23/12/2024
IMG-20240922-WA0001

ನೇಸರಗಿ-೨೨:ಇಲ್ಲಿನ ಗ್ರಾಮ ಪಂಚಾಯತ ಅಧ್ಯಕ್ಷರಾಗಿದ್ದ ದಿ. ನಿಂಗಪ್ಪ ಮಾಳಣ್ಣವರ ಅವರ ಆದರ್ಶ ಜೀವನ, ಜನಪರ ಕಾಳಜಿ, ಸೀದಾ ಸಾದಾ ವ್ಯಕಿತ್ವ, ಬಡವರಿಗೆ ಸಹಾಯ ಸಹಕಾರ, ಮಠ, ಮಂದಿರಗಳಿಗೆ ಸಹಾಯ ಹಸ್ತ, ನಮ್ಮಗೆಲ್ಲರಿಗೆ ಒಳ್ಳೆಯ ಮಾರ್ಗದರ್ಶನ ಅವರ ಆದರ್ಶಕ್ಕೆ ಅವರ ಅಂತಿಮ ಸಂಸ್ಕಾರಕ್ಕೆ ಸೇರಿದ ಜನಸಾಗರವೇ ಸಾಕ್ಷಿ ಎಂದು ಯುವ ಮುಖಂಡ ಸಚಿನ ಪಾಟೀಲ ಹೇಳಿದರು.
ಭಾನುವಾರ ದಂದು ಗ್ರಾಮದಲ್ಲಿ ಅವರ ಆಪ್ತ ಬಳಗ ಹಾಗೂ ಅಭಿಮಾನಿಗಳಿಂದ ಆಯೋಜಿಸಲಾಗಿದ್ದ ಇತ್ತೀಚಿಗೆ ನಿಧನರಾದ ಇಲ್ಲಿನ ಗ್ರಾಮ ಪಂಚಾಯತ ಅಧ್ಯಕ್ಷರಾದ ನಿಂಗಪ್ಪ ಮಾಳಣ್ಣವರ ಅವರ ಶ್ರದ್ದಾಂಜಲಿ ಸಭೆಯಲ್ಲಿ ಮಾತನಾಡಿದರು.
ಸಭೆಯಲ್ಲಿ ಡಾ. ಗಂಗಾಧರ ಕಾರಾoವಿ ಮಾತನಾಡಿ ನಿಂಗಪ್ಪಣ್ಣ ಅವರ ಗುಣ ಪುರದ ಪುಣ್ಯo ಪುರುಷ ರೂಪಿಂದೆ ಪೋಗುತ್ತಿದೆ ಅಂದರೆ ಇಡೀ ಊರಿನ ಪುಣ್ಯ ಆತನ ಹಿಂಬಾಲಿಸಿ ಹೋಗುತ್ತಿದೆ ಎಂಬಂತಾಗಿದೆ ಎಂದರು.
ಡಾ. ಪ್ರಕಾಶ ಹಲ್ಯಾಳ ಮಾತನಾಡಿ ನಿಂಗಪ್ಪ ಅಣ್ಣಾ ನನಗೆ ಕಡು ಬಡವರಿಗೆ ಉಚಿತ ಚಿಕಿತ್ಸೆ ನೀಡಿ, ನಮ್ಮ ಕುಟುಂಬದ ಕಡೆ ಗಮನ ಹರಿಸಿ,ಸಾಮಾಜಿಕ ಕಾರ್ಯ ಮಾಡಿ ಎಂದು ಕಿವಿಮಾತು ಹೇಳಿದ್ದರು ಎಂದರು.
ಸಲೀಮ್ ಶಾ ನದಾಫ ಮಾತನಾಡಿ ನಮ್ಮ ಮನೆಯವರು ತೀರಿಹೋದಾಗ ಆಗದಷ್ಟು ದುಃಖ ನನಗಾಗಿದೆ ನನಗೆ ತಮ್ಮನ ಸ್ಥಾನ ನೀಡಿದ್ದರು ಎಂದು ದುಃಖದಿಂದ ಹೇಳಿದರು.
