ಬೆಳಗಾವಿ-೨೯- ಕಾರ್ಯಸಿದ್ಧಿ ಆಂಜನೇಯ ದೇವಸ್ಥಾನ ರಾಮತೀರ್ಥನಗರಕ್ಕೆ ಹೊಸ ಕಳೆ . ನಂಬಿ ಬರುವ ಭಕ್ತ ಸಾಗರದ ಕೈ ಹಿಡಿದು ನಡೆಸುವ ಈ ಆಂಜನೇಯ ಸ್ವಾಮಿಗೆ ಕಿಕ್ಕಿರಿದು ಸೇರುತ್ತಿರುವ ಭಕ್ತರ ಸಂಖ್ಯೆಯೇ ದೇವಸ್ಥಾನದ ಶಕ್ತಿ ಇಮ್ಮಡಿಗೆ ಕಾರಣ.
ನಾನೂ ಈ ಕಾರ್ಯಸಿದ್ಧಿ ಆಂಜನೇಯ ಸ್ವಾಮಿ ಪರಮ ಭಕ್ತ ಎಂದು ರಾಮತೀರ್ಥನಗರ ನಗರ ಸೇವಕ, ನ್ಯಾಯವಾದಿ ಹನುಮಂತ ಕೊಂಗಾಲಿ ಹೇಳಿದರು. ಅವರು ಭಾನುವಾರ ಇಲ್ಲಿಯ ಸುಪ್ರಸಿದ್ಧ ಶ್ರೀ ಕಾರ್ಯಸಿದ್ಧಿ ಆಂಜನೇಯ ದೇವಸ್ಥಾನದ ನೂತನ ಮುಖ್ಯ ದ್ವಾರ ಅಳವಡಿಸಲು ಹಮ್ಮಿಕೊಂಡ ದ್ವಾರ ಮಹಾ ಪೂಜಾ ಕೈಂಕರ್ಯದಲ್ಲಿ ಪಾಲ್ಗೊಂಡು ಪೂಜೆ ಸಲ್ಲಿಸಿ ಭಕ್ತರನ್ನುದ್ದೇಶಿಸಿ ಮಾತನಾಡಿದರು. ಯಾವ ಪ್ರದೇಶದಲ್ಲಿ ಪೂಜೆ, ಪುನಸ್ಕಾರಗಳು ನೆರವೇರುತ್ತವೆಯೋ, ಆ ಪ್ರದೇಶ ಸ್ವರ್ಗ ಸಮವೆಂದು ವೇದ, ಪುರಾಣಗಳಲ್ಲಿಯೂ ಉಲ್ಲೇಖಿತವಾಗಿವೆ. . ಈ ಕಾರ್ಯಸಿದ್ಧಿ ಆಂಜನೇಯ ಸ್ವಾಮಿ ಸರ್ವ ಭಕ್ತರ ಸುಖ, ಶಾಂತಿ ಇಮ್ಮಡಿಸಲಿ ಎಂದರು.
ಸುಮಂಗಲೆಯರಾದ ಲತಾ ಕಾಜಗಾರ, ಶ್ರೀದೇವಿ ಪಾಟೀಲ, ಮಹಾದೇವಿ ಕಮತ್, ಕಾವ್ಯಾ ಚಿಟಗಿ, ಪ್ರಗತಿ ಹಿರೇಮಠ ಇವರಿಗೆ ನಿರ್ಮಲಾ ಉರಬಿನಹಟ್ಟಿ ದೇವಸ್ಥಾನದ ಪರ ಉಡಿ ತುಂಬಿ ಗೌರವಿಸಿದರು.
ಅಧ್ಯಕ್ಷರಾದ ಸುರೇಶ ಉರಬಿನಹಟ್ಟಿ
ಮಾತನಾಡಿ, ಇನ್ನೂ ದೇವಸ್ಥಾನದ ಉಳಿದ ಕಾರ್ಯಕ್ಕೆ ಭಕ್ತರು ಅವಶ್ಯಕ ದೇಣಿಗೆ ಸಲ್ಲಿಸಿದಲ್ಲಿ ದೇವಸ್ಥಾನ. ಪೂರ್ಣಗೊಳಿಸಿ ಉದ್ಘಾಟನೆ ಕಾರ್ಯಕ್ರಮ ಆಯೋಜಿಸಲಾಗುವದು ಎಂದರಲ್ಲದೆ, ಪೂಜೆಯಲ್ಲಿ ಪಾಲ್ಗೊಂಡ ಎಲ್ಲರಿಗೂ ಧನ್ಯವಾದ ಹೇಳಿದರು. ಕಮಿಟಿ ಸದಸ್ಯರಾದ ಮನೋಹರ ಕಾಜಗಾರ, ಮಹೇಶ ಚಿಟಗಿ, ನಾರಾಯಣ ಹಣ್ಣಿಕೇರಿ, ಈರಯ್ಯಾ ಖೋತ, ಬಸವರಾಜ ಹಿರೇಮಠ, ಮಲ್ಲಪ್ಪ ದಂಡಿನವರ, ಆನಂದ ಹಣ್ಣಿಕೇರಿ ಸೇರಿದಂತೆ ಮುಂಬಾದೇವಿ ಸ್ಟೀಲ್ ಮತ್ತು ಹಾರ್ಡವೇರ್ ನ ಮಾಲೀಕರು, ಮತ್ತು ಸಿಬ್ಬಂದಿ ಉಪಸ್ತಿತರಿದ್ದರು.
ದೇವಸ್ಥಾನ ಪ್ರಧಾನ ಆರ್ಚಕರಾದ ಸಿದಬಸಯ್ಯಾ ಹಿರೇಮಠ ಪೂಜಾ ವಿಧಿ,ವಿಧಾನಗಳನ್ನು ನೆರವೇರಿಸಿದರು.