ನಾಮಫಲಕ, ಜಾಹಿರಾತು ಫಲಕ ಮತ್ತು ಅನ್ಯ ಭಾಷೆಯ ಕಟೌಟ್ ಬ್ಯಾನರ್‌ಗಳನ್ನು ತೆಗೆದು ಹಾಕುವ ಕಾರ್ಯಾಚರಣೆಯನ್ನು ಕೂಡಲೇ ಮಹಾನಗರ ಪಾಲಿಕೆಯವರು ಕೈಗೊಳ್ಳಬೇಕು ಹಾಗೂ ಒಂದು ವಾರ ಗಡುವು ಕೊಡಲಾಗಿದೆ.

ಈ ವಿಚಾರದಲ್ಲಿ ಮಹಾನಗರ ಪಾಲಿಕೆಯವರು ನಿರ್ಲಕ್ಷ್ಯ ಮಾಡಿದರೆ ಕರವೇ ಕಾರ್ಯಕರ್ತರು ಅನ್ಯಭಾಷೆಯ ಯಾವುದೇ ಫಲಕಗಳನ್ನು ಕಿತ್ತೆಸೆಯುವ ಆಂದೋಲನ ಮಾಡುತ್ತೇವೆ ಎಂಬ ವಿಷಯವನ್ನು ತಿಳಿಸುತ್ತಾ, ಮುಂದಿನ ದಿನಗಳಲ್ಲಿ ಅನ್ಯಭಾಷೆಗಳ ಕಟೌಟ್ ಬ್ಯಾನರ್ ಗಳನ್ನು ಅಳವಡಿಸಲು ಯಾರಿಗೂ ಅನುಮತಿ ನೀಡದೇ ಸರ್ಕಾರದ ಆದೇಶವನ್ನು ಎಲ್ಲರೂ ಪಾಲಿಸುವಂತೆ ಕಟ್ಟುನಿಟ್ಟಿನ ಆದೇಶ ಹೊರಡಿಸಬೇಕು.

ಕಾನೂನು ಎಲ್ಲರಿಗೂ ಒಂದೇ, ಕನ್ನಡ ಕಡ್ಡಾಯದ ವಿಚಾರದಲ್ಲಿ ಬೆಳಗಾವಿ ಮಹಾನಗರ ಪಾಲಿಕೆ ವಾರದೊಳಗಾಗಿ ಕ್ರಮ ಕೈಗೊಳ್ಳದಿದ್ದರೆ, ಸರ್ಕಾರದ ಆದೇಶ ಪಾಲಿಸಲು ಕರವೇ ಕಾರ್ಯಕರ್ತರು ಬೀದಿಗಿಳಿದು ಅನ್ಯ ಭಾಷೆಯ ಫಲಕಗಳನ್ನು ಕಿತ್ತೆಸೆದು ಸರ್ಕಾರದ ಆದೇಶವನ್ನು ಕರವೇ ಕಾರ್ಯಕರ್ತರೇ ಪಾಲಿಸಲಾಗುವುದು ಎಂದು ಮಹಾನಗರ ಪಾಲಿಕೆ ಅವರಿಗೆ ತಿಳಿಸಿದು, ಆದಷ್ಟು ಬೇಗ ಈ ವಿಚಾರದಲ್ಲಿ ಮಹಾನಗರ ಪಾಲಿಕೆಯವರು ಎಚ್ಚೆತ್ತುಕೊಳ್ಳುವಂತೆ ಮನವಿ ಪ್ರತಿಭಟನೆ ಮೂಲಕ ಕರವೇ ತಿಳಿಸಿದ್ದಾರೆ.

ಈ ಸಂದರ್ಭದಲ್ಲಿ ದೀಪಕ ಗುಡಗನಟ್ಟಿ,ಮಹಾದೇವ ತಳವಾರ,ಸುರೇಶ್ ಗವನ್ನವರ, ಗಣೇಶ ರೋಕಡೆ ಸೇರಿದಂತೆ ಹಲವು ಕಾರ್ಯಕರ್ತರು ಉಪಸ್ಥಿತಿರಿದ್ದರು.

error: Content is protected !!