ಸಭೆಯಲ್ಲಿ ಮಾಜಿ ಎಪಿಎಂಸಿ ಅಧ್ಯಕ್ಷ ಬರಮಣ್ಣ ಸತ್ತೇನ್ನವರ, ಮಾಜಿ ಜಿ ಪಂ. ಸದಸ್ಯ ನಿಂಗಪ್ಪ ಅರಿಕೇರಿ, ಮಲ್ಲೇಶಪ್ಪ ಮಾಳಣ್ಣವರ, ಬಸವರಾಜ ಹಿರೇಮಠ,ಡಿ ಎಸ್ ಎಸ್ ರಾಜ್ಯಾಧ್ಯಕ್ಷ ಸುರೇಶ ರಾಯಪ್ಪಗೋಳ ದಿವಂಗತ ನಿಂಗಪ್ಪ ಅವರು ಮಾಡಿದ ಸತ್ಕಾರ್ಯಗಳ ಬಗ್ಗೆ ಮಾತನಾಡಿದರು.
ಸಭೆಯಲ್ಲಿ ಹಿರಿಯರಾದ ಕೆಂಚಪ್ಪ ಕಳ್ಳಿಬಡ್ಡಿ,ಅಡಿವೆಪ್ಪ ಮಾಳಣ್ಣವರ, ಎಮ್ ಟಿ. ಪಾಟೀಲ, ಬಾಳಪ್ಪ ಮಾಳಗಿ, ಸೋಮನಗೌಡ ಪಾಟೀಲ,ಮಲ್ಲಾಪುರ ಗ್ರಾ ಪಂ ಅಧ್ಯಕ್ಷ ಅಶೋಕ ವಕ್ಕುಂದ, ಅಶೋಕ ಹತ್ತರಗಿ, ಮಲ್ಲಿಕಾರ್ಜುನ ಕಲ್ಲೋಳಿ, ಮಂಜುನಾಥ್ ಹುಲಮನಿ, ನಿಂಗಪ್ಪ ತಳವಾರ,ದೇಮಣ್ಣ ಗುಜನಟ್ಟಿ,ಮಹಾಂತೇಶ ಸತ್ತಿಗೇರಿ, ಗುರು ತುಬಚಿ, ಈಶ್ವರ ಚೋಭಾರಿ,ಸೋಮಶೇಖರ ಮಾಳಣ್ಣವರ, ಯಮನಪ್ಪ ಪೂಜೇರಿ , ಪ್ರಕಾಶ ತೋಟಗಿ, ವೀರಭದ್ರ ಚೋಭಾರಿ, ವಿಷ್ಣು ಮೂಲಿಮನಿ, ಸತ್ತಾರ ಮೂಕಾಶಿ, ಮಕಬುಲ್ ಬೇಫಾರಿ, ಮಹಾದೇವ ನಾಶಿ,ಸಂತೋಷ ಪಾಟೀಲ,ಸಿದ್ದಯ್ಯ ಚರಂತಿಮಠ, ಮಹಾಂತೇಶ ಚರಂತಿಮಠ, ಅನ್ವರ ಬಳಿಗಾರ, ಯಲ್ಲಪ್ಪ ರೊಟ್ಟಿ, ಸಿದ್ದಿಕ್ ಬಾಗವಾನ ಸೇರಿದಂತೆ ಪಂಚಾಯತ ಸದಸ್ಯರು, ಸಿಬ್ಬಂದಿ, ನೇಸರಗಿ ಹಾಗೂ ಸುತ್ತಮುತ್ತಲಿನ ಗ್ರಾಮಗಳ ಮುಖಂಡರು,ಎಲ್ಲ ಸಮಾಜದ ಹಿರಿಯರು,ಗ್ರಾಮಸ್ಥರು ಭಾಗವಹಿಸಿದ್ದರು. ರಾಜು ಗೆಜ್ಜಿ ಗುರುಗಳು ದಿ. ನಿಂಗಪ್ಪಣ್ಣ ಅವರ ಗುಣಗಳ ಬಗ್ಗೆ ವಚನಗಳ ಮೂಲಕ ಅರ್ಥಪೂರ್ಣ ನಿರೂಪಣೆ ನೆರವೇರಿಸಿದರು.

error: Content is protected !!