ಕೌಜಲಗಿ-೧೫ : ಪಟ್ಟಣದ ಕರ್ನಾಟಕ ಪಬ್ಲಿಕ್ ಶಾಲೆ ಹೆಣ್ಣು ಮಕ್ಕಳ ವಿಭಾಗದ ಪ್ರಧಾನ ಶಿಕ್ಷಕ ಅಶೋಕ್ ದಳವಾಯಿಗೆ ರಾಜ್ಯಮಟ್ಟದ 2024 ನೇ ಸಾಲಿನ ಗುರು ಶ್ರೇಷ್ಠ ಪ್ರಶಸ್ತಿ ದೊರೆತಿದೆ.
ಬೆಂಗಳೂರಿನ ಪ್ರೆಸ್ ಕ್ಲಬ್ ಮತ್ತು ಡಾಕ್ಟರ್ ಸರ್ವಪಲ್ಲಿ ರಾಧಾಕೃಷ್ಣನ್ ಶಿಕ್ಷಣ ಪರಿಷತ್ ಆಶ್ರಯದಲ್ಲಿ ಶುಕ್ರವಾರದಂದು ಜರುಗಿದ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ದಳವಾಯಿಗೆ ಅವರ ಶೈಕ್ಷಣಿಕ ಸಾಧನೆ ಮತ್ತು ನಿರ್ಗ 30 ವರ್ಷಗಳ ಸೇವಾನುಭವವನ್ನು ಗುರುತಿಸಿ ರಾಜ್ಯಮಟ್ಟದ ಗುರು ಶ್ರೇಷ್ಠ ಪ್ರಶಸ್ತಿಯನ್ನು ನೀಡಲಾಗಿದೆ. ಪ್ರಶಸ್ತಿಯನ್ನು ನಾಡಿನ ಖ್ಯಾತ ನಾಟಕಕಾರ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿ ಡಾಕ್ಟರ್ ಚಂದ್ರಶೇಖರ್ ಕಂಬಾರ, ನ್ಯಾಯವಾದಿ ಜೈನ್ ಅವರು ಪ್ರಧಾನ ಮಾಡಿದರು.
ಈ ಸಂದರ್ಭದಲ್ಲಿ ಬೆಂಗಳೂರಿನ ಪ್ಲಸ್ ಕ್ಲಬ್ ನ ಪದಾಧಿಕಾರಿಗಳು ಮತ್ತು ಡಾಕ್ಟರ್ ಸರ್ವಪಲ್ಲಿ ರಾಧಾಕೃಷ್ಣನ್ ಶಿಕ್ಷಣ ಪರಿಷತ್ತಿನ ಪದಾಧಿಕಾರಿಗಳು ಉಪಸ್ಥಿತರಿದ್ದರು. ಶಿಕ್ಷಕ ಅಶೋಕ ದಳವಾಯಿ ಅವರನ್ನು ಶಾಲೆಯ ಎಸ್ ಡಿ ಎಂ ಸಿ ಪದಾಧಿಕಾರಿಗಳು ಶಿಕ್ಷಕ ಸಿಬ್ಬಂದಿ ಹಾರೈಸಿದ್ದಾರೆ.