ಬಳ್ಳಾರಿ ನಾಲಾದಿಂದ ಉದ್ಬವಿಸುವ ಸಮಸ್ಯೆಗೆ ಶೀಘ್ರವೇ ಪರಿಹಾರ: ಸಚಿವ ಸತೀಶ್ ಜಾರಕಿಹೊಳಿ
ಬೆಳಗಾವಿ-೨೫: ವಿಪರೀತ ಮಳೆ ನಡುವೆ ಸಚಿವ ಸತೀಶ ಜಾರಕಿಹೊಳಿ ಅವರು ದಾಮಣೆ ರಸ್ತೆಯ ಬಳ್ಳಾರಿ ನಾಲಾ ವೀಕ್ಷಣೆ ಮಾಡಿ, ಶಾಶ್ವತ ಪರಿಹಾರ ಕಲ್ಪಿಸುವುದಾಗಿ ಸ್ಥಳೀಯರಿಗೆ ಲೋಕೋಪಯೋಗಿ ಇಲಾಖೆ ಸಚಿವ ಸತೀಶ್ ಜಾರಕಿಹೊಳಿ ಅವರು ತಿಳಿಸಿದರು.
ಮಳೆ ಸಂದರ್ಭದಲ್ಲಿ ಪ್ರತಿ ವರ್ಷವೂ ಬಳ್ಳಾರಿ ನಾಲಾದಿಂದ ಸಮಸ್ಯೆ ಉದ್ಬವಾಗುತ್ತಿದೆ. ಇದನ್ನು ಮನಗಂಡ ಸಚಿವರು ರೈತರಿಗೆ, ಸ್ಥಳೀಯರಿಗೆ ಶಾಶ್ವತ ಪರಿಹಾರ ಕಲ್ಪಿಸಬೇಕೆಂಬ ಉದ್ದೇಶದಿಂದ ಸ್ಥಳಕ್ಕೇ ಭೇಟಿ ನೀಡಿ, ಬಳ್ಳಾರಿ ನಾಲಾದಿಂದ ಉದ್ಬವಿಸುವ ಸಮಸ್ಯೆಗಳನ್ನು ವೀಕ್ಷಣೆ ಮಾಡಿದರು. ಇದಾದ ಬಳಿಕ ಸ್ಥಳೀಯರೊಂದಿಗೆ ಚರ್ಚಿಸಿದ ಸಚಿವರು ಶೀಘ್ರವೇ ನಾಲಾದ ಅವಾಂತರ ತಪ್ಪಿಸಿ, ಸಮಸ್ಯೆ ಪರಿಹರಿಸಲಾಗುವುದು ಎಂದು ಸಚಿವ ಸತೀಶ್ ಜಾರಕಿಹೊಳಿ ಅವರು ತಿಳಿಸಿದರು.
ಮಳೆಗಾಲದಲ್ಲಿ ಅವಾಂತರ ಸೃಷ್ಟಿಸಿಯಾಗುತ್ತಿದೆ, ಬೇಸಿಗೆ ವೇಳೆ ಕೊಳಚೆ, ಪ್ಲಾಸ್ಟಿಕ್ ಕಸ ಸಮಸ್ಯೆ ಎದುರಾಗುತ್ತಿದೆ. ಪ್ರತಿ ವರ್ಷವೂ ಕೋಟ್ಯಾಂತರ ರೂ. ಖರ್ಚು ಮಾಡಿದರೂ ಯಾವುದೇ ಪ್ರಯೋಗವಾಗುತ್ತಿಲ್ಲ, ಶಾಶ್ವತ ಪರಿಹಾರ ಕಲ್ಪಿಸಿದಾಗ ಮಾತ್ರ ಮಳೆ ನೀರು ಹರಿಯುತ್ತದೆ ಎಂದು ಸಮಸ್ಯೆ ಬಗ್ಗೆ ಹರಿಸಬೇಕು ಎಂದು ಸ್ಥಳೀಯ ರೈತರು ಮನವಿ ಮಾಡಿಕೊಂಡರು.
ಈ ವೇಳೆ ಸಚಿವ ಸತೀಶ್ ಜಾರಕಿಹೊಳಿ ಮಾತನಾಡಿ, ಬಳ್ಳಾರಿ ನಾಲಾ ಸಮಸ್ಯೆಗೆ ಶಾಶ್ವತ ಪರಿಹಾರಕ್ಕಾಗಿ ಸ್ಥಳೀಯರೊಂದಿಗೆ ಸಭೆ ನಡೆಸಿ, ವಿಸ್ತೃತವಾಗಿ ಚರ್ಚಿಸಿ ಯೋಜನಾ ವರದಿಯನ್ನು ಸಿದ್ಧಪಡಿಸಲಾಗುವುದು ಎಂದು ತಿಳಿದರು.
ಬಳ್ಳಾರಿ ನಾಲಾ ಅಗಲೀಕರಣ ಮಾಡುವ ಒತ್ತಾಯ ಇದೆ. ರೈತರಿಗೆ ಶಾಶ್ವತ ಪರಿಹಾರ ಕಲ್ಪಿಸಲು ದೊಡ್ಡ ಮೊತ್ತದ ಅನುದಾನದ ಅವಶ್ಯವಿದೆ. ಶೀಘ್ರವೇ ಕ್ರಮ ಕೈಗೊಂಡು ಶಾಶ್ವತ ಪರಿಹಾರ ಕಲ್ಪಿಸಲಾವುದು ಎಂದು ತಿಳಿಸಿದರು.