23/12/2024
IMG-20240928-WA0022

ಬೆಳಗಾವಿ-೨೮:ಶಾಸಕರ ಅನುದಾನ ಸೇರಿದಂತೆ ವಿವಿಧ ಮೂಲಗಳಿಂದ ಶಾಲೆಗಳಿಗೆ ಬರುತ್ತಿರುವ ಮೂಲಭೂತ ಸೌಕರ್ಯಗಳ ಸಮರ್ಪಕ ಉಪಯೋಗ ಮಾಡಿಕೊಳ್ಳುವುದರ ಜೊತೆಗೆ ಕಲಿಕೆಯಲ್ಲಿ ಯಾವುದೇ ಕುಂದು ಕೊರತೆ ಆಗದಂತೆ ಶಾಲೆಗಳಿಗೆ ಸೌಕರ್ಯ ಒದಗಿಸಿದಾಗ ಶಾಲೆಗಳನ್ನು ಭೌತಿಕವಾಗಿ ಸಮೃದ್ಧಗೊಳಿಸುವುದರ ಜೊತೆಗೆ ಕಲಿಕೆಗೆ ಪೂರಕ ವಾತಾವರಣ ನಿರ್ಮಿಸಬಹುದು ಎಂದು ರಂದು ಕಾಕತಿ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ಜಿಲ್ಲಾ ಆಡಳಿತ ಮತ್ತು ಬೆಳಗಾವಿ ಜಿಲ್ಲಾ ಖನಿಜ ಪ್ರತಿಷ್ಠಾನ ನಿಧಿ ಬೆಳಗಾವಿ ರವರ ಯಮಕನಮರಡಿ ಮತಕ್ಷೇತ್ರ ಶಾಸಕರ ಅನುದಾನದಡಿಯಲ್ಲಿ ವ್ಯಾಪ್ತಿಯ ಕಾಕತಿ ಸರಕಾರಿ ಪ್ರಾಥಮಿಕ ಶಾಲೆಗೆ ಮೂರು ಲಕ್ಷ ರೂಪಾಯಿ ಮೌಲ್ಯದ ಡೆಸ್ಕ್ ಗಳನ್ನು ಶಾಲೆಗೆ ವಿತರಣೆ ಮಾಡುವ ಸಮಾರಂಭದಲ್ಲಿ ಡೆಸ್ಕ್ ಗಳನ್ನು ಶಾಲೆಗೆ ವಿತರಿಸಿ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಸಿದ್ದು ಸುಣಗಾರ ಮಾತನಾಡಿದರು.

ಮಾಜಿ ತಾಲೂಕ ಪಂಚಾಯತ್ ಸದಸ್ಯ ಯಲ್ಲಪ್ಪ ಕೋಳೆಕರ ಮಾತನಾಡಿ ಯಮಕನಮರಡಿ ಮತಕ್ಷೇತ್ರದ ಹಿಂದುಳಿದ ಭಾಗದ ಅನೇಕ ಶಾಲೆಗಳಿಗೆ ತಮ್ಮ ಅನುದಾನದಡಿಯಲ್ಲಿ ಮಾನ್ಯ ಶಾಸಕರು ಮತ್ತು ಸಚಿವರಾದ ಸತೀಶ ಜಾರಕಿಹೊಳಿಯವರು ಕಳೆದ ಎರಡು ದಶಕಗಳಿಂದ ವಿಶೇಷ ಕಾಳಜಿ ವಹಿಸಿ ಅನುದಾನ ನೀಡುವುದರ ಜೊತೆಗೆ ಶಾಲೆಗಳ ಅವಶ್ಯಕತೆಗಳನ್ನು ಪೂರ್ತಿಗೊಳಿಸುವುದರ ಜೊತೆಗೆ ಮಾದರಿ ಮಾಡುವಲ್ಲಿ ಶ್ರಮಿಸುತ್ತಿದ್ದಾರೆ ಅವುಗಳ ಒಳ್ಳೆಯ ಉಪಯೋಗ ಆಗಬೇಕು ಎಂದರು. ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತಿ ಅಧ್ಯಕ್ಷೆ ವರ್ಷಾ ಮುಚ್ಚಂಡಿಕರ, ಜಂಗಲಿಸಾಬ ನಾಯಿಕ,ರೇಣುಕಾ ಕೋಳಿ, ಜಮುನಾ ಕೋಳಿ, ಕೃಷ್ಣಾ ಕುರುಬರ, ಅಶೋಕ ಖೋತ, ಶಕುಂತಲಾ ಕರಾಳೆ, ಶ್ರೀದೇವಿ ಮರಕುಂಬಿ,ವಿಜಯ ರಾಜಮನೆ ಸೇರಿದಂತೆ ಶಾಲಾ ಶಿಕ್ಷಕರು ಪಾಲಕರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು ಕಾರ್ಯಕ್ರಮದ ಆರಂಭದಲ್ಲಿ ಮುಖ್ಯ ಶಿಕ್ಷಕ ಬಿ ಎನ್ ಮಡಿವಾಳರ ಸ್ವಾಗತಿಸಿದರು ಶಿವಾನಂದ ತಲ್ಲೂರ ನಿರೂಪಿಸಿದರು ಕೊನೆಯಲ್ಲಿ ಮಹೇಶ ಅಕ್ಕಿ ವಂದಿಸಿದರು.

error: Content is protected !!