ಅಂಕಲಗಿ-೨೯- ವ್ಯಕ್ತಿಯ ವ್ಯಕ್ತಿತ್ವವು ಅವನ ಗುಣ, ಸ್ವಭಾವವನ್ನು ಅವಲಂಭಿಸಿದೆ.. ಕೊಡುಗೈ ದಾನಿ ಸಮಾಜದಲ್ಲಿ ಎಂದೆಂದೂ ಶ್ರೀಮಂತ ದೇಣಿಗೆ ಎಂಬುದು ಅಂತರಂಗದ ಶ್ರೀಮಂತಿಕೆ ಎಂದು ಬೆಳಗಾವಿಯ ರಾಮತೀರ್ಥನಗರ ದ. ಕಾರ್ಯಸಿದ್ಧಿ ಆಂಜನೇಯ ದೇವಸ್ಥಾನ ಕಮಿಟಿ ಅದ್ಯಕ್ಷ ಸುರೇಶ ಉರಬಿನಹಟ್ಟಿ ಹೇಳಿದರು. ಅವರು ಶನಿವಾರ ದಾನಿ ಚಂದ್ರಶೇಖರ್ ಮಾಸೂರ ಅವರ ಸುಪುತ್ರರಾದ ಖ್ಯಾತ ವೈದ್ಯ ಡಾ. ಉದಯ ಚಂದ್ರಶೇಖರ ಮಾಸೂರ ಅವರ ಹೆಸರಿನಲ್ಲಿ ಕಾರ್ಯಸಿದ್ಧಿ ಆಂಜನೇಯ ದೇವಸ್ಥಾನದ ಸ್ಟೇನಲೆಸ್ ಸ್ಟೀಲ್ ಮುಖ್ಯ ದ್ವಾರ ನಿರ್ಮಾಣಕ್ಕೆ ಇಪ್ಪತ್ತೈದು ಸಾವಿರ ರೂ. ಉದಾರ ದೇಣಿಗೆ ಸಲ್ಲಿಸಿದ್ದಕ್ಕಾಗಿ ಧನ್ಯವಾದ ಹೇಳಿ ಮಾತನಾಡಿದರು.. ದೇವಸ್ಥಾನದ ಅವರ ಈ ಸಮಾಜಮುಖಿ ಸೇವೆಗೆ ದೇವಸ್ಥಾನದ ಆಡಳಿತ ಮಂಡಳಿ ಮತ್ತು ಎಸ್.ಎಸ್.ಎಸ್ ಸಂಘ ಅವರಿಗೆ ಎಂದೆಂದೂ ಚಿರಋಣಿ ಯಾಗಿದೆ ಎಂದರಲ್ಲದೆ, ಚಂದ್ರಶೇಖರ ಮಾಸೂರ ಅವರು ತಮ್ಮ ೮೫ ರ ಇಳಿ ವಯಸ್ಸಿನಲ್ಲೂ ಹದಿನಾರರ ಉತ್ಸಾಹ ಉಳಿಸಿಕೊಂಡವರಲ್ಲದೆ, ನಿವ್ರತ್ತ ಸೈನಿಕರ ಪಿಂಚಣಿ ಮತ್ತು ಮಾಜಿ ಸೈನಿಕರ ಕಲ್ಯಾಣಕ್ಕಾಗಿರುವ ಇತರ ಸರ್ಕಾರಿ ಸೌಲಭ್ಯಗಳನ್ನು ಕೊಡಿಸುವ ಉದಾರ ಮನಸ್ಸುಳ್ಳವರಲ್ಲದೆ, ಹಸನ್ಮುಖಿ ಯಾದ ಇವರು ಸದಾ ಚಟುವಟಿಕೆ ಯುಳ್ಳವರು. ತಮ್ಮಲ್ಲಿಯ ಉದಾರ ಮನಸ್ಸಿನಿಂದಾಗಿ ದೇಣಿಗೆ ಸಲ್ಲಿಸಿ ಇತರರಿಗೆ ಸ್ಫೂರ್ತಿ ಎನಿಸಿದ್ದು, ಇವರನ್ನು ಮತ್ತು ಎಲ್ಲ ದೇವಸ್ಥಾನದ ಕೊಡುಗೈದಾಣಿಗಳನ್ನು ಮುಂಬರುವ ಹನುಮ ಜಯಂತಿ ಸಂದರ್ಭದಲ್ಲಿ ಆಯೋಜಿಸುವ
ದೇವಸ್ಥಾನ ಉದ್ಘಾಟನಾ ಸಮಾರಂಭದಲ್ಲಿ ಸ್ವಾಗತಿಸಿ, ಸ್ಮರಣ ಫಲಕ ದೊಂದಿಗೆ ಸನ್ಮಾನಿಸಿ ಗೌರವಿಸಲಾಗುವದು ಎಂದು ಪ್ರಕಟಣೆಯಲ್ಲಿ ತಿಳಿಸಿದರು.