ಬೆಂಗಳೂರು/ (ಬೆಳಗಾವಿ)-೨೫: ಕರ್ನಾಟಕ ಛಾಯಾಚಿತ್ರಗ್ರಾಹಕರ ಸಂಘ (ನೋ) ಇದರ ವತಿಯಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಛಾಯಾಗ್ರಹಣದಲ್ಲಿ ಮಾಡಿರುವ ಸಾಧನೆ, ಸೇವೆ ಪರಿಗಣಿಸಿ ಬೆಳಗಾವಿಯ ಖ್ಯಾತ ಫೋಟೋಗ್ರಾಫರ್ ʻʻ ಒಮ್ಯಾಕ್ಸ್ ಡಿಜಿಟಲ್ʼʼ ಸ್ಟುಡಿಯೋ ಮಾಲೀಕರಾದ ಸತೀಶ ವಸಂತ ಶೆಟ್ಟಿ ಅವರಿಗೆ ಛಾಯಾ ಸಾಧಕ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.
ಬೆಂಗಳೂರಲ್ಲಿ ಆಯೋಜಿಸಲಾದ ಕೆ ಪಿ ಎ ಹತ್ತನೇ ಡಿಜಿ ಇಮೇಜ್ 2024 ಕಾರ್ಯಕ್ರಮದಲ್ಲಿ ಶ್ರೀಯುತ ಸತೀಶ ವಸಂತ ಶೆಟ್ಟಿ ಅವರಿಗೆ “ಛಾಯಾಸಾಧಕ” ಪ್ರಶಸ್ತಿಯನ್ನು ನೀಡಿ, ನಾಡಿನ ಸಮಸ್ತ ಛಾಯಾಗ್ರಾಹಕರ ಪರವಾಗಿ ಗೌರವ ಪೂರ್ವಕವಾಗಿ ಸನ್ಮಾನಿಸಲಾಯಿತು.
ಸತೀಶ ಶೆಟ್ಟಿ ಬೆಳಗಾವಿ ಜಿಲ್ಲೆಯ ಛಾಯಾಗ್ರಹಣ ಕ್ಷೇತ್ರದಲ್ಲಿ ಹಲವಾರು ವರ್ಷಗಳಿಂದಲೂ ವೃತ್ತಿಪರರಾಗಿ ಕಾರ್ಯನಿರ್ವಹಿಸುತ್ತಿದ್ದು, ಛಾಯಾಗ್ರಹಣದಲ್ಲಿ ಮಾಡಿರುವ ಸಾಧನೆ, ಸೇವೆಯನ್ನು ಪರಿಗಣಿಸಿ, ಕರ್ನಾಟಕ ಛಾಯಾಚಿತ್ರಗ್ರಾಹಕರ ಸಂಘದಿಂದ ಈ ಪ್ರಶಸ್ತಿ ನೀಡಲಾಗಿದೆ.
ಸತೀಶ ಅವರು ಹಲವು ದಶಕಗಳಿಂದ ಬೆಳಗಾವಿ ಸೇರಿ ಜಿಲ್ಲಾದ್ಯಂತ ಫೋಟೋಗ್ರಫಿ ಮೂಲಕ ಹೆಸರು ಮಾಡಿದವರು. ಅಲ್ಲದೆ ಕಿರುತೆರೆ ನಟ, ಸಹಾಯಕ ಕ್ಯಾಮರಾ ಮ್ಯೆನ್ ಹಾಗೂ ಸಾಮಾಜಿಕವಾಗಿ ಕೂಡ ಸೇವೆ ಸಲ್ಲಿಸುತ್ತಿದ್ದಾರೆ.
ಛಾಯಾಸಾಧಕ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿರುವ ಜಿಲ್ಲೆಯ ಹೆಮ್ಮೆಯ ಛಾಯಾಗ್ರಾಹಕ ಸತೀಶ ಶೆಟ್ಟಿಯವರಿಗೆ ಸಂಘದ ಅದ್ಯಕ್ಷರು, ಪದಾಧಿಕಾರಿಗಳು, ಬೆಳಗಾವಿ ಫೋಟೋಗ್ರಾರ್ಪ್ ಹಾಗೂ ಕುಟುಂಬದ ಎಲ್ಲ ಸದಸ್ಯರು ಅಭಿನಂದನೆ ಸಲ್ಲಿಸಿದರು.