ಬೆಳಗಾವಿ-೨೯: ಮಹಿಳೆಯರನ್ನು ಆರ್ಥಿಕವಾಗಿ ಸಬಲಗೊಳಿಸಲು ಮತ್ತು ಸ್ವಾವಲಂಭಿಯನ್ನಾಗಿಸಲು ಮಹಿಳೆಯರಿಗೆ ತ್ರಿಚಕ್ರ ಪ್ಯಾಸೆಂಜರ್ ಅಟೋರಿಕ್ಷಾ ವಾಹನವನ್ನು ವಿತರಿಸಲಾಗುತ್ತಿದೆ ಎಂದು ಬೆಳಗಾವಿ ದಕ್ಷಿಣ ಮತಕ್ಷೇತ್ರದ ಶಾಸಕ ಅಭಯ ಪಾಟೀಲ ಹೇಳಿದರು.
ನಗರದ ತಮ್ಮ ಕಚೇರಿ ಆವರಣದಲ್ಲಿ ರವಿವಾರ ನಡೆದ ಕಾರ್ಯಕ್ರಮದಲ್ಲಿ ಮಹಿಳೆಯರಿಗೆ ಇಲೆಕ್ಟ್ರಿಕಲ್ ಅಟೋರಿಕಷಾ ವಿತರಿಸಿ ಮಾತನಾಡಿದ ಅವರು, ಮಹಿಳೆಯರು ಆರ್ಥಿಕವಾಗಿ ಸಬಲರಾಗಬೇಕು. ಸ್ವಾವಲಂಬಿ ಜೀವನ ನಡೆಸಬೇಕು ಎಂಬ ಉದ್ದೇಶ ಹೊಂದಲಾಗಿದೆ ಎಂದರು.
ಬೆಂಗಳೂರಿನ ಪ್ರಜ್ಞಾ ಆಟೋ ಮೊಬೈಲ್ಸ್ ಈ ತ್ರಿಚಕ್ರವಾಹನಗಳನ್ನು ಸಿದ್ಧಪಡಿಸಿದ್ದು, ಉತ್ತರ ಕರ್ನಾಟಕದಲ್ಲಿ ಅದರಲ್ಲೂ ಬೆಳಗಾವಿಯಲ್ಲಿ ಮೊದಲಬಾರಿ ಇಂತಹ ತ್ರಿಚಕ್ರ ಆಟೋ ಪ್ರಾಯೋಗಿಕವಾಗಿ ಪರಿಚಯಿಸಲಾಗುತ್ತಿದೆ. ಮಹಿಳೆಯರು ಸ್ವಾವಲಂಬಿ ಜೀನವ ನಡೆಸಲು ಸಹಕಾರಿಯಾಗಿವೆ.
ಬೆಳಗಾವಿ ದಕ್ಷಿಣ ಕ್ಷೇತ್ರದಲ್ಲಿ ಸುಮಾರು 50 ತ್ರಿಚಕ್ರವಾಹನಗಳ ಬಳಕೆ ಅವಶ್ಯಕವಾಗಿದ್ದು, ಮೊದಲ ಹಂತದಲ್ಲಿ 25 ಜನರಿಗೆ ವಿತರಿಸುವ ಉದ್ದೇಶ ಹೊಂದಲಾಗಿದೆ ಎಂದು ಶಾಸಕ ಅಭಯ ಪಾಟೀಲರು ತಿಳಸಿದರು.
ಪ್ರಜ್ಞಾ ಆಟೋ ಮೊಬೈಲ್ಸನ ಪ್ರಮುಖರು ಈ ಸಂದರ್ಭದಲ್ಲಿ ಮಾತನಾಡಿ ಪರಿಸರ ರಕ್ಷಣೆಯ ಜೊತೆಗೆ ಹಣದ ಉಳಿತಾಯಕ್ಕಾಗಿ ಈ ತ್ರಿಚಕ್ರ ವಾಹನಗಳನ್ನು ಸಿದ್ಧಪಡಿಸಲಾಗಿದೆ. ಸುಮಾರು 4 ಜನರು ಇದರಲ್ಲಿ ಪ್ರಯಾಣಿಸಬಹುದಾಗಿದೆ ಎಂದರು.
ಪ್ರತಿ ದಿನಕ್ಕೆ 5 ಗಂಟೆ ಚಾರ್ಜ್ ಮಾಡಿದರೇ ಸಾಕು, 100 ಕಿಲೋ ಮೀಟರ್ ಪ್ರಯಾಣಿಸಬಹುದು. 1 ಲಕ್ಷ 40 ಸಾವಿರ ಮತ್ತು 1 ಲಕ್ಷ 70 ಸಾವಿರ ರೂ.ಗಳ ಬೆಲೆಯಲ್ಲಿ ಈ ವಾಹನಗಳು ಲಭ್ಯ ಇದೇ ಎಂದು ಅವರು ಹೇಳಿದರು.
ಒಟ್ಟಿನಲ್ಲಿ ಸ್ಮಾರ್ಟ್ ಸಿಟಿ ಬೆಳಗಾವಿಗೆ ಹೊಸ ವಾಹನಗಳು ಲಗ್ಗೆ ಇಡುತ್ತಿದ್ದು, ಪರಿಸರ ಮಾಲಿನ್ಯ ತಡೆಯೊಂದಿಗೆ ಮಹಿಳೆಯ ಆರ್ಥಿಕ ಮಟ್ಟವನ್ನು ಸುಧಾರಿಸಲು ಮುಂದಾಗಿರುವ ಶಾಸಕ ಅಭಯ ಪಾಟೀಲರ ಪ್ರಯತ್ನಕ್ಕೆ ಎಲ್ಲೆಡೆ ಈಗ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ಬಿಜೆಪಿ ಮಹಾನಗರ ಜಿಲ್ಲಾಧ್ಯಕ್ಷ್ಯೆ ಗೀತಾ ಸುತಾರ, ಉದ್ಯಮಿ ಭರತ ದೇಶಪಾಂಡೆ, ಸೇರಿದಂತೆ ಅನೇಕ ಬಿಜೆಪಿ ಮುಖಂಡರು, ಕಾರ್ಯಕರ್ತರು ಹಾಜರಿದ್ದರು.