ಬೆಳಗಾವಿ-೨೦:ಲಘು ಉದ್ಯೋಗ ಭಾರತಿ ಮಹಿಳಾ ಘಟಕ ಬೆಳಗಾವಿ ಹಾಗೂ ಪರಿಸರ ಮಾಲಿನ್ಯ ರೀಜಿನಲ್ ಆಫೀಸ್ ಬೆಳಗಾವಿ ಇವರ ಸಯುಕ್ತ ಆಶ್ರಯದಲ್ಲಿ ಮಹಿಳೆಯರಿಗಾಗಿ ಉಚಿತ ಹತ್ತಿ ಬಟ್ಟೆಯ ಬ್ಯಾಗ್ ತಯಾರಿಕೆಯ ಎರಡು ದಿನಗಳ ಕಾರ್ಯಗಾರವನ್ನು ಹಮ್ಮಿಕೊಳ್ಳಲಾಗಿದೆ. ಈ ಕಾರ್ಯಗಾರವು ಉತ್ತರಾಧಿ ಮಠ, ಆಚಾರ್ಯಿ ಗಲ್ಲಿ ಶಹಾಪುರ್ ಬೆಳಗಾವಿಯಲ್ಲಿ ಮತ್ತು ಈ ಕಾರ್ಯಕ್ರಮದ ಉದ್ಘಾಟಕರಾಗಿ ಶ್ರೀಯುತ ಗೋಪಾಲಕೃಷ್ಣ ಸೀನಿಯರ್ ಎನ್ವಿರಾನ್ಮೆಂಟ್ ಆಫೀಸರ್ ಬೆಳಗಾವಿ ಇವರು ಆಗಮಿಸಿದ್ದರು ಸಭೆಯನ್ನು ಉದ್ದೇಶಿಸಿ ಪರಿಸರದಲ್ಲಿ ಕಸ ಮತ್ತು ಪ್ಲಾಸ್ಟಿಕ್ ಬಳಕೆಯಿಂದ ಆಗುವ ದುಷ್ಪರಿಣಾಮದ ಬಗ್ಗೆ ಮನವರಿಕೆ ಮಾಡಿಕೊಟ್ಟರು ಕಸದಿಂದ ರಸ ಮಾಡುವ ಹೊಸ ಹೊಸ ಯೋಜನೆಗಳಿಗೆ ಪ್ರೋತ್ಸಾಹ ನೀಡುವುದಾಗಿ ತಿಳಿಸಿದರು.
ಡಾಕ್ಟರ್ ಪ್ರಿಯಾ ಪುರಾಣಿಕ ರಾಜ್ಯ ಕಾರ್ಯದರ್ಶಿ ಹಾಗೂ ರಾಜ್ಯ ಮಹಿಳಾ ಪ್ರಮುಖ ಲಘು ಉದ್ಯಮ ಭಾರತಿ ಕರ್ನಾಟಕ ಇವರು ಸ್ವಾಗತಿಸಿ ಲಘು ಉದ್ಯಮ ಭಾರತೀಯ ಕಾರ್ಯವೈಖರಿಯ ಬಗ್ಗೆ ತಿಳಿಸಿಕೊಟ್ಟರು.
ಡಾಕ್ಟರ್ ಸಚ್ಚಿನ್ ಸಭನಿಸ್ ರಾಜ್ಯ ಅಧ್ಯಕ್ಷರು ಲಘು ಉದ್ಯೋಗ ಭಾರತಿ ಕರ್ನಾಟಕ ಇವರು ಮಹಿಳೆಯರನ್ನು ಉದ್ದೇಶಿಸಿ ಲಘು ಉದ್ಯಮ ಭಾರತಿ ಯಾವತ್ತೂ ತಮ್ಮಂದಿಗಿದೆ ಎಂದು ಹೇಳಿದರು.
ಶ್ರೀಮತಿ ದೀಪಾ, ಶ್ರೀಮತಿ ಶಶಿ ಶ್ರೀಮತಿ ರೂಪ, ವೀಣಾ, ಅಶ್ವಿನಿ ,ಸವಿತಾ, ಸಂಗೀತಾ ಇವರೆಲ್ಲರೂ ತಮ್ಮ ಅನಿಸಿಕೆಯನ್ನು ಹಂಚಿಕೊಂಡರು.
ನಳಿನಿ ವಿಮೋಲ್ಕರ್ ಮಹಿಳಾ ಲಘು ಉದ್ಯಮ ಭಾರತಿ ವಿಭಾಗ ಅಧ್ಯಕ್ಷರು ಬೆಳಗಾವಿ ವಂದನಾರ್ಪಣೆ ಮಾಡಿದರು. ಈ ಕಾರ್ಯಗಾರವು ನಾಳೆಯೂ ಮುಂದುವರೆಯುತ್ತದೆ.