23/12/2024
IMG-20240929-WA0026

ಕಿತ್ತೂರು-೨೯: ಓಂ ಶ್ರೀ ಮಂಜುನಾಥ ನಮಃ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿಸಿ ಟ್ರಸ್ಟ್ ಕಿತ್ತೂರು ನಲ್ಲಿ ಚಂದ್ರಮ್ಮ ಅಂಗಡಿ ಕಲ್ಯಾಣ ಮಂಟಪದಲ್ಲಿ ನಡೆದ ಶ್ರೀ ಮಹಾಶಿವನಿಗೆ ಸಹಸ್ರ ಬಿಲ್ವಾರ್ಚನೆ ಪೂಜೆ ಹಾಗೂ ಒಕ್ಕೂಟ ಪದಗ್ರಹಣ ಹಾಗೂ ಧಾರ್ಮಿಕ ಸಭಾ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು ಉದ್ಘಾಟನೆಯನ್ನು ಪರಮಪೂಜ್ಯ ಮಡಿವಾಳ ರಾಜ ಯೋಗೇಂದ್ರ ಮಹಾಸ್ವಾಮಿಗಳು ರಾಜಗುರು ಸಂಸ್ಥಾನ ಕಲ್ಮಠ , ಶ್ರೀಮತಿ ರೋಹಿಣಿ ಬಾಬಾ ಸಾಹೇಬ್ ಪಾಟೀಲ್ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರು ಹಾಗೂ ಅಧಿಕಾರಿ ವರ್ಗದವರು ಮತ್ತು ಗಣ್ಯಮಾನ್ಯರು ಉಪಸ್ಥಿತರಿದ್ದು ಕಾರ್ಯಕ್ರಮದ ಉದ್ಘಾಟನೆಯನ್ನು ಮಾಡಲಾಯಿತು .

ಮುಖ್ಯ ಅತಿಥಿಯಾಗಿ ಆಗಮಿಸಿರುವ ಸಬ್ ಇನ್ಸ್ಪೆಕ್ಟರ್ ಆದ ಶ್ರೀ ಪ್ರವೀಣ್ ಕೋಟಿ ರವರು ಯೋಜನೆಯ ಕಾರ್ಯಕ್ರಮಗಳನ್ನು ರಾಜ್ಯಾದ್ಯಂತ ಮುಖ್ಯ ವಾಹಿನಿಗೆ ತರುವಂತ ಕೆಲಸಗಳನ್ನು ತುಂಬಾ ಕಾಳಜಿ ವಹಿಸಿ ಮಾಡುತ್ತಾರೆ ಹಾಗೂ ಗ್ರಾಮೀಣ ಹಾಗೂ ನಗರ ಪ್ರದೇಶದ ಜನರಿಗೆ ತುಂಬಾ ಸೌಲಭ್ಯಗಳ ಅವಕಾಶಗಳಿವೆ ಅದೇ ರೀತಿ ಕಡಿಮೆ ಬಡ್ಡಿ ದರದಲ್ಲಿ ಸಾಲ ಒದಗಿಸುವ ಉತ್ತಮ ಸಂಸ್ಥೆಯಾಗಿದೆ ಎಂದು ಮಾತನಾಡಿದರು. ನಂತರದಲ್ಲಿ ಕೃಷ್ಣಾಜಿ ಕುಲಕರ್ಣಿ ನಿಕಟಪೋರ್ವ ಜಿಲ್ಲಾ ಜನಜಾಗ್ರತಿ ವೇದಿಕೆ ಉಪಾಧ್ಯಕ್ಷರು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಸುಮಾರು 40 ವರ್ಷಗಳಿಂದ ಬೆಳೆದು ಬಂದ ಒಂದು ಉತ್ತಮ ಸಂಸ್ಥೆ ಹಾಗೂ ಸಾಮಾಜಿಕವಾಗಿ ಬೆಳವಣಿಗೆ ತರುವಂತ ಕಾರ್ಯಕ್ರಮಗಳನ್ನು ಪ್ರತಿಯೊಬ್ಬ ಮಹಿಳೆಯು ಯೋಜನೆಯ ಸೌಲಭ್ಯ ಪಡೆದುಕೊಳ್ಳಬೇಕು ಎಂದು ತಿಳಿಸಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಶ್ರೀಮತಿ ರೋಹಿಣಿ ರವರು ಮಹಿಳೆಯರು ಸಮಾಜದಲ್ಲಿ ಸ್ವಾವಲಂಬಿ ಬದುಕು ನಡೆಸಲು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾರಣ ಎಂದು ತಾವು ಕೂಡ ಒಬ್ಬ ಸಂಘದ ಸದಸ್ಯಯಾಗಿ ಭಾಗಿಯಾಗಿರುವ ವಿಷಯವನ್ನು ಹಾಗೂ ಸಮಾಜದಲ್ಲಿ ಪ್ರತಿಯೊಂದು ಮಹಿಳೆಯು ಕೂಡ ಆರ್ಥಿಕವಾಗಿ ಕೌಟುಂಬಿಕವಾಗಿ ಉತ್ತಮ ಬದುಕನ್ನು ಕಟ್ಟಿಕೊಳ್ಳುವ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿದರು. ಮುಖ್ಯ ಅತಿಥಿಯಾಗಿ ಆಗಮಿಸಿರುವ ಮಡಿವಾಳಪ್ಪ ವಕ್ಕುಂದು ರವರು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಲ್ಲಿ ಗ್ರಾಮೀಣ ಹಾಗೂ ನಗರ ಪ್ರದೇಶದ ಜನರಿಗೆ ಆರ್ಥಿಕವಾಗಿ ಸದೃಢರಾಗಲು ಹಾಗೂ ದೇವಸ್ಥಾನ ಜೀರ್ಣೋದ್ಧಾರ ಶಿಷ್ಯವೇತನ ನಿರ್ಗತಿಕರ ಮಾಸಾಸನ ಇನ್ನು ಹತ್ತು ಹಲವು ಕಾರ್ಯಕ್ರಮಗಳನ್ನು ಉತ್ತಮ ರೀತಿಯಲ್ಲಿ ಆಯೋಜನೆ ಮಾಡಿದ ಸಂಸ್ಥೆಯಾಗಿದೆ ಎಂದು ಹೇಳಿದರು. ಶ್ರೀ ಸತೀಶ್ ನಾಯಕ್ ಜಿಲ್ಲಾ ನಿರ್ದೇಶಕರು ಮಾತನಾಡಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬೆಳೆದು ಬಂದ ದಾರಿ ಹಾಗೂ ಯೋಜನೆಯಲ್ಲಿ ನಡೆಯುವ ಪ್ರತಿಯೊಂದು ಕಾರ್ಯಕ್ರಮಗಳ ಅನುಷ್ಠಾನವನ್ನು ಗ್ರಾಮೀಣ ಮಟ್ಟದಲ್ಲಿ ಆಯೋಜನೆ ಆಗಿರುವ ಬಗ್ಗೆ ಮಾಹಿತಿ ನೀಡಿದರು. ಶ್ರೀ ಹಸನ್ ಸಾಬ್ ರವರು ಮಾತನಾಡುತ್ತಾ ಪ್ರತಿಯೊಂದು ಹಳ್ಳಿಗಳಲ್ಲಿ ಧರ್ಮಸ್ಥಳ ಸ್ವಾಸಾಯ ಸಂಘ ಮಾಡಿ ಅನುಕೂಲತೆಗಳನ್ನು ಪಡೆದಿರುವ ಬಗ್ಗೆ ಉತ್ತಮ ಅಭಿಪ್ರಾಯ ವ್ಯಕ್ತಪಡಿಸಿ ಜನರಿಗೂ ಕೂಡ ಕ್ಷೇತ್ರದ ಬಗ್ಗೆ ಎಲ್ಲರಿಗೂ ಕಾಳಜಿ ವಹಿಸುವ ಬಗ್ಗೆ ತಿಳಿಸಿದರು. ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿದ ಪರಮಪೂಜ್ಯ ಮಡಿವಾಳ ರಾಜ ಯೋಗೇಂದ್ರ ಮಹಾಸ್ವಾಮಿಗಳು ಮಾತನಾಡುತ್ತಾ ಧರ್ಮಸ್ಥಳ ಎಂದರೆ ಆ ಸ್ಥಳದಲ್ಲಿಯೇ ಧರ್ಮ ನೆಲೆಯಾಗಿದೆ ದಾನ ಧರ್ಮ ಎಲ್ಲವೂ ಅಲ್ಲಿಂದನೆ ಹರಿದು ಬಂದಿದೆ ಜನರು ಇಷ್ಟೊಂದು ಸಬಲರಾಗಲು ಹಾಗೂ ಸದೃಢರಾಗಲು ಡಾ. ಡಿ ವೀರೇಂದ್ರ ಹೆಗ್ಗಡೆ ಅವರ ಪರಿಶ್ರಮ ಹಾಗೂ ಅವರ ಮಾರ್ಗದರ್ಶನ ಪ್ರತಿ ಹಳ್ಳಿಯ ಜನರಿಗೂ ತಲುಪಿದೆ ಆದ್ದರಿಂದ ಇಂದಿನ ದಿನ ಇಡೀ ಕರ್ನಾಟಕ ರಾಜ್ಯಾದ್ಯಂತ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಹೆಮ್ಮೆಯ ಸಂಸ್ಥೆಯಾಗಿ ಬೆಳೆದು ಬಂದಿದೆ ಮುಂದಿನ ದಿನಗಳಲ್ಲಿಯೂ ಸಹ ಯೋಜನೆ ಉತ್ತಮ ಕಾರ್ಯಗಳನ್ನು ನಡೆಸುತ್ತಾ ಸದೃಢವಾಗಿ ಬೆಳೆಯುತ್ತದೆ ಅದನ್ನು ಯಾರಿಂದಲೂ ಅಳಿಸಲು ಸಾಧ್ಯವಿಲ್ಲ ಎಂದು ಶುಭ ಆಶೀರ್ವಚನ ನುಡಿದರು. ಸದ್ರಿ ಕಾರ್ಯಕ್ರಮದಲ್ಲಿ ಸುಕನ್ಯಾ ಬಡಿಗೇರ್, ಹಾಗೂ ಅನಿತಾ ಹುಲಿಕಟ್ಟಿ ಇವರಿಗೆ ಆರೋಗ್ಯ ರಕ್ಷಾ ಕ್ಲೈಮ್ ಚೆಕ್ಕು ವಿತರಿಸಲಾಯಿತು. ಇಂದಿನ ಕಾರ್ಯಕ್ರಮದಲ್ಲಿ  ಸಂದೀಪ್ ಡಿ ತಾಲೂಕು ಯೋಜನಾಧಿಕಾರಿಗಳು, ಎಂ ಡಿ ಹಿರೇಮಠ್  ರಾಜು ಮ ಜಂಗಟಿ, ಕೃಷ್ಣ ಜಿ ಕುಲಕರಣಿ, ಗುರುಸಿದ್ದಪ್ಪ ಜಂಗಟಿ ಮಹೇಶ್ ಶೆಟ್ಟರ್ ಸೋಮಲಿಂಗಪ್ಪ ಪುರದ್ ಬಸಪ್ಪ ಪುರದ್, ಹಸನ್ ಸಾಬ್ ಅಂಬಲ್ ತಡಿ, ಹಾಗೂ ಕಿತ್ತೂರು ತಾಲೂಕಿನ ಮೇಲ್ವಿಚಾರಕ ಶ್ರೇಣಿಯ ಎಲ್ಲಾ ಸಿಬ್ಬಂದಿಗಳು ಸೇವಾ ಪ್ರತಿನಿಧಿಗಳು ಒಕ್ಕೂಟ ಪದಾಧಿಕಾರಿಗಳು ಹಾಜರಿದ್ದರು.

error: Content is protected !!