ಬೈಲಹೊಂಗಲ-೧೫ : ನಗರದ (ಸೋಮವಾರ ಪೇಟೆ) ಗಜಾನನ ಉತ್ಸವ ಸಮಿತಿಯವರು ಆಯೋಜಿಸಿದ್ದ “ಪ್ರಧಾನ ಮಂತ್ರಿ ರಸಪ್ರಶ್ನೆ” ಕಾರ್ಯಕ್ರಮವನ್ನು ಪೌರ ಕಾರ್ಮಿಕರಾದ ಮಡ್ಡೆಪ್ಪ ಭರಮಣ್ಣವರ, ಮಾಜಿ ಸೈನಿಕರಾದ ಸಂಗಮೇಶ ರೇಶ್ಮಿ,ಚಂದ್ರಪ್ಪಾ ಬಡ್ಲಿ ಅವರು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.ನಂತರ ಯುವ ಮುಖಂಡ ಪ್ರಶಾಂತ ಅಮ್ಮಿನಭಾವಿ ಮಾತನಾಡಿ ರಸಪ್ರಶ್ನೆ ಕಾರ್ಯಕ್ರಮದ ಆಯೋಜನೆ ವಿದ್ಯಾರ್ಥಿಗಳ ಜ್ಞಾನ, ಬುದ್ಧಿಶಕ್ತಿ ವೃದ್ಧಿಗೆ ಸಹಕಾರಿ.ಬರುವಂತಹ ದಿನಗಳಲ್ಲಿ ನಗರದಲ್ಲಿ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಇನ್ನೂ ಹೆಚ್ಚು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಪ್ರೇರಣೆಯಾಗಿದೆ ಎಂದು ಹೇಳಿದರು.ನಂತರ ಗಿರೀಶ್ ಹರಕುಣಿ ಹಾಗೂ ರಿತೇಶ್ ಪಾಟೀಲ್ ಮಾತನಾಡಿ ಗಜಾನನ ಸಮಿತಿ ವತಿಯಿಂದ ನಡೆದ ಈ ಕಾರ್ಯಕ್ರಮ ವರ್ಷಕ್ಕೊಮ್ಮೆ ಅಷ್ಟೇ ಸೀಮಿತವಾಗದೇ ಪ್ರತಿ ತಿಂಗಳು ತಾಲೂಕಿನ ನಾನಾ ಭಾಗಗಳಲ್ಲಿ ಆಯೋಜನೆ ಮಾಡಲಾಗುವುದು ಎಂದು ಹೇಳಿದರು.ನಂತರ ರಸಪ್ರಶ್ನೆ ಕಾರ್ಯಕ್ರಮದಲ್ಲಿ 20 ತಂಡಗಳು ಭಾಗವಹಿಸಿದ್ದವು. ಪ್ರಥಮ ಸ್ಥಾನವನ್ನು ಎಸ್.ಜಿ.ವಿ ನೊಬೆಲ್ ಪಿ.ಯು ಕಾಲೇಜ್, ದ್ವಿತೀಯ ಸ್ಥಾನ ಬಿ.ಬಿ.ಗಣಾಚಾರಿ ಶಾಲೆ, ತೃತೀಯ ಸ್ಥಾನವನ್ನು ಲಿಟಲ್ ಹಾರ್ಟ್ಸ್ ಶಾಲೆ ಪಡೆದುಕೊಂಡವು.ಈ ಸಂದರ್ಭದಲ್ಲಿ ಪ್ರವೀಣ್ ಶಿಂಗಾರಿ,ಮಹಾನಿಂಗ ಬಂಡಿವಡ್ಡರ, ಅಭಿಷೇಕ ಕುಲಕರ್ಣಿ,ಬಾಬು ಬಡ್ಲಿ, ರಾಜು ತಂಬಾಕದ,ಸಚಿನ್ ಕಡಿ, ವಿಜಯ ತಿವಾರಿ, ಅಭಿಷೇಕ ಹಡಪದ,ಶಂಕರ್ ಸಾಲೋಟಗಿ, ಅಪ್ಪಣ್ಣ ಹಡಪದ ಹಾಗೂ ವಿವಿಧ ಶಾಲೆಗಳ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಹಾಜರಿದ್ದರು.