ಚಾಮರಾಜನಗರ-೧೫: ಬಡಜನರ ಅಭಿವೃದ್ದಿಗೆ ಸಹಕಾರಿ ಸಂಘಗಳ ಪಾತ್ರಗಳು ಬಹಳಷ್ಟು ಇದೆ. ಸಹಕಾರಿ ಸಂಘಗಳ ಸಹಾಯದಿಂದ ಹಲವಾರು ಕುಟುಂಬಗಳು ಉತ್ತಮ ಜೀವನ ನಡೆಸುತ್ತಿದೆ ಎಂದು ಸಂಗಮ ಸೌಹಾರ್ದ ಸಹಕಾರಿ ಸಂಘ ನಿಯಮಿತ ಅಧ್ಯಕ್ಷ ವೈ.ಎಸ್.ರಾಘವೇಂದ್ರ ತಿಳಿಸಿದರು
ಜೋಡಿರಸ್ತೆಯಲ್ಲಿ ಇರುವ ರೋಟರಿಭವನದಲ್ಲಿ ಸೌಹಾರ್ದ ಸಹಕಾರಿ ಸಂಘ ನಿಯಮಿತದ ೯ನೇ ವರ್ಷದ ವಾರ್ಷಿಕೋತ್ಸದ ಕಾರ್ಯಕ್ರಮವನ್ನು ಜ್ಯೋತಿ ಬೆಳಗಿಸಿ ಮಾತನಾಡಿದರು. ನಮ್ಮ ದೇಶ ಸರ್ವ ಜನಾಂಗದ ಶಾಂತಿಯ ತೋಟವಾಗಿದೆ. ಬಾಬಾ ಸಾಹೇಭ್ ಅಂಬೇಡ್ಕರ್ ರವರು ಬರೆದಿರುವ ಸಂವಿಧಾನ ನಮ್ಮ ದೇಶದ ಗ್ರಂಥವಾಗಿದೆ ಎಂದು ಹೇಳಿದರು.
ನಮ್ಮ ದೇಶದ ಪ್ರಜಾಪ್ರಭುತ್ವ ದಿನದಂದು ಸೌಹಾರ್ಧ ಸಹಕಾರಿಯು ೯ನೇ ವಾರ್ಷಿಕೋತ್ಸವವನ್ನು ಆಚರಣೆ ಮಾಡುತ್ತಿರುವುದು ಸಂತೋಷದ ವಿಷಯ ಎಂದು ಹೇಳಿದರು. ಅಂತರ ರಾಷ್ಟ್ರೀಯ ಪ್ರಜಾಪ್ರಭುತ್ವದ ದಿನದ ಅಂಗವಾಗಿ ಸಂವಿಧಾನದ ಅಂಶಗಳನ್ನು ಓದುವುದರ ಕಾರ್ಯಕ್ರಮಕ್ಕೆ ಮೆರಗು ನೀಡಿದೆ. ಸೌಹಾರ್ಧ ಸಹಕಾರ ಸಂಘವು ಜಿಲ್ಲೆಯಲ್ಲಿ ಮಾದರಿಯಾಗಿ ಸಾರ್ವಜನಿಕರ ಸೇವೆ ಮಾಡುತ್ತಿದೆ. ಎಲ್ಲಾ ಸದಸ್ಯರ ಬೆಂಬಲ ಇದೆ. ಒಂದು ಸಹಕಾರ ಸಂಘವು ಬೆಳೆಯ ಬೇಕಾದರೆ ಪ್ರತಿಯೊಬ್ಬರು ಕೈ ಜೋಡಿಸಿದರೆ ಮಾತ್ರ ಎತ್ತರಕ್ಕೆ ಹೋಗಲು ಸಾಧ್ಯ ಎಂದು ಹೇಳಿದರು.
ಈ ಸಂದರ್ಭದಲ್ಲಿ ಉಪಾಧ್ಯಕ್ಷರಾದ ಚಂದ್ರಶೇಖರ್.ಸಿ.ಆರ್ ನಿರ್ದೇಶಕರುಗಳಾದ ವಿಶ್ವನಾಥ್.ಎನ್, ಪ್ರಭುಸ್ವಾಮಿ.ಸಿ.ಕೆ, ಲತಾ, ಪ್ರೇಮ, ನಳಿನಿ, ಹಾಗೂ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ರಮ್ಯ ಹೆಚ್.ಎಸ್, ಖಜಾಂಚಿ ಲಾವಣ್ಯ ಉಪಸ್ಥಿತಿರಿದ್ದರು.