ಬೆಳಗಾವಿ-೨೨:-ಬೆಳಗಾವಿ ನಗರದ ಕೇವ್ಲರಿ ಕರ್ನಾಟಕ ನಿವೃತ್ತ ಸರ್ವ ಯೋಧರು ಹಾಗೂ ಮಾಜಿ ಸೈನಿಕರ ಸಂಘದಿಂದ ಬೆಳಗಾವಿ ನಗರದಲ್ಲಿ 2024-ವಾರ್ಷಿಕ ಸಭೆ ಆಯೋಜನೆ ಮಾಡಲಾಗಿತ್ತು.
ಭಾನುವಾರ ನಗರದಲ್ಲಿ ಆಯೋಜನೆ ಮಾಡಲಾಗಿದ್ದ ಈ ಕಾರ್ಯಕ್ರಮವನ್ನು ಪ್ರಾರ್ಥನೆಯೊಂದಿಗೆ ಚಾಲನೆ ನೀಡಲಾಯಿತು. ಕಾರ್ಯಕ್ರಮದ ಆರಂಭದಲ್ಲಿ ವೀರ ಯೋಧರಿಗೆ ಪುಷ್ಪಾರ್ಚನೆ ಮಾಡಲಾಯಿತು. ಹಾಗೂ ವೀರ ನಾರಿಯರಿಗೆ ಸನ್ಮಾನಿಸಲಾಯಿತು.
ಬಳಿಕ ಇತ್ತಿಚಿಗೆ ನಿವೃತ್ತಿ ಹೊಂದಿದ ಸೈನಿಕರಾದ ಕೃಷ್ಣ ರಾನಡೆ, ಸಂತೋಷ ಪೂಜಾರ, ನಂದೇಶ ಕಾಡಗಿ, ಸಂಜಯ ಪಂಡಾರೆ, ಫಕಿರಪ್ಪ ಕುರಿ, ರಂಗಪ್ಪ ಮಂದರಿ, ನಿಂಗಪ್ಪ ಮಾಲಾಪುರ, ರಾಜೇಂದ್ರ ಗೌಸ್ ಅವರಗೆ ವೇದಿಕೆ ಪರವಾಗಿ ಸನ್ಮಾನಿಸಲಾಯಿತು.
ಈ ವೇಳೆ ಮುಖ್ಯ ಅತಿಥಿಗಳಾಗಿ ಅಧ್ಯಕ್ಷ ರಾದ ಕೆ.ಎ. ಕುಶಾಲಪ್ಪ,ಎಸ್ ಆರ್ ಪಾಟೀಲ್, ಜಗದೀಶ್ ಪಾಟೀಲ್, ಅಶ್ವತ ನಾರಾಯಣ, ಪ್ರಕಾಶ ಕಟ್ಟಿ, ಬಾಬು ಶಿಂಗೆ, ವಿ. ಡಿ ವಿತ್ರಾ, ಕಾರ್ಯಕ್ರಮದ ಮುಖ್ಯ ಸಂಚಾಲಕರು ಸುನೀಲ ದರಬಾರ, ಸಹ ಸಂಚಾಲಕರಾದ ಜ್ಯೋತಿವಾ ಕೇದಾರಿ, ನಾಗಪ್ಪ ಸಿ ಕೆ ಸೇರಿದಂತೆ ಅನೇಕರು ಹಾಜರಿದ್ದರು.