ಅಂಕಲಗಿ-೨೦:ನಾವು ನಿಸ್ವಾರ್ಥದಿಂದ, ವಿಧೇಯರಾಗಿ ಸಮಾಜಮುಖಿ ಕಾರ್ಯಕ್ಕೆ ತೊಡಗಿದಾಗ ಸಮಾಜದ ಗೌರವ,ಮಾನ, ಸನ್ಮಾನಗಳು ನಮ್ಮತ್ತ ಬರುತ್ತವೆ. ಪ್ರಹ್ಲಾದ ಹೊಳೆಯಾಚಿ ಅವರ ನಿಸ್ವಾರ್ಥ ಸೇವೆಯೇ ಅವರ ಈ ಗೌರವಕ್ಕೆ
ಭಾಜನರಾದದ್ದು ಎಂದು ಅಕ್ಕತಂಗೇರಹಾಳ ರಾಷ್ಟ್ರಪ್ರಶಸ್ತಿ ಪುರಸ್ಕ್ರತ ಬಸಪ್ಪಾ ಉರಬಿನಹಟ್ಟಿ ಹೇಳಿದರು.
ಅವರು ಬುಧವಾರ ಬೆಳಗಾವಿ ರಾಮತೀರ್ಥ ನಗರದ ಕಾರ್ಯಸಿದ್ಧಿ ಆಂಜನೇಯ ದೇವಸ್ಥಾನ ಕಮಿಟಿ ಪರ ಹಮ್ಮಿಕೊಂಡ ರುಕ್ಮಿಣಿ ನಗರದ ವಿರಾಟ ಕಾರ್ ಸೇಲ್ಸ್ ನ ವ್ಯವಸ್ಥಾಪಕರಾದ ಪ್ರಹ್ಲಾದ ಹೊಳೆಯಾಚಿ ಅವರ ಅಭಿನಂದನ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು, ಸನ್ಮಾನ ಮಾಡಿ ಮಾತನಾಡಿದರು. ನಮ್ಮಲ್ಲಿ ಹುಮ್ಮಸ್ಸು, , ತಾಳ್ಮೆ, ಸಹನೆ, ಛಲ ,ಇವುಗಳಿದ್ದರೆ ಮಾತ್ರ ಸಾಧನೆಗಳ ಮೆಟ್ಟಿಲೇರಲು ಸಾಧ್ಯ. ನಮಗಿರುವ ಗಳಿಗೆ ಪ್ರತಿಕ್ಷಣಕ್ಕೂ ನಮ್ಮಿಂದ ಜಾರುತ್ತಲೇ ಇರುತ್ತವೆ. ಗಳಿಗೆ ನಮ್ಮಲ್ಲಿದ್ದಾಗ ಸಮಾಜದ ಸೇವೆಗೆ ನಿಲ್ಲಬೇಕು , ಜನ್ಮ ಸಾರ್ಥಕಕ್ಕೆ ಮುಂದಾಗಬೇಕು ಎಂದರು. ಪ್ರಹ್ಲಾದ ಅವರು ತಮ್ಮ ಜೀವನದ ಪ್ರತಿ ಕ್ಷಣಗಳನ್ನು ಅರ್ಥಪೂರ್ಣವಾಗಿ ಬಳಸಿಕೊಂಡು, ಆಸಂಖ್ಯಾತ ವಿದ್ಯಾರ್ಥಿಗಳಿಗೆ ವಿದ್ಯಾ ದಾನ ಮಾಡಿ ಬದುಕನ್ನು ಶ್ರೀಮಂತಗೊಳಿಸಿದ್ದಲ್ಲದೆ, ಸಮಾಜದ ಪ್ರತಿಯೊಬ್ಬರ ಪ್ರೀತಿ, ವಿಶ್ವಾಸ ಗಳಿಸಿದವರು. ಇಂಥವರು ಎಲ್ಲಿದ್ದರೂ ಮಹಾನ್ ಸಾಧಕರು ಎಂದರಲ್ಲದೆ ,ಪ್ರಹ್ಲಾದ ಅವರನ್ನು ಕಮಿಟಿ ಪರ ಸನ್ಮಾನಿಸಿ ಗೌರವಿಸಿದರು.
ಇನ್ನೋರ್ವ ಅತಿಥಿಯಾಗಿದ್ದ ಮಾಜಿ ಮಹಾಪೌರ ಎನ್ ಬಿ ನಿರ್ವಾಣಿ ಮಾತನಾಡಿ, ನಾವು ನಮಗೆ ಬಿಡುವಿದ್ದಾಗ ಮನೆಯಲ್ಲಿ ಕುಳಿತು ಕಾಲಹರಣ ಮಾಡದೇ ಸಮಾಜದ ಕಾರ್ಯಕ್ಕೆ ಮುಂದಾಗಬೇಕೆಂದರು.
ಅತಿಥಿಗಳಾಗಿ ಪಾಲ್ಗೊಂಡಿದ್ದ ಬುಡಾ ನಿವ್ರತ್ತ ಮುಖ್ಯ ಅಭಿಯಂತರರಾದ ಜಿ.ಎಸ್.ಪಾಟೀಲ ಮತ್ತು ನ್ಯಾಯವಾದಿ ಮೋಹನ ಮಾವಿನಕಟ್ಟಿ ಪ್ರಹ್ಲಾದ ಅವರ ಸಾಧನೆ ಕುರಿತು ಪ್ರಶಂಸಿಸಿದರು.
ವೇದಿಕೆ ಗಣ್ಯರೊಂದಿಗೆ
ಕಮಿಟಿ ಸದಸ್ಯರು ಪ್ರಹ್ಲಾದ ಅವರನ್ನು ಸನ್ಮಾನಿಸಿ ಗೌರವಿಸಿದರು.
ಸನ್ಮಾನಕ್ಕುತ್ತರವಾಗಿ ಮಾತನಾಡಿದ ಪ್ರಹ್ಲಾದ ಅವರು ದೇವಸ್ಥಾನದ ಅಭಿವ್ರದ್ಧಿಗೆ ಶ್ರಮಿಸುವದಾಗಿ ಹೇಳಿದರು.
ಕಾರ್ಯಕ್ರಮದಲ್ಲಿ ಬಸಗೌಡ ಪಾಟೀಲ, ಎಸ್.ಎಲ್ ಸನದಿ, ಮಲ್ಹಾರ್ ದೀಕ್ಷಿತ, ಕ್ರಷ್ಣಾ ಪಾಟೀಲ, ಕಲ್ಲಪ್ಪ ಮಜಲಟ್ಟಿ, ಮಹೇಶ ಚಿಟಗಿ, ಆನಂದ ಹಣ್ಣಿಕೇರಿ, ಐ.ಬಿ.ನಿರ್ವಾಣಿ, ಬಸವರಾಜ ಗೌಡರ, ಚೆಳಗೇರಿ, ಬಸವರಾಜ ಹಿರೇಮಠ, ಎಸ್.ಸಿ.ಕಮತ್,
ಮಲ್ಲಪ್ಪ ದಂಡಿನವರ, ಸಿ.ಎಸ್.ಖನಗನ್ನಿ ಸೇರಿದಂತೆ ಅಭಿಮಾನಿಗಳು, ಹಿರಿಯರು ಉಪಸ್ಥಿತರಿದ್ದರು. ಕಾರ್ಯಸಿದ್ದಿ ಆಂಜನೇಯ ದೇವಸ್ಥಾನದ ಪ್ರಧಾನ ಆರ್ಚಕರಾದ ವೇದಮೂರ್ಥಿ ಸಿದ್ದಬಸಯ್ಯಾ ಹಿರೇಮಠ ಸ್ವಾಗತಿಸಿ ವಂದರ್ಪಣೆ ಮಾಡಿದರು